ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಸಮುಚ್ಚಯಕ್ಕೆ ಬೇಕಿದೆ ಕಾಯಕಲ್ಪ

Last Updated 10 ಫೆಬ್ರುವರಿ 2012, 9:05 IST
ಅಕ್ಷರ ಗಾತ್ರ

ಬಾಗೇಪಲ್ಲಿ : ಪಟ್ಟಣದ ಗೂಳೂರು ರಸ್ತೆ ವೃತ್ತ ಬಳಿ ಪೊಲೀಸ್ ವಸತಿ ಸಮುಚ್ಚಯ ನಿರ್ಮಾ ಣವಾಗಿ ದಶಕಗಳು ಉರುಳಿವೆ. ದಾರಿಹೋಕರು ಒಂದು ಕ್ಷಣ ಇತ್ತ ದೃಷ್ಟಿ ಹರಿಸಿದರೆ ವರ್ಷ ಗಳಾದರೂ ಬಣ್ಣ ಕಂಡಿಲ್ಲವೇನೂ ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ.

 ಮನೆಗಳಿಗೆ ಕಟ್ಟಿರುವ ಪಾಚಿ, ಬಣ್ಣ ಕಾಣದ ಗೋಡೆಗಳು ಅವ್ಯವಸ್ಥೆಯನ್ನು ಸಾರಿ ಹೇಳುತ್ತವೆ. ಇನ್ನು ಇಕ್ಕಟ್ಟಿನಲ್ಲಿ ನಿರ್ಮಾಣವಾಗಿರುವ ಮನೆ ಗಳಲ್ಲಿ ವಾಸಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಯಾರ ಬಳಿ ದೂರು ನೀಡುವುದು ಎಂದು ತಿಳಿಯು ತ್ತಿಲ್ಲ ಎಂದು ನೊಂದು ನುಡಿಯುತ್ತಾರೆ.

ಗೃಹ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾದ ಸಮುಚ್ಚಯ ಈಗ ಕಾಯಕಲ್ಪಕ್ಕಾಗಿ ಹಾತೊರೆ ಯುತ್ತಿದೆ.
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ಬಂದಾಗ ರಸ್ತೆಯಲ್ಲ ಕೆಸರುಮಯ. ಇನ್ನೊಂದೆಡೆ ಅನೈರ್ಮಲ್ಯದಿಂದ ವಿಪರೀತ ಸೊಳ್ಳೆ ಕಾಟ ಇಲ್ಲಿ. 

`ಈ ಹಿಂದೆ 15 ಮನೆಗಳ ಜತೆ ಈಚೆಗೆ ನೂತನ ವಾಗಿ 18 ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಅಗತ್ಯ ಸೌಕರ್ಯ ಕಲ್ಪಿಸಿಲ್ಲ~ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪೇದೆಯೊಬ್ಬರು.

ಇದರ ನಡುವೆ ಪೊಲೀಸ್ ಸಮುಚ್ಚಯ ಜಾಗವನ್ನು ಕೆಲವರು ಒತ್ತುವರಿಗೆ ಯತ್ನಿ ಸುತ್ತಿದ್ದಾರೆ ಎಂಬ ಮಾತುಗಳು ಇಲ್ಲಿ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT