ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳಶಾಹಿಗಳ ಮುಷ್ಠಿಯಲ್ಲಿ ಅರ್ಥ ವ್ಯವಸ್ಥೆ

Last Updated 3 ಜನವರಿ 2011, 11:40 IST
ಅಕ್ಷರ ಗಾತ್ರ

ಮದ್ದೂರು: ದೇಶದ ಆರ್ಥಿಕ ವ್ಯವಸ್ಥೆ ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿದ್ದು, ಕನಿಷ್ಠ ಕೂಲಿ ನಿಗದಿಗೊಳಿಸದ ಕಾರಣ ಕಾರ್ಮಿಕರು ಬದುಕು ನಡೆಸವುದೇ ಕಷ್ಟವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ ತಿಳಿಸಿದರು. ಪಟ್ಟಣದಲ್ಲಿ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸಂಘ ಶನಿವಾರ ಏರ್ಪಡಿಸಿದ್ದ ಕೋರೆಂಗಾವ್ ಮಹಾಯುದ್ಧದ ವಿಜಯೋತ್ಸವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೋಷಿತರು ಸಂಘಟಿತರಾಗುವವರೆಗೆ ತುಳಿತಕ್ಕೆ ಒಳಗಾದವರ ಮೇಲಿನ ದೌರ್ಜನ್ಯ ನಿಲ್ಲುವುದಿಲ್ಲ. ಕನಿಷ್ಠ ಕೂಲಿ, ಉತ್ತಮ ಬದುಕು ಪಡೆಯುವುದು ಸಾಧ್ಯವಾಗುವುದಿಲ್ಲ ಎಂದು ವಿಷಾದಿಸಿದರು. 

 
ಪುರಸಭಾಧ್ಯಕ್ಷ ಅಮರ್‌ಬಾಬು ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಮಾಜಿ ಅಧ್ಯಕ್ಷ ಎಂ.ಐ.ಪ್ರವೀಣ್ ಸಂಘದ ಕಚೇರಿ ಉದ್ಘಾಟಿಸಿದರು. ದಸಂಸ ಜಿಲ್ಲಾ ಸಂಚಾಲಕರಾದ ಅಂದಾನಿ ಸೋಮನಹಳ್ಳಿ ನಾಮಫಲಕ ಅನಾವರಣಗೊಳಿಸಿದರು. ಜಿಲ್ಲಾ ಸಂಚಾಲಕ ಶ್ರೀನಿವಾಸ್, ವಕೀಲ ಬಿ.ಟಿ.ವಿಶ್ವನಾಥ್, ಸುವರ್ಣ ಕರವೇ ತಾಲ್ಲೂಕು ಅಧ್ಯಕ್ಷ ನಗರಕೆರೆ ನವೀನ್ ಮಾತನಾಡಿದರು.

ಪುರಸಭಾ ಸದಸ್ಯರಾದ ಫರ್ವಿಜ್‌ಖಾನ್, ಮಹದೇವಮ್ಮ ರಾಜು, ಮುಖಂಡರಾದ ಅಣ್ಣೂರು ರಾಜಣ್ಣ, ರಫೀಕ್ ಅಹಮದ್, ಮ.ನ.ಪ್ರಸನ್ನಕುಮ್ಾ, ಎಂ.ಟಿ.ಮಂಜುನಾಥ್, ಕರಿಯಪ್ಪ, ಎಂ.ಶಿವಪು, ಪಿ.ಸಂಜಯ್ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT