ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮೋದಾದೇವಿಗೆ ವಿಶ್ವನಾಥ್‌ ಬೆಂಬಲ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೈಸೂರು: ‘ಪ್ರಮೋದಾದೇವಿ ಒಡೆ­ಯರ್‌ ಅವರಿಗೆ ಹೈಕಮಾಂಡ್‌ ಟಿಕೆಟ್‌ ನೀಡಿದ್ದೇ ಆದಲ್ಲಿ ಲೋಕಸಭಾ ಚುನಾ­ವಣೆಯಿಂದ ಹಿಂದೆ ಸರಿದು ಅವ­ರನ್ನೇ ಬೆಂಬಲಿಸುತ್ತೇನೆ’ ಎಂದು ಸಂಸದ ಅಡಗೂರು ಎಚ್. ವಿಶ್ವ­ನಾಥ್‌ ತಿಳಿಸಿದರು. ‘ಪ್ರಮೋದಾದೇವಿ ಒಡೆಯರ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡುವುದು ನನಗೆ ಬೇಸರವಿಲ್ಲ.

ಅದು ಸಂತಸದ ಸಂಗತಿ. ಅವರ ಗೆಲುವಿಗೆ ನಾನು ಶ್ರಮಿಸುತ್ತೇನೆ. ಆದರೆ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಿಧನರಾದ ಬಳಿಕ ಸೂತಕದ ಮನೆಯಲ್ಲಿ ಜೆಡಿಎಸ್‌ ರಾಜಕೀಯ ಮಾಡುತ್ತಿರುವುದು ನಾಚಿ­ಕೆ­ಗೇಡಿನ ಸಂಗತಿ’ ಎಂದು ಭಾನುವಾರ ಪತ್ರಿಕಾ­ಗೋಷ್ಠಿಯಲ್ಲಿ ಜೆಡಿಎಸ್‌ ವಿರುದ್ಧ ಕಿಡಿ ಕಾರಿದರು.

‘ಲೋಕಸಭೆಗೆ ಪ್ರಮೋದಾದೇವಿ ಒಡೆಯರ್‌ ಅವ­ರನ್ನು ಅವಿರೋಧ­ಆಯ್ಕೆ ಮಾಡ­­ಬೇಕು ಎಂದು ಒಂದೆಡೆ ಹೇಳುವ ಜೆಡಿಎಸ್‌, ಮತ್ತೊಂದೆಡೆ ರಾಜ್ಯದ 28 ಕ್ಷೇತ್ರ­­ಗಳಲ್ಲಿ ಅಭ್ಯರ್ಥಿ­ಗಳನ್ನು ಕಣಕ್ಕಿಳಿ­ಸು­ವು­ದಾಗಿ  ಹೇಳುವ ಮೂಲಕ  ಗೊಂದಲ ­ಸೃಷ್ಟಿ­­­ಸಿ­­ದ್ದಾರೆ’ ಎಂದು ಗುಡುಗಿದರು.

‘ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಗೊಂದಲಗಳ ನಿವಾರಣೆಗೆ ಪ್ರಮೋ­ದಾ­ದೇವಿ ಬಯಸಿದರೆ ಸರ್ಕಾರ ಮತ್ತು ಅವರ ನಡುವೆ ಸಂಪರ್ಕ ಸೇತುವೆ­ಯಾಗಿ ಕೆಲಸ ಮಾಡುತ್ತೇನೆ. ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಅರಸು ಮನೆತನದ ಜೊತೆ ನಾನು ಇದ್ದೇನೆ. ಯದುವಂಶಕ್ಕೆ ಕಾಂಗ್ರೆಸ್‌ ಕೊಡ­ಬೇಕಾದ ಗೌರವವನ್ನು ಹಿಂದಿ­ನಿಂದಲೂ ಕೊಡುತ್ತಿದೆ. ಈ ಬಗ್ಗೆ ಜೆಡಿಎಸ್‌ನಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ಇಲ್ಲ’ ಎಂದು ತಿರುಗೇಟು ನೀಡಿದರು.

‘ಅರಮನೆ ಸ್ವಾಧೀನ ಮಸೂದೆ ಜಾರಿಯಾಗಿದ್ದು 1994–95ನೇ ಸಾಲಿನಲ್ಲಿ.ಆಗ ಎಚ್‌.ಡಿ. ದೇವೇ­ಗೌಡರೇ ಮುಖ್ಯಮಂತ್ರಿ ಆಗಿದ್ದರು. ಆದರೆ, ಮಸೂದೆಯನ್ನು ಕಾಂಗ್ರೆಸ್‌ ಜಾರಿ ಮಾಡಿದೆ ಎಂದು ಜೆಡಿಎಸ್‌ ಗೊಂದಲ ಸೃಷ್ಟಿ ಮಾಡುತ್ತಾ ಕಥೆ ಹೇಳಿಕೊಂಡು ತಿರುಗುತ್ತಿದೆ. ಆಸ್ತಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು, ತೀರ್ಪು ಬಾಕಿ ಉಳಿದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT