ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಲಿಯೊಮುಕ್ತ ದೇಶ ಮಾಡಲು ಸಹಕಾರ ಅಗತ್ಯ

Last Updated 19 ಫೆಬ್ರುವರಿ 2012, 5:45 IST
ಅಕ್ಷರ ಗಾತ್ರ

ದಾವಣಗೆರೆ: ದೇಶದಾದ್ಯಂತ ಫೆ. 19 ಹಾಗೂ ಏ. 1ರಂದು ಪಲ್ಸ್ ಪೋಲಿಯೊ ಹನಿಗಳನ್ನು ಹಾಕುವ ಕಾರ್ಯಕ್ರಮ ನಡೆಯಲಿದ್ದು, ಭಾರತವನ್ನು ಪೋಲಿಯೊಮುಕ್ತ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಭಾರತೀಯ ಮಕ್ಕಳ ತಜ್ಞ ವೈದ್ಯರ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಡಾ.ಪಿ.ಎಸ್. ಸುರೇಶಬಾಬು ಹೇಳಿದರು.

ಪೋಲಿಯೊ ಹನಿಗಳನ್ನು ಹಾಕಿಸುವ ಬಗ್ಗೆ ಯಾವುದೇ ತಪ್ಪು ಕಲ್ಪನೆಗಳು ಬೇಡ. ಅದರಿಂದ ಯಾವುದೇ ಅಪಾಯವಾಗುವುದಿಲ್ಲ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇಶದಲ್ಲಿ 2009ರ ಸಮಯದಲ್ಲಿ ಜಗತ್ತಿನ ಯಾವುದೇ ದೇಶಕ್ಕಿಂತಲೂ ಹೆಚ್ಚು (741) ಪೋಲಿಯೊ ರೋಗಿಗಳಿದ್ದರು. 2011ರಲ್ಲಿ ಪಶ್ಚಿಮ ಬಂಗಾಳದ ಹೌರಾದಲ್ಲಿ ಒಂದು ಪ್ರಕರಣ ಕಂಡುಬಂದಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ತಜ್ಞರ ಹಾಗೂ ನಾಗರಿಕರ ಸಹಕಾರದಿಂದ 2011ರ ಜ. 13ರಿಂದ ಇಂದಿನವರೆಗೆ ಪೋಲಿಯೊಪೀಡಿತ ಯಾವುದೇ ರೋಗಿಯೂ ಭಾರತದಲ್ಲಿ ಕಂಡುಬಂದಿಲ್ಲ. ಆದರೆ, ಅದು ಮರುಕಳಿಸದ ರೀತಿಯಲ್ಲಿ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.


ದೇಶವನ್ನು 2005ರ ವೇಳೆಗೆ ಪೋಲಿಯೊಮುಕ್ತ ಮಾಡಬೇಕು ಎಂಬ ಗುರಿ ಹೊಂದಲಾಗಿತ್ತು. ಆ ವರ್ಷ 66 ರೋಗಿಗಳು ಕಂಡುಬಂದಿದ್ದರು. ಆದರೆ, ಕ್ರಮೇಣ ಆ ಸಂಖ್ಯೆ ಹೆಚ್ಚುತ್ತ ಹೋಯಿತು. 2006ರಲ್ಲಿ 676, 2007ರಲ್ಲಿ 874, 2009ರಲ್ಲಿ 756 ಪ್ರಕರಣಗಳು ಕಂಡುಬಂದವು. ಅರಿವು ಹೆಚ್ಚುತ್ತ ಹೋದಂತೆ 2010ರಲ್ಲಿ ಪೋಲಿಯೊ ಪ್ರಕರಣಗಳ ಸಂಖ್ಯೆ 43ಕ್ಕೆ ಇಳಿಯಿತು ಎಂದು ಅಂಕಿ-ಅಂಶ ನೀಡಿದರು.


ಪೋಲಿಯೊ ವೈರಾಣುಗಳು ಮನುಷ್ಯನ ಜಠರ ಇಲ್ಲವೇ ಉದರದಲ್ಲಿ ಮನೆ ಮಾಡುತ್ತವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಪೋಲಿಯೊ ಹನಿಗಳನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.

ಪೋಲಿಯೊ ಹನಿಗಳನ್ನು ಹಾಕಿಸುವ ಬಗ್ಗೆ ಕೆಲವರಲ್ಲಿ ತಪ್ಪು ಕಲ್ಪನೆ, ಸಂದೇಹಗಳಿವೆ. ಅದನ್ನು ಹಾಕಿಸಲೇಬೇಕೆ?, `ನಮ್ಮ ಮಗುವಿಗೆ ಈಗಾಗಲೇ ಹಾಕಿಸಿದ್ದೇವೆ, ಆದರೂ ಹಾಕಿಸಬೇಕೆ?~, ಕಳೆದ ಬಾರಿ ಹಾಕಿಸಿದ್ದೆವು, ಅದನ್ನು ಹಾಕಿಸಿದರೆ ಜ್ವರ, ನೆಗಡಿ, ಕೆಮ್ಮು ಬರುತ್ತದೆಯೆ? -ಹೀಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ, 5 ವರ್ಷದೊಳಗಿನ ಮಕ್ಕಳಿಗೆ ನಿಗದಿತ ದಿನಾಂಕದಂದು ಪೋಲಿಯೊ ಹನಿಗಳನ್ನು ಹಾಕಿಸಲೇಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಡಾ.ಎನ್.ಕೆ. ಕಾಳಪ್ಪನವರ್, ಜೆಜೆಎಂ ವೈದ್ಯಕೀಯ ಕಾಲೇಜು ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಸಿ.ಆರ್. ಬಾಣಾಪುರಮಠ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT