ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಾಣಿಗಳ ವಿಜ್ಞಾನ ಮೇಳ

Last Updated 4 ಫೆಬ್ರುವರಿ 2012, 4:55 IST
ಅಕ್ಷರ ಗಾತ್ರ

ಕ್ಯಾಂಪಾಸ್ ಕಲರವ

ಇಂಡಿಯ ಕರ್ನಾಟಕ ವಿದ್ಯಾ ವರ್ಧಕ ಸಂಘದ ಕರ್ನಾಟಕ ಪ್ರಾಥಮಿಕ ಶಾಲೆಯ ಪುಟಾಣಿಗಳು ತಮ್ಮ ವಿಜ್ಞಾನ ಪಠ್ಯ ಕ್ರಮದ ಎಲ್ಲ ಪಾಠಗಳ ಬಗ್ಗೆ ಪ್ರಯೋಗ ಮಾಡಿ ಪ್ರದರ್ಶನ ನೀಡಿದರು. ಈ ವಿಜ್ಞಾನ ಮೇಳಕ್ಕೆ ಆಗಮಿಸಿದ್ದ ಪಾಲಕರು, ಸಾರ್ವಜನಿಕರು, ವಿಜ್ಞಾನ ಆಸಕ್ತರು 2ನೇ ತರಗತಿಯ ಪುಟಾಣಿಗಳು ಮಾಡಿದ ವಿಜ್ಞಾನ ಪ್ರದರ್ಶನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ವೀರೇಶ ಹಂಜಗಿ, ಆನಂದ ಹಿಟ್ನಳ್ಳಿ `ಸೌರಮಂಡಲ~, ಚೈತ್ರಾ ಲಾಳಸಂಗಿ, ಪ್ರಜ್ಞಾ ಮನ್ನೊಳ್ಳಿ, ನಿಖಿಲ ಚವ್ಹಾಣ ಅವರ `ಗಾಳಿಗೆ ತೂಕವಿದೆ~, ಸುದೀಪ ಹೊಟಗಿ, ಚೈತ್ರಾ ಹತ್ತರಕಿ ಅವರ `ನೀರಿನ ಸ್ಥಿತಿಗಳು~, ರೋಹನ್ ರಾಠೋಡ, ಸಾಕ್ಷಿ ರಾವೂರ, ಸಚಿನ್ ಬಗಲಿ ಸಿದ್ಧ ಪಡಿಸಿದ್ದ `ಹಗಲು ಮತ್ತು ರಾತ್ರಿ~,  ಸೃಷ್ಟಿ ಕುಂಬಾರ, ಬಾಗೇಶ ಆಳೂರ, ವಿಷ್ಣು ಚವ್ಹಾಣ ಅವರ

`ಬೆಳಕಿನ ಕಿರಣಗಳ ನೇರ ಚಲನೆ~,  ಸಂದೀಪ ಹೊಟಗಿ, ಸಂಕೇತ ಅವಟಿ, ಸಂಗನಗೌಡ ಬಿರಾದಾರ ಅವರ `ಅಂತರ್ಜಲ~, ಸೌಜನ್ಯ ನಿಂಬರಗಿ, ಐಶ್ವರ್ಯ ಪೊದ್ದಾರ, ಪಲ್ಲವಿ ಬಾರಿಕಾಯಿ ಅವರ `ಜ್ವಾಲಾಮುಖಿ~ ಮಾದರಿಗಳು ಗಮನ ಸೆಳೆದವು. ಇದರ ಜೊತೆಗೆ ಇನ್ನೂ ಹಲವಾರು ಮಾದರಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಶಿಕ್ಷಕಿಯರಾದ ವೀಣಾ ಅಜೂರೆ, ರಮ್ಯ ಈ ಪ್ರದರ್ಶನ ಸಂಘಟಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT