ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಪಕ್ಷದ ಲಾಭಕ್ಕೆ ನಾವು ಕಾರಣರಲ್ಲ

Last Updated 11 ಅಕ್ಟೋಬರ್ 2011, 7:00 IST
ಅಕ್ಷರ ಗಾತ್ರ

ಹಿಸ್ಸಾರ್ (ಹರಿಯಾಣ):ಹಿಸ್ಸಾರ್ ಉಪಚುನಾವಣೆಯಲ್ಲಿ ನಾವು ಯಾವ ಪಕ್ಷದ ವಿರುದ್ಧವೂ ಜನಾಂದೋಲನ ಕೈಗೊಳ್ಳುತ್ತಿಲ್ಲ. ಜನಲೋಕಪಾಲ್ ಮಸೂದೆ ಮಂಡನೆಯಾಗುವಂತೆ ಮಾಡುವುದೇ ನಮ್ಮ ಜನಾಂದೋಲನದ ಗುರಿ. ಈ ಜನಾಂದೋಲನದಿಂದ ಪ್ರತಿಪಕ್ಷಗಳಿಗೆ ಲಾಭವಾದರೆ ಅದಕ್ಕೆ ನಾವು ಹೊಣೆಗಾರರಲ್ಲ ಎಂದಿರುವ ಅಣ್ಣಾ ಹಜಾರೆ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಅವರು,ಹಜಾರೆ ಅವರು ರಾಷ್ಟ್ರಪತಿಯಾಗಬೇಕೆಂಬ ಆಸೆ ಹೊಂದಿದ್ದಾರೆ ಎಂಬುದು ಅಸಂಬದ್ಧದ ಸಂಗತಿ ಎಂದಿದ್ದಾರೆ.

ಕಳೆದ ರಾತ್ರಿ  ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ~ನಾವು ವ್ಯವಸ್ಥಿತ ಬದಲಾವಣೆಗಾಗಿ ಹೋರಾಡುತ್ತಿದ್ದೇವೆ. ನಾವು ಯಾವ ಅಭ್ಯರ್ಥಿಯ ಪರವಾಗಿಯೂ ಪ್ರಚಾರ ನಡೆಸುತ್ತಿಲ್ಲ, ನಮ್ಮ ಜನಾಂದೋಲನದಿಂದ ಪ್ರತಿಪಕ್ಷಗಳಿಗೆ ಲಾಭವಾದರೆ ಅದಕ್ಕೆ ನಾವು ಹೊಣೆಯಲ್ಲ. ಏನೇ ಆದರೂ ಅದಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆ~ ಎಂದು ಹೇಳಿದ್ದಾರೆ.

~ಕೇಂದ್ರ ಸರ್ಕಾರವು ಇಂದೇ ಜನಲೋಕಪಾಲ್ ಮಸೂದೆಯ ಜಾರಿಯ ಕುರಿತು ಘೋಷಣೆ ಮಾಡಲಿ, ನಾವು ಅವರ ವಿರುದ್ಧದ ನಮ್ಮ ಜನಾಂದೋಲನವನ್ನು ಕೈ ಬಿಡುತ್ತೇವೆ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಸ್ಸಾರ್ ನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿರುವ ಕೇಜ್ರಿವಾಲ್ ಅಲ್ಲದೇ, ಅಣ್ಣಾ ಅವರ ತಂಡದ ಸದಸ್ಯರಾದ ಕಿರಣ್ ಬೇಡಿ ಮತ್ತು ಮನೀಷ್ ಸಿಸೋಡಿಯಾ ಅವರು ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡುತ್ತಾ, ಜನಲೋಕಪಾಲ್ ಮಸೂದೆ ಮಂಡಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಬೇಕೆಂದು ಕೋರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT