ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಕ್ರಿಯೆ

Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

`ಅಮಲು ಇಳಿಸಿದ ಮಾನಿನಿ'ಯರನ್ನು (13.07.2013- ಅಗ್ರ ಲೇಖನ) ಪರಿಚಯಿಸಿದ ದಿನೇಶ ಪಟವರ್ಧನ್ ಅಭಿನಂದನಾರ್ಹರು. ಸಮಾಜದ ದುಷ್ಟಶಕ್ತಿಗಳ ವಿರುದ್ಧ ಹೋರಾಡಿ ಯಶಸ್ಸು ಗಳಿಸಿದ ರುಕ್ಮಿಣಮ್ಮ ಹಾಗೂ ನೇತ್ರಮ್ಮ ಅವರ ಜೀವನ ಅನುಕರಣೀಯ. ಅವರ ಆದರ್ಶ ಇಂದಿನ ಮಹಿಳೆಯರಿಗೆ ಛಲ- ಬಲಗಳನ್ನು ತಂದುಕೊಡಬಲ್ಲವು.
-ಮೋಹನ್ ರು. ಹಣಗಿ- ಅಮೀನಗಡ, ಪ್ರಣತಿ- ಮೈಸೂರು

ಎಲ್ಲ ನಗರ, ಗ್ರಾಮಗಳಲ್ಲೂ ರುಕ್ಮಿಣಮ್ಮ, ನೇತ್ರಮ್ಮ ಅವರಂತಹ ಸಾವಿರಾರು ಸ್ತ್ರೀಯರು ಹೋರಾಟಕ್ಕೆ ಕಂಕಣಬದ್ಧರಾದರೆ ಕರುನಾಡನ್ನು  `ಮದ್ಯ ಮುಕ್ತ' ರಾಜ್ಯವನ್ನಾಗಿಸಬಹುದು. ಆದರೆ ಅದು ಕಾರ್ಯರೂಪಕ್ಕೆ ಬರುವುದೇ ಎಂಬ ಯಕ್ಷ ಪ್ರಶ್ನೆಗೆ ಉತ್ತರ ಕೊಡುವವರಾರು? -ಕುಬೇರಪ್ಪ ಎಂ. ವಿಭೂತಿ, ಹರಿಹರ

ಅಮಲು ಇಳಿಸಿದ ಮಾನಿನಿಯರಿಗೆ ಭೇಷ್ ಹೇಳಲೇಬೇಕು. ಆದರೆ ಈಗ ಸ್ವತಃ ಅಮಲೇರಿಸಿಕೊಳ್ಳುವ `ಪ್ರಮದೆ'ಯರ ಸಂಖ್ಯೆಯೂ ಏರುತ್ತಿದೆಯಲ್ಲ (ಏರಿಳಿತ ಬದುಕಿನಲ್ಲಿ ಸಹಜ!)
-ಸಿಪಿಕೆ, ಮೈಸೂರು

ಪ್ರತಿಯೊಬ್ಬರೂ ಯಶಸ್ಸಿಗಾಗಿ ಹಂಬಲಿಸುತ್ತಾರೆ. ಆದರೆ ಇತರರೊಂದಿಗಿನ ಹೋಲಿಕೆಯಿಂದ ನಮ್ಮ ಬೆಳವಣಿಗೆಯ ಪ್ರಮಾಣ ಕುಂಠಿತವಾಗುತ್ತದೆ. ಆದ್ದರಿಂದ ನಮ್ಮಡನೆ ನಾವು ಹೋಲಿಸಿಕೊಳ್ಳಬೇಕೆಂಬ ಯಶಸ್ಸಿನ ಸೂತ್ರವನ್ನು `ಅಂತರ್ಯುದ್ಧ' (ವಿ.ಬಾಲಕೃಷ್ಣನ್) ಅಂಕಣದಿಂದ ನಾನು ಅರಿತೆ. ತುಂಬಾ ಧನ್ಯವಾದ. ಇಂತಹ ಸಕಾರಾತ್ಮಕ ಲೇಖನಗಳು ಹೆಚ್ಚಾಗಿ ಪ್ರಕಟವಾಗಲಿ. -ಮಂಜು, ಬೆಂಗಳೂರು

`ಒಂದು ಇಳಿ ಸಂಜೆಯ ಪಯಣ (ಕಸ್ತೂರಿ ಬಾಯರಿ) ಲೇಖನದಲ್ಲಿ ಬರುವ `ಮೂರು ಹೆಣ್ಣು ಹಡೆದು ಈ ಸಾರಿಯೂ ಹೆಣ್ಣು ಹಡೆದರೆ ಬಾವಿಗೆ ನೂಕ್ತೀನಿ' ಎಂಬ ಗಂಡನ ಧಿಮಾಕಿನ ಮಾತು ಈ ಕಾಲದಲ್ಲೂ ಕೇಳಿಬರುವುದು ವಿಚಿತ್ರವಾದರೂ ಸತ್ಯ. ಇದಕ್ಕೆ ಪೂರಕವಾಗಿ ಈಚೆಗೆ ನಡೆದ ಒಂದು ಘಟನೆ ನೆನಪಿಗೆ ಬಂತು.

ನಮ್ಮೂರಿನ ಸರ್ಕಾರಿ ಪ್ರೌಢಶಾಲೆಗೆ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 100 ಫಲಿತಾಂಶ ಬಂತು. ಅಧ್ಯಾಪಕರನ್ನು ಅಭಿನಂದಿಸಲು ಹೋಗಿದ್ದೆ. ಅಲ್ಲಿ ಒಬ್ಬಳು ಹುಡುಗಿ ಅಳುತ್ತಾ ನಿಂತಿದ್ದಳು. ಮುಖ್ಯೋಪಾಧ್ಯಾಯರು ಅವಳನ್ನು ಸಮಾಧಾನ ಪಡಿಸುತ್ತಿದ್ದರು. ಒಂಬತ್ತನೇ ತರಗತಿಯ ಆ ವಿದ್ಯಾರ್ಥಿನಿ ಟಿ.ಸಿ. ಕೇಳಲು ಬಂದಿದ್ದಳು. ಗಂಡು ಮಗು ಬೇಕೆಂಬುದು ಅವಳ ಅಪ್ಪನ ಬಯಕೆಯಾಗಿತ್ತು. ಆದರೆ ಅಮ್ಮನಿಗೆ ಈ ಬಾರಿ, ಅಂದರೆ ನಾಲ್ಕನೇ ಬಾರಿಯೂ ಹೆಣ್ಣು ಮಗು ಆದಾಗ ಅವನಿಗೆ ಸಹಿಸಲು ಆಗಲಿಲ್ಲ. ಅಮ್ಮ ಮತ್ತು ಮಕ್ಕಳನ್ನು ಮನೆಯಿಂದ ಹೊರಹಾಕಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ. ಪೇಟೆಯಲ್ಲಿ ಬಾಡಿಗೆ ಮನೆ ಹಿಡಿದ ಅಮ್ಮನಿಗೆ ನೆರವಾಗಲು ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಅವಳು ಹೋಗುವವಳಿದ್ದಳು. ಸಮಾನತೆಯ ಈ ದಿನಗಳಲ್ಲೂ ಇಂತಹ ಕ್ರೌರ್ಯ ನಡೆಯುತ್ತಿರುವುದು ನಾಗರಿಕ ಜಗತ್ತಿಗೆ ಅಪಮಾನ.
- ಸಹನಾ ಕಾಂತಬೈಲು, ಬಾಲಂಬಿ, ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT