ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿರಾಜ್ ಈಗ ಹಾಟಿ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಅಯ್ಯಾ~ ಚಿತ್ರದ `ಅಗ ಬಾಯ್~ ಹಾಡಿನಲ್ಲಿ ರಾಣಿ ಮುಖರ್ಜಿಯೊಂದಿಗೆ ಮಿಂಚುತ್ತಿರುವ ಪೃಥ್ವಿರಾಜ್‌ಗೆ ಈಗ ಹೊಸ ಹೆಸರೊಂದು ದೊರೆತಿದೆ.ಆ ಹಾಡಿನಲ್ಲಿ ಮಾದಕವಾಗಿ ನರ್ತಿಸಿದ ನಂತರ ರಾಣಿ ಅವರನ್ನು `ಹಾಟಿ~ ಎಂದು ಕರೆಯತೊಡಗಿದರಂತೆ.

ಈ ನಟನ ಮೈಕಟ್ಟು `ಹಾಟ್ ಹಾಟ್~ ಆಗಿರುವುದರಿಂದ ರಾಣಿ ಸಲಿಗೆಯಿಂದ `ಹಾಟಿ~ ಎನ್ನತೊಡಗಿದರಂತೆ. ಸೆಟ್‌ನಲ್ಲಿ ಅದೇ ಹೆಸರು ಜಾರಿಗೆ ಬಂತು. ಸ್ಪಾಟ್ ಬಾಯ್ಸ ಸಹ `ಹಾಟಿ ಸರ್‌ಗೆ ಟೀ ಬೇಕಂತೆ~, `ಹಾಟಿ ಸರ್‌ಗೆ ಮೇಕಪ್ ಬೇಕಂತೆ...~

ಎನ್ನತೊಡಗಿದರಂತೆ. ಅಯ್ಯಾ ಚಿತ್ರದ ಸೆಟ್‌ನಲ್ಲಿ ಪೃಥ್ವಿರಾಜ್ ಹೆಸರು ಮರೆಸುವಂತಾಗಿದ್ದು ರಾಣಿ ಮುಖರ್ಜಿ ಕರೆದ `ಹಾಟಿ~ಯಿಂದ. ಚಿತ್ರ ನಿರ್ಮಿಸಿದ ಅನುರಾಗ್ ಕಶ್ಯಪ್ ಸಹ ಈಗ ಅವರನ್ನು ಹಾಟಿ ಎಂದೇ ಸಂಬೋಧಿಸತೊಡಗಿದ್ದಾರಂತೆ.

ಪೃಥ್ವಿರಾಜ್‌ಗೆ ಮೊದಮೊದಲು ಮುಜುಗರವೆನಿಸಿದರೂ, ರಾಣಿ ಅದನ್ನು ಅತಿ ಮೆಚ್ಚುಗೆಯಿಂದ ಹೇಳಿರುವುದಾಗಿ ಸ್ಪಷ್ಟಪಡಿಸಿದಾಗ, ಸಂತಸದಿಂದಲೇ ಸ್ವೀಕರಿಸಿದರಂತೆ. ಇದೀಗ ಬಾಲಿವುಡ್‌ನಲ್ಲಿ ಹೊಸ `ಹಾಟಿ~ಯದೇ ಚರ್ಚೆ ಹೆಚ್ಚಾಗಿದೆ.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT