ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್: ಆಧುನಿಕ ಹುಚ್ಚುತನ?

Last Updated 8 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸಾಮಾಜಿಕ ಸಂಪರ್ಕ ತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್‌ಗಳು ಮಾನವೀಯ ಮೌಲ್ಯಗಳಿಗೆ ಕಳಂತ ತರುತ್ತಿವೆ ಎನ್ನುವ ಟೀಕೆಗಳು ಕೇಳಿ ಬರುತ್ತಿವೆ. ಈ ತಾಣಗಳು ಜನರ ದಿನನಿತ್ಯದ ಚಟುವಟಿಕೆಗಳ ಮೇಲೆ ಪ್ರಭುತ್ವ ಸಾಧಿಸುತ್ತಿದ್ದು, ಜನರಲ್ಲಿ ಮಾನವೀಯತೆ ಕಡಿಮೆಯಾಗಲು ಕಾರಣವಾಗುತ್ತಿವೆ ಎಂದು ಸಂಶೋಧಕರು ಟೀಕಿಸಿದ್ದಾರೆ. 

 ಅಮೆರಿಕದ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ ಪ್ರೊ. ಷೆರ್ರಿ ಟರ್ಕಲ್ ಅವರಂತೂ   ಈ ತಾಣಗಳ ಬಳಕೆಯನ್ನು ‘ಆಧುನಿಕ ಹುಚ್ಚುತನ’ ಎಂದೇ ಬಣ್ಣಿಸಿದ್ದಾರೆ. ಉತ್ತಮ ಸಂವಹನದ ಭ್ರಾಮಕ ಲೋಕದಲ್ಲಿ ತಂತ್ರಜ್ಞಾನವು ಮಾನವನನ್ನು  ನೈಜ ಮಾನವೀಯ ಸಂಬಂಧಗಳಿಂದಲೇ ದೂರ ತಳ್ಳುತ್ತಿದೆ.

ಅಂತ್ಯಕ್ರಿಯೆ ಸಂದರ್ಭಗಳಲ್ಲಿಯೂ ಜನರು ತಮ್ಮ ಮೊಬೈಲ್, ಐಫೋನ್‌ಗಳನ್ನು ಬಳಸುವುದು ನೋಡಿದರೆ ಸಾಮಾಜಿಕ ಸಂಪರ್ಕ ತಾಣಗಳು ಬಳಕೆದಾರರನ್ನು ಹುಚ್ಚನನ್ನಾಗಿ ಮಾಡುತ್ತಿವೆ ಎಂದೂ ಸಂಶೋಧಕರು ಕಟಕಿಯಾಡಿದ್ದಾರೆ.

ಇಂತಹ ತಾಣಗಳ ಪ್ರಯೋಜನಗಳು ಸಾಕಷ್ಟಿರುವುದು ನಿಜವಾಗಿದ್ದರೂ ಅವುಗಳ ಬಳಕೆಯು ಅತಿಯಾದರೆ ಅಪಾಯಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಭವಿಷ್ಯದ ಆಪ್ತ ಸಹಾಯಕ
ಮುಂದಿನ ಅರ್ಧ ಶತಮಾನದಲ್ಲಿ ಕಂಪ್ಯೂಟರ್‌ಗಳು ಮಾನವನ ಆಪ್ತ ಸಹಾಯಕನ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವಷ್ಟರ ಮಟ್ಟಿಗೆ ತಾಂತ್ರಿಕ ಮುನ್ನಡೆ ಸಾಧಿಸಿರುತ್ತವೆ. ಇಂಟರ್‌ನೆಟ್‌ನ ಮಾಹಿತಿ ಶೋಧ ದೈತ್ಯ ಸಂಸ್ಥೆ ಗೂಗಲ್‌ನ ಮುಖ್ಯಸ್ಥ ಎರಿಕ್ ಎಸ್. ಈ  ಭವಿಷ್ಯ ನುಡಿದಿದ್ದಾರೆ.

  50 ವರ್ಷಗಳಲ್ಲಿ ಕಂಪ್ಯೂಟರ್‌ಗಳು ವ್ಯಕ್ತಿಯೊಬ್ಬನ ಆಪ್ತ ಸಹಾಯಕನಂತೆ ಕಾರ್ಯನಿರ್ವಹಿಸುವ ಅಂತರ್‌ದೃಷ್ಟಿ ಬೆಳೆಸಿಕೊಂಡಿರುವಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿರುತ್ತವೆ. ತಂತ್ರಜ್ಞಾನ ಬೆಳವಣಿಗೆಯು ಕಂಪ್ಯೂಟರ್‌ಗಳ ಕಾರ್ಯವೈಖರಿಯಲ್ಲಿ ಗಮನಾರ್ಹ ಬದಲಾವಣೆ ತರಲಿವೆ.

  ತನ್ನನ್ನು ಬಳಸುವವರು ಯಾರು? ಆತ ಏನು ಬಯಸುತ್ತಾನೆ. ಎಂತಹ ಸಂದರ್ಭದಲ್ಲಿ ಏನು ಮಾಡಬೇಕು, ಯಾವ ನಿರ್ಧಾರ ಕೈಗೊಳ್ಳಬೇಕು ಮತ್ತಿತರ ಸಂಗತಿಗಳ ಬಗ್ಗೆ ಗಣಕಯಂತ್ರಗಳಲ್ಲಿ ಮುಂಬರುವ ವರ್ಷಗಳಲ್ಲಿ ಸ್ವತಂತ್ರವಾಗಿ ಚಿಂತಿಸುವ ಗುಣ ಅಭಿವೃದ್ಧಿಪಡಿಸಲಾಗಿರುತ್ತದೆ. ಹೀಗಾಗಿ ಕಂಪ್ಯೂಟರ್‌ಗಳು ವ್ಯಕ್ತಿಯ ಆಪ್ತ ಸಹಾಯಕನಂತೆ ದಕ್ಷತೆಯಿಂದ ಕಾರ್ಯನಿರ್ವಹಿಸುವ ಕನಸೂ ನನಸಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT