ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ತಂದ ಕೃಷ್ಣಾ, ಮುನಿದ ಮಲಪ್ರಭಾ

Last Updated 8 ಸೆಪ್ಟೆಂಬರ್ 2011, 10:15 IST
ಅಕ್ಷರ ಗಾತ್ರ

ಕೂಡಲಸಂಗಮ:  ಆಲಮಟ್ಟಿ ಜಲಾಶಯದಿಂದ ಮಂಗಳವಾರ ಸಂಜೆ ಕೃಷ್ಣಾ ನದಿಗೆ ಅಧಿಕ ಪ್ರಮಾಣದ ನೀರು ಬಿಟ್ಟ ಪರಿಣಾಮ ನದಿ ದಡದ ಹಲವು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇನ್ನೊಂದೆಡೆ ಮಲಪ್ರಭಾ ನದಿಯಲ್ಲಿ ಅಧಿಕ ನೀರು ಹರಿಯುತ್ತಿದ್ದು, ಜನತೆ ಸಂಕಷ್ಟಕ್ಕೀಡಾಗಿದ್ದಾರೆ.

ಹುನಗುಂದ ತಾಲ್ಲೂಕಿನ ಕಟಗೂರ, ತುರಡಗಿ, ಚವಡ ಕಮಲದಿನ್ನಿ, ವಳಕಲದಿನ್ನಿ, ಬಿಸಲದಿನ್ನಿ, ಕೂಡಲ ಸಂಗಮ ಹಾಗೂ ಬಾಗಕೋಟೆ ತಾಲ್ಲೂಕಿನ ಹಂಡರಲ್ಲ , ಮಾಗ್ಯೇರಿ, ಬೊಮ್ಮನಗಿಯಲ್ಲಿ ಪ್ರವಾಹ ಕಾಣಿಸಿಕೊಂಡಿದೆ.

ಇನ್ನು ಹುನಗುಂದ ತಾಲ್ಲೂಕಿನಲ್ಲಿ ಮಲ್ಲಪ್ರಭಾ ನದಿಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಕೆಂಗಲ್ಲ, ಕಜಗಲ್ಲ, ವರಗೊಡದಿನ್ನಿ, ಕಮದತ್ತ, ಇದ್ದ ಲಗಿ, ಎಮ್ಮೆಟ್ಟಿ, ಧನ್ನೂರ ಗ್ರಾಮದ ನದಿಯ ದಡದಲ್ಲಿ ಸಾವಿರಾರು ಎಕರೆ ಕಬ್ಬು,ಶೇಂಗಾ, ಉಳ್ಳಾಗಡ್ಡಿ, ಮೆಕ್ಕೆಜೋಳ,ಸಜ್ಜೆ ಬೆಳೆ  ನೀರಿನಲ್ಲಿ ಮುಳುಗಿ ರೈತರು ದಿಕ್ಕು ತೊಚ್ಚದಂತಾಗಿದ್ದಾರೆ.

ಕೃಷ್ಣಾ ನದಿಯಲ್ಲಿ ಮಂಗಳವಾರ ಸಂಜೆ 6 ಗಂಟೆಯಿಂದ ಅಧಿಕ ಪ್ರಮಾ ಣದ ನೀರು ಬರಲು ಆರಂಭವಾಯಿತು. ನದಿಯ ದಡದ ರೈತರ ಪಂಪಸೆಟ್‌ಗಳು ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ಕೂಡಲಸಂಗಮ, ಕಟಗೂರ ,ತುರಡಗಿ ಗ್ರಾಮಗಳನ್ನು ಪ್ರವಾಹದ ನೀರು ಆವರಿಸಿದೆ.

ದೋಣಿ ಸಂಚಾರ ಸ್ಥಗಿತ: ಕೃಷ್ಣಾ ನದಿಯಲ್ಲಿ ಅಧಿಕ ಪ್ರಮಾಣದ ನೀರು ಬಂದಿರುವು ದರಿಂದ ತ್ಲ್ಲಾಲೂಕು ಆಡಳಿತ ಆಡವಿಹಾಳ -ಕೂಡಲಸಂಗಮ ದೋಣಿ ಸಂಚಾರ ಸ್ಥಗಿತಗೊಳಿಸಿದ ಪರಿಣಾಮ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಜನತೆ ಹುನಗುಂದ ಮೂಲಕ ಸಂಚರಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT