ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮನಮೋಹನ್‌ ಸಿಂಗ್‌ಗೆ ಅಮೆರಿಕ ಕೋರ್ಟ್‌ ಸಮನ್ಸ್

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ):  ಪಂಜಾಬ್‌ನಲ್ಲಿ 1990ರಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮಾನವ ಹಕ್ಕು­ಗಳ ಉಲ್ಲಂಘನೆಯಾ­ಗಿದ್ದು, ಅದರಲ್ಲಿ ಪ್ರಧಾನಿ ಮನ­ಮೋ­ಹನ್ ಸಿಂಗ್ ಸಹ ಭಾಗಿಯಾಗಿದ್ದರೆಂಬ ಆರೋಪದ ಮೇಲೆ ಅವರಿಗೆ ಅಮೆರಿಕ ನ್ಯಾಯಾ­ಲ­ಯವೊಂದು ಸಮನ್ಸ್ ಜಾರಿ ಮಾಡಿದೆ.

ಇಲ್ಲಿನ ಸಿಖ್ಖರ ಹಕ್ಕುಗಳ ಹೋರಾಟ ಸಂಘಟನೆಯೊಂದು ಅಮೆರಿಕ ಕೋರ್ಟ್‌ನಲ್ಲಿ  ಪ್ರಕರಣ ದಾಖಲಿಸಿತ್ತು.

ಇದೇ ವೇಳೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಮಾತುಕತೆ ನಡೆಸಲು ಅಮೆರಿಕಕ್ಕೆ ಆಗಮಿಸಿರುವ  ಪ್ರಧಾನಿ ಸಿಂಗ್, ಬಿಗಿ ಭದ್ರತೆ ನಡುವೆ ಶ್ವೇತಭವನದಲ್ಲಿರುವು ದ­ರಿಂದ ಅವರಿಗೆ ತಾವೇ ನೇರ ಸಮನ್ಸ್ ನೀಡಲು ಅನು­ಮತಿ ನೀಡಬೇಕೆಂದು ನ್ಯೂಯಾರ್ಕ್‌ನ ‘ನ್ಯಾಯಕ್ಕಾಗಿ ಸಿಖ್ಖರ ಹೋರಾಟ ಸಮಿ­ತಿ’ಯು ಅಮೆರಿಕದ ನ್ಯಾಯಾಲಯದಲ್ಲಿ ವಿಶೇಷ ಅರ್ಜಿ ಸಲ್ಲಿಸಿದೆ.

ಆದರೆ ಮೂಲಗಳ ಪ್ರಕಾರ, ಪ್ರಧಾನಿ ಸಿಂಗ್ ಅವರಿಗೆ ಇರುವ ಬಿಗಿ ಭದ್ರತೆಯ ಮಧ್ಯೆ ತೆರಳಿ ಸಮನ್ಸ್ ನೀಡುವುದು ಅಸಾಧ್ಯ ಎಂದು ತಿಳಿದುಬಂದಿದೆ.

ಒಬಾಮಾ ಜತೆ ಪ್ರಧಾನಿ ಸಿಂಗ್ ಮಾತು­ಕತೆ ನಡೆಸುವ ಸಂದರ್ಭದಲ್ಲಿ ಶ್ವೇತಭವನದ ಮುಂದೆ ನ್ಯಾಯಕ್ಕಾಗಿ ಹೋರಾಟ ಮಾಡಲು ಸಿಖ್‌ ಸಂಘಟನೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT