ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ದುಬೈಗೆ ತೆರಳಿದ ಭಾರತ ತಂಡ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಎಎಫ್‌ಸಿ ಚಾಲೆಂಜ್ ಕಪ್ ಫುಟ್‌ಬಾಲ್ ಟೂರ್ನಿಗೆ ಪೂರ್ವ ತಯಾರಿ ನಡೆಸಲು ಭಾರತ ತಂಡದವರು ಬುಧವಾರ ರಾತ್ರಿ ದುಬೈಗೆ ತೆರಳಿದ್ದಾರೆ. ಶಿಬಿರದ ವೇಳೆ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯಗಳನ್ನು ಆಡಲಿದ್ದಾರೆ.

ಈಗಾಗಲೇ 30 ಮಂದಿ ಸಂಭವನೀಯ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಫೆಬ್ರುವರಿ 23ರಂದು ಮಸ್ಕತ್‌ನಲ್ಲಿ ಓಮನ್ ಎದುರು ಹಾಗೂ ಫೆ.27ರಂದು ಅಜೆರ್‌ಬೈಜಾನ್ ವಿರುದ್ಧ ಭಾರತ ತಂಡ ಸೌಹಾರ್ದ ಪಂದ್ಯ ಆಡಲಿದೆ.

`ಎಎಫ್‌ಸಿ ಚಾಲೆಂಜ್ ಕಪ್ ಟೂರ್ನಿಗೆ ಮುನ್ನ ಇಂತಹ ಶಿಬಿರ ಅಗತ್ಯವಿತ್ತು. ಅದಕ್ಕೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಅವಕಾಶ ಮಾಡಿಕೊಟ್ಟಿದೆ. ದುಬೈನಲ್ಲಿ ಅತ್ಯುತ್ತಮ ಸೌಲಭ್ಯಗಳಿವೆ~ ಎಂದು ತಂಡದ ಕೋಚ್ ಸವಿಯೊ ಮೆಡಿರಾ ನುಡಿದರು.

ಸಂಭಾವ್ಯ ತಂಡ ಇಂತಿದೆ: ಗೋಲ್ ಕೀಪರ್ಸ್: ಕರಣಜಿತ್ ಸಿಂಗ್, ಸುಭಾಶಿಶ್ ರಾಯ್‌ಚೌಧುರಿ, ಅರಿಂದಾಮ್ ಭಟ್ಟಚಾರ್ಯ, ಗುರ್ಜಿಂದರ್ ಸಿಂಗ್ ಸಂಧು.

ಡಿಫೆಂಡರ್ಸ್: ನಿರ್ಮಲ್ ಚೆಟ್ರಿ, ರಾಜು ಗಾಯಕ್ವಾಡ್, ಸಮೀರ್ ನಾಯ್ಕ, ಗೌರಮಾಂಗಿ ಸಿಂಗ್, ಅನ್ವರ್ ಅಲಿ, ಕಿನ್‌ಸುಖ್  ದೇವನಾಥ್, ಸೈಯದ್ ರಹೀಮ್ ನಬಿ, ಅರ್ನಾಬ್ ಮೊಂಡಲ್ ಹಾಗೂ ಗುರ್ಜಿಂದರ್ ಸಂಧು.
ಮಿಡ್‌ಫೀಲ್ಡರ್ಸ್: ಅದಿಲ್ ಖಾನ್, ಅಂಥೋಣಿ ಪೆರೇರಾ, ಕ್ಲಿಫಾರ್ಡ್ ಮಿರಾಂಡ, ರೀಸಂಗ್ಮಿ ವಷುಂ,    ಬಾಲ್‌ದೀಪ್ ಸಿಂಗ್, ಲೆಸ್ಟರ್ ಫರ್ನಾಂಡೀಸ್, ರೋಕಸ್ ಲಮಾರೆ, ಫ್ರಾಂಕಿಸ್ ಫರ್ನಾಂಡೀಸ್, ಜೆವೆಲ್ ರಾಜಾ, ಮನೀಷ್ ಮಥಾನಿ, ಲೆನ್ನಿ ರಾಡ್ರಿಗಾಸ್, ಲಾಲ್ರಿಂಡಿಕಾ ರಾಟ್ಲೆ.
ಫಾರ್ವರ್ಡ್: ಸುನಿಲ್ ಚೆಟ್ರಿ, ಸುಶೀಲ್ ಸಿಂಗ್, ಸಿ.ಎಸ್.ಸಬೀತ್, ಮನನ್‌ದೀಪ್ ಸಿಂಗ್, ಜೋಕಿಮ್ ಅಬ್ರಾಂಚಸ್. ಮುಖ್ಯ ಕೋಚ್: ಸವಿಯೊ ಮೆಡಿರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT