ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಪ್ರಮತಿ ಶೈಕ್ಷಣಿಕ ಉತ್ಸವ

Last Updated 2 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

=ಸತ್ಯತೀರ್ಥ ಪ್ರತಿಷ್ಠಾನ: ಫೆ. 3 ರಿಂದ 6ರವರೆಗೆ ಆಧುನಿಕ ಹಾಗೂ ಪರಂಪರೆಯ ಸಮನ್ವಯ ಶಿಕ್ಷಣ ಕೇಂದ್ರ ‘ಪೂರ್ಣಪ್ರಮತಿ ಶಾಲೆ’ಯ ಪ್ರಥಮ ವಾರ್ಷಿಕೋತ್ಸವ ಹಾಗೂ ವಿಚಾರ ಸಂಕಿರಣ.

ಗುರುವಾರ ಬೆಳಿಗ್ಗೆ 9.30ಕ್ಕೆ ಗಿರಿನಗರದ ಪೂರ್ಣಪ್ರಮತಿಯಲ್ಲಿ ಶಾಸಕ ರವಿಸುಬ್ರಹ್ಮಣ್ಯ ಅವರಿಂದ ಉದ್ಘಾಟನೆ. ಅತಿಥಿಗಳು: ಸಂಗೀತಗಾರ ಆರ್.ಕೆ. ಶ್ರೀಕಂಠನ್, ಭಾರತೀಯ ವಿಜ್ಞಾನ ಸಂಸ್ಥೆಯ ಗಣಿತಜ್ಞ ಪ್ರೊ.ಸಿ.ಆರ್.ಪ್ರಾಣೇಶಾಚಾರ್, ಪಾಲಿಕೆ ಸದಸ್ಯೆ ಲಲಿತಾ. ‘ಅಕ್ಷರಂ’ನಿಂದ ‘ಪೂರ್ಣಪ್ರಮತಿ’ಯವರೆಗೆ ಮೆರವಣಿಗೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಶುಕ್ರವಾರ ಬೆಳಿಗ್ಗೆ 9.30ರಿಂದ ಸಂಸ್ಕೃತ ದಿನ. ಅತಿಥಿಗಳು: ಬನ್ನಂಜೆ ಗೋವಿಂದಾಚಾರ್ಯ, ರೇಣು ಶ್ರೀನಿವಾಸನ್, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪೂರ್ಣಪ್ರಮತಿಯ ಮಕ್ಕಳ ಅಜ್ಜಿ, ತಾತಂದಿರಿಗೆ ವಿಶಿಷ್ಟ ಕಾರ್ಯಕ್ರಮ. ಶುಕ್ರವಾರ ಸಂಜೆ 5.30ಕ್ಕೆ ಎನ್ ಆರ್ ಕಾಲೋನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ‘ಸಮಕಾಲೀನ ಶೈಕ್ಷಣಿಕ ವ್ಯವಸ್ಥೆ ಮುಂದಿರುವ ಸವಾಲುಗಳು’ ಕುರಿತು ವಿಚಾರ ಸಂಕಿರಣ. ಉಪನ್ಯಾಸಕರು: ಡಾ. ಗುರುರಾಜ್ ಕರ್ಜಗಿ (ಆಧುನಿಕ ಶಿಕ್ಷಣದಲ್ಲಿ ಹೊಸ ಪ್ರಯೋಗಗಳು), ಪ್ರೊ. ಡಿ. ಪ್ರಹ್ಲಾದಾಚಾರ್ಯ (ಸಾಂಪ್ರದಾಯಿಕ ಶಿಕ್ಷಣ ಪದ್ಧತಿ), ಡಾ. ಕೆ. ರಾಮಚಂದ್ರ ಭಟ್ (ವೇದವಿಜ್ಞಾನ ಮತ್ತು ಗುರುಕುಲದಿಂದ ಕಲಿಕೆ) ಮತ್ತು ಐಐಎಂಬಿಯ ಪ್ರೊ. ಬಿ. ಮಹಾದೇವನ್ (ಸಮಕಾಲೀನ ಶಿಕ್ಷಣ ಪದ್ಧತಿಯಲ್ಲಿ ಪ್ರಾಚೀನ ಭಾರತೀಯ ಜ್ಞಾನ ಅಳವಡಿಸಿಕೊಳ್ಳುವುದರ ಮಹತ್ವ). ಅಧ್ಯಕ್ಷತೆ: ಬನ್ನಂಜೆ ಗೋವಿಂದಾಚಾರ್ಯ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT