ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಸೆಯೂ ಖರ್ಚಾಗದ ‘ನಿರ್ಭಯ ನಿಧಿ’

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವರ್ಷ ದೆಹಲಿಯಲ್ಲಿ ನಡೆದ ಪ್ಯಾರಾ­ಮೆಡಿಕಲ್‌ ವಿದ್ಯಾರ್ಥಿ ಮೇಲಿನ ಬರ್ಬರ ಅತ್ಯಾ­ಚಾರ­ದಿಂದ ಎಚ್ಚೆ­ತ್ತುಕೊಂಡ ಕೇಂದ್ರ ಸರ್ಕಾರ ಮಹಿಳೆ­ಯರ ವಿರುದ್ಧ ದೌರ್ಜನ್ಯ, ಅತ್ಯಾಚಾರ ಹಾಗೂ ಇತರ ಅಪರಾಧ ಪ್ರಕರಣ­ತಡೆಯಲು ಹಲವು ಕ್ರಮ ಕೈ ಗೊಂಡಿ­ದ್ದರೂ ಕೆಲವಷ್ಟೇ ಜಾರಿಯಾಗಿವೆ.

ಆದರೆ ಮಹಿಳೆಯರಿಗೆ ಪೂರ್ಣ­ಪ್ರಮಾಣ­ದಲ್ಲಿ ಭದ್ರತೆ ದೊರೆ­ತಿಲ್ಲ. ಇದೆ­ಲ್ಲ­ಕ್ಕಿಂತ ಮುಖ್ಯವಾಗಿ ‘ನಿರ್ಭಯ ನಿಧಿ­ಯಡಿ ಇಡಲಾಗಿರುವ ರೂ1000 ಕೋಟಿ ಹಣದಲ್ಲಿ ಒಂದೂ ರೂಪಾಯಿಯೂ ಖರ್ಚಾ­ಗದೇ ಹಾಗೇ ಉಳಿದಿದೆ.

ಈ ಹಣದಲ್ಲಿ ಹೆಚ್ಚಿನ ಮಹಿಳಾ ಪೊಲೀಸರ ನೇಮಕ ಮಾಡಿ­ಕೊಳ್ಳಲು ಉದ್ದೇ­ಶಿ­ಸಲಾಗಿತ್ತು. ಆದರೆ ದೇಶ­ದಾ­ದ್ಯಂತ ಪೊಲೀಸ್‌ ಪಡೆ­ಯಲ್ಲಿ  ಶೇ 6­ರಷ್ಟು ಮಾತ್ರ ಮಹಿಳೆಯರು ಇದ್ದಾರೆ.

ನಿರ್ಭಯ ನಿಧಿ ಮೀಸಲಿಟ್ಟಿರು­ವು­ದನ್ನು ಈ ವರ್ಷದ ಫೆಬ್ರುವರಿಯಲ್ಲಿ ಮಂಡಿ­ಸಲಾದ ಮುಂಗಡಪತ್ರದಲ್ಲಿ ಘೋಷಿಸ­ಲಾ­ಗಿತ್ತು. ಆದರೆ ನಿಧಿ ನಿಯಂತ್ರಣ ಯಾರು ಮಾಡಬೇಕು ಎಂಬ ಬಗೆಗಿನ ಗೊಂದಲವೇ ಹಣ ಖರ್ಚಾಗದೆ ಹಾಗೇ ಉಳಿಯಲು ಪ್ರಮುಖ ಕಾರಣವಾಗಿದೆ. ಈ ಕುರಿತು ಗೃಹ ಸೇರಿ­ದಂತೆ ಹಲವು ಸಚಿ­ವಾಲಯಗಳು ಪ್ರಸ್ತಾವ ಮುಂದಿಟ್ಟಿವೆ.

ಮೀರಾ ಆತಂಕ
ಮಹಿಳೆಯ­ರ ವಿರುದ್ಧ ಅಪರಾಧ ತಡೆಯಲು ಹಾಗೂ ಭದ್ರತೆ ಒದಗಿಸಲು ಸರ್ಕಾರ ಏನೆಲ್ಲ ಕಾನೂನನ್ನು ರೂಪಿಸಿದ್ದರೂ ಅದ­ರಿಂದ ಹೆಚ್ಚಿನ ಪ್ರಯೋಜನ ಮಹಿಳೆ­ಯರಿಗೆ ಸಿಗುತ್ತಿಲ್ಲ ಎಂದು ಲೋಕ­ಸಭಾ ಸ್ಪೀಕರ್‌ ಮೀರಾ ಕುಮಾರ್ ಆತಂಕ  ವ್ಯಕ್ತಪಡಿಸಿದ್ದಾರೆ.

ದೆಹಲಿ ಸಾಮೂಹಿಕ ಅತ್ಯಾ­ಚಾರಕ್ಕೆ ವರ್ಷ ತುಂಬಿದ ಪ್ರಯುಕ್ತ ಸಂಸತ್‌ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಹಿಳೆಯರಿಗೆ ಭದ್ರತೆ ನೀಡಲು ಸಂಸತ್ ಅವಿರೋಧವಾಗಿ ಕಾನೂನು ರೂಪಿಸಲು ಒಪ್ಪಿಗೆ ನೀಡಿದ್ದರೂ ನಿರೀಕ್ಷಿತ ಬದಲಾವಣೆ ಆಗಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT