ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಗವಾರಹಳ್ಳಿಯಲ್ಲಿ ತಿಂಗಳ ಹುಣ್ಣಿಮೆ

Last Updated 10 ಫೆಬ್ರುವರಿ 2012, 9:05 IST
ಅಕ್ಷರ ಗಾತ್ರ

ಚಿಂತಾಮಣಿ:  ತಾಲ್ಲೂಕಿನ ಬಡಗ ವಾರಹಳ್ಳಿ ಮುನೇಶ್ವರ ಸ್ವಾಮಿ ದೇಗುಲದಲ್ಲಿ ಈಚೆಗೆ ನಡೆದ ತಿಂಗಳ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಜನೆ, ಕೀರ್ತನೆ, ತತ್ವಪದಗಳ ಭಕ್ತರನ್ನು ರೋಮಾಂಚನಗೊಳಿಸಿತು.

ಚೊಕ್ಕರೆಡ್ಡಿಹಳ್ಳಿ, ಮುದ್ದಲಹಳ್ಳಿ, ಬಡಗ ವಾರಹಳ್ಳಿ ಹಾಗೂ ಕಾಗತಿ ಗ್ರಾಮದ ವಿವಿಧ ಭಜನಾ ತಂಡದ ಸದಸ್ಯರು ಪ್ರಸ್ತುತ ಪಡಿಸಿದ ಗಾಯನ ಎಲ್ಲರ ಮನಸೂರೆಗೊಂಡಿತು.

 ಚಿಂತಕ ಕೆ.ಎನ್.ಪಾಂಡುರಂಗಯ್ಯ ಶೆಟ್ಟಿ ಹಾಗೂ ದೇಗುಲ ವ್ಯವಸ್ಥಾಪಕ ಸುಬ್ರ ಮಣಿ ಮಾತನಾಡಿದರು.
ಹಿರಿಯ ವೇದಾಂತಿ  ಭೋಧಾನಂದ ಸೀತಾರ್ಯ ಅವರನ್ನು ದೇಗುಲ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಪರೀಕ್ಷಾ ತರಬೇತಿ

ಚಿಕ್ಕಬಳ್ಳಾಪುರ: ಮಾರ್ಚ್ ತಿಂಗಳಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು  ಸಿಇಟಿ ಪರೀಕ್ಷೆಗೆ ಸಂಬಂಧಿಸಿ ದಂತೆ ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ವಿಶೇಷ ತರಬೇತಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಮಾ.11ರವರೆಗೆ ಪ್ರಸಾರ ವಾಗಲಿದೆ.  

 ಬೆಳಿಗ್ಗೆ 7ರಿಂದ 7.40 ಮತ್ತು ರಾತ್ರಿ 9.30 ರಿಂದ10ರವರೆಗೆ ಪ್ರಸಾರ ವಾಗಲಿದೆ. ಭಾನುವಾರದಿಂದ ಬುಧ ವಾರದವರೆಗೆ ರಾತ್ರಿ 10ರಿಂದ 10.30 ರವರೆಗೆ. ಶನಿವಾರ ಮಧ್ಯಾಹ್ನ 1.30 ರಿಂದ 3ರವರೆಗೆ, ಭಾನುವಾರ ಬೆಳಿಗ್ಗೆ 11 ರಿಂದ 1ರವರೆಗೆ, ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 3 ರಿಂದ 3.30 ರವರೆಗೆ  ಪ್ರಸಾರವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT