ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿನಿ, ಸೆಸ್ಕ್ ನೌಕರರು

Last Updated 21 ಜುಲೈ 2012, 8:40 IST
ಅಕ್ಷರ ಗಾತ್ರ

ಹಿರೀಸಾವೆ: ಪಟ್ಟಣದ ಸೆಸ್ಕ್ ಕಚೇರಿ ಎದುರು ವಿದ್ಯಾರ್ಥಿನಿಗೆ ಸಿಕ್ಕಿದ್ದ ಬಂಗಾರ ಚೈನನ್ನು ಶುಕ್ರವಾರ ಅದರ ಮಾಲೀಕರಿಗೆ ಹಿಂದರುಗಿಸಿ ಬಾಲಕಿ, ಸೆಸ್ಕ್ ನೌಕರರು ಪ್ರಾಮಾಣಿಕತೆ ಮೆರೆದಿದ್ದಾರೆ.

ಜಿನ್ನೇನಹಳ್ಳಿಯ ವಿದ್ಯಾರ್ಥಿನಿ ಚಂದನ ಶಾಲಾ ವಾಹನ ದಿಂದ ಗುರುವಾರ ಸಂಜೆ ಇಳಿದು ಸೆಸ್ಕ್ ಶಾಖಾ ಕಛೇರಿ ಕಡೆಗೆ ಹೋಗುತ್ತಿದ್ದಾಗ ಗೇಟ್ ಬಳಿ ಸಿಕ್ಕಿದ ಚಿನ್ನದ ಕೈ ಚೈನನ್ನು ಸೆಸ್ಕ್ ನೌಕರ ಲೋಕೇಶ್ ಅವರಿಗೆ ನೀಡಿದ್ದಾಳೆ. ನಂತರ ಲೋಕೇಶ್ ಸಹೋದ್ಯೋಗಿಗಳಾದ ಶ್ರೀಧರ್, ಮಂಜುನಾಥ್‌ಗೆ ಚೈನು ಸಿಕ್ಕಿರುವ ವಿಷಯ ತಿಳಿಸಿದ್ದಾರೆ.

ನಂತರ ಅವರು ಚೈನನ್ನು ಪೊಲೀಸರಿಗೆ ಒಪ್ಪಿಸಲು ತೀರ್ಮಾ ನಿಸಿದ್ದಾರೆ. ಆಗ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂ ಕಿನ ಚಾಮಲಾಪುರದ ಶಂಕರ್ ಎಂಬುವರು ಕೈ ಚೈನು ಬಿದ್ದುಹೋಗಿದೆ ಎಂದು ಸೆಸ್ಕ್ ಕಚೇರಿ ಬಳಿ ಎಂದು ಹುಡು ಕುತ್ತಿದ್ದರು. ಜನರ ಸಮ್ಮುಖದಲ್ಲಿ ಮಾಹಿತಿ ಪಡೆದು ಚೈನನನ್ನು ಶಂಕರ್ ಅವರಿಗೆ ನೀಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT