ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೋರೈಡ್‌ನಿಂದ ಮುಕ್ತಿ ಎಂದು?

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಪಾವಗಡ  ಬರಪೀಡಿತ ಹಾಗೂ ಮಳೆ­ಯಾಶ್ರಿತ ಪ್ರದೇಶವಾಗಿದೆ. ಮಳೆಗಾಲದಲ್ಲಿ ಮಳೆ ಬರುವುದು ತೀರಾ ಕಡಿಮೆ. ಇತ್ತೀಚೆಗೆ ಅಲ್ಪ ಸ್ವಲ್ಪ ಮಳೆಯಾಗಿ  ಕೆರೆ ಕುಂಟೆಗಳ ದಾಹ ತೀರಿಸಿ­ದಂತಾಗಿದೆ. ಇನ್ನು ಕುಡಿಯಲು ನೀರು ದೊರೆ­ತರೂ, ಅದು  ಫ್ಲೋರೈಡ್ ಮಿಶ್ರಿತವಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದ್ದು, ಅದು ಘನವಾಗಿ ಪರಿವರ್ತನೆಗೊಂಡು ಕಿಡ್ನಿಯಲ್ಲಿ ಕಲ್ಲುಗ­ಳಾ­ಗುತ್ತಿವೆ.

ಮೂಳೆಗಳ ಮೇಲೆ ಈ  ಫ್ಲೋರೈಡ್ ಅಂಶ ಕೂತು ಮೂಳೆ ಸವೆಯುತ್ತಿವೆ. ಆದರೂ ಸಹ ವಿಧಿಯಿಲ್ಲದೆ ಬದುಕಬೇಕೆಂಬ ಹಂಬಲ­ದಿಂದ ಅದೇ ನೀರನ್ನು ಕುಡಿದು ಅನೇಕ ರೋಗಗಳಗೆ ತುತ್ತಾಗುತ್ತಿದ್ದಾರೆ. ವಯಸ್ಸಾದ­ವರು ಕೈ ಕಾಲುಗಳ ನಿಶ್ಶಕ್ತಿಯಿಂದ ಬಳಲುತ್ತಿ­ದ್ದಾರೆ. ಚಿಕ್ಕ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇನ್ನು ಹಲ್ಲುಗಳು ನಲವತ್ತು ವರ್ಷಕ್ಕೇ ಉದುರುತ್ತವೆ.  ಬೆರಳೆಣಿಕೆಯಷ್ಟು ಮಾತ್ರ ಜಲ ಶುದ್ದೀಕರಣ ಘಟಕಗಳು ಇವೆ. ತಾಲ್ಲೂಕಿನ ಹಲವೆಡೆ ಘಟಕ­ಗಳನ್ನು ನಿರ್ಮಿಸಲು ಈ ಭಾಗದ ಜನಪ್ರತಿನಿ­ಧಿ­ಗಳು ಸೂಕ್ತ ಕ್ರಮ ಕೈಗೊಳ್ಳುವ ಅನಿವಾರ್ಯ ಇದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT