ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜೆ, ಅನ್ನದಾನಕ್ಕಿಂತ ಸಾಮಾಜಿಕ ಕಾರ್ಯ ಮುಖ್ಯ

Last Updated 3 ಜೂನ್ 2011, 9:40 IST
ಅಕ್ಷರ ಗಾತ್ರ

ಉಡುಪಿ: `ಪರ್ಯಾಯದ ಎರಡು ವರ್ಷಗಳ ಕಾಲದಲ್ಲಿ ಅನವರತವೂ ಸಾಧನೆಯದೇ ಚಿಂತೆ ಕಾಡುತ್ತಿದೆ. ಕೇವಲ ಪೂಜೆ, ಧಾರ್ಮಿಕ ಸೇವೆ, ಅನ್ನದಾನ ಮಾಡಿದರೆ ಮಾತ್ರವೇ ಸಾಲದು, ಸಾಮಾಜಿಕವಾಗಿ ಸ್ಪಂದಿಸಿ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು~ ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಶೀರೂರು ಲಕ್ಷ್ಮೀವರತೀರ್ಥರು ಇಲ್ಲಿ ಹೇಳಿದರು.

ಲಕ್ಷ್ಮೀವರತೀರ್ಥರ ಜನ್ಮ ನಕ್ಷತ್ರದ ನಿಮಿತ್ತ ಬುಧವಾರ ರಾಜಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ, ಬಳಿಕ 21 ಮಂದಿ ಫಲಾನುಭವಿಗಳಿಗೆ ರೂ.3 ಲಕ್ಷ ಮೊತ್ತದ `ಆರೋಗ್ಯನಿಧಿ~ ಚೆಕ್ ವಿತರಿಸಿ ಅವರು ಮಾತನಾಡಿದರು.

`ಬಡಜನರಿಗೆ ಸಾಕಷ್ಟು ಸಮಸ್ಯೆಗಳು ಕಾಡುತ್ತವೆ. ಆರೋಗ್ಯ ಸಮಸ್ಯೆಗಳಿಂದ ಬಡವರು ತತ್ತರಿಸುತ್ತಿದ್ದಾರೆ. ಅವರಿಗೆ ಶಕ್ತ್ಯಾನುಸಾರ ನೆರವುವಾಗುವ ನಿಟ್ಟಿನಲ್ಲಿ ಶ್ರೀಕೃಷ್ಣಮಠದಿಂದ `ಆರೋಗ್ಯ ನಿಧಿ~ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಮುಂದಿನ ಎಲ್ಲ ಸ್ವಾಮೀಜಿಗಳ ಪ–ರ್ಯಾಯದಲ್ಲಿಯೂ ಮುಂದುವರಿಯಬೇಕು ಎಂಬುದು ತಮ್ಮ ಆಶಯ~ ಎಂದರು.

`ಮುಂದಿನ ಆರು ತಿಂಗಳ ಪರ್ಯಾಯ ಅವಧಿಯಲ್ಲಿ ಭಗವಂತನಿಗೆ ಪ್ರಿಯವಾಗುವಂತೆ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವ ಹಂಬಲವಿದೆ~ ಎಂದರು.ಸ್ವಾಮೀಜಿಗಳಿಗೆ

ಅಭಿನಂದನೆ: ಪತ್ರಕರ್ತೆ ಸಂಧ್ಯಾ ಪೈ ಮಾತನಾಡಿ, `ಒಂದುಕಾಲದಲ್ಲಿ ಮಠಗಳೆಂದರೆ ಧಾರ್ಮಿಕ ಕೆಲಸಗಳಿಗೆ ಮಾತ್ರವೇ ಸೀಮಿತ ಎನ್ನುವ ಭಾವನೆ ಜನರಲ್ಲಿತ್ತು. ಆದರೆ ಈಗ ಮಠಗಳು ನರ-ನಾರಾಯಣನ ಸೇವೆಗೆ ಇಳಿದಿರುವುದು ಅಭಿನಂದನಾರ್ಹ~ ಎಂದರು.

ಕೇಮಾರು ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಶೀರೂರುಶ್ರೀಗಳ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, `ಹಿಂದಿನ ಪರ್ಯಾಯದಲ್ಲಿ ಶೀರೂರುಶ್ರೀ ವಾಹನುಮುಕ್ತ ರಥಬೀದಿ ಕನಸು ಕಂಡಿದ್ದರು. ಅದನ್ನು ಈ ಬಾರಿ ಸಾಕಾರಗೊಳಿಸಿದರು~ ಎಂದರು. ಜಯಕೃಷ್ಣ ಶೆಟ್ಟಿ ತೋನ್ಸೆ ಮಾತನಾಡಿ, `ಶೀರೂರು ಸ್ವಾಮೀಜಿಗಳ ಜಾತಿಭೇದ ತೊಡೆದುಹಾಕಿ ಎಲ್ಲರನ್ನೂ ಒಂದುಗೂಡಿಸುತ್ತಿದ್ದಾರೆ~ ಎಂದರು.

ಕಟೀಲು ಕ್ಷೇತ್ರದ ಧರ್ಮದರ್ಶಿ ಲಕ್ಷ್ಮೀನಾರಾಯಣ ಅಸ್ರಣ್ಣ, ಕಕ್ಕುಂಜೆ ನಾಗಾ ನಂದ ವಾಸುದೇವ ಆಚಾರ್ಯ,  ನಾಗೇಶ್ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಚಲನಚಿತ್ರ ಕಲಾವಿದ ಶ್ರೀನಿವಾಸ ಮೂರ್ತಿ, ಮಠದ ದಿವಾಣ ಲಾತವ್ಯ ಆಚಾರ್ಯ, ತಲ್ಲೂರು ಶಿವರಾಮ ಶೆಟ್ಟಿ, ನಿತ್ಯಾನಂದ ಒಳಕಾಡು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT