ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತದ ತೆನೆ ಕವಚ ಅಂಗಮಾರಿ ರೋಗ ನಿರ್ವಹಣೆಗೆ ಸಲಹೆ

Last Updated 7 ಅಕ್ಟೋಬರ್ 2012, 4:30 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಬತ್ತದಲ್ಲಿ ಎಲೆ ಕವಚ ಮತ್ತು ತೆನೆ ಕವಚ ಅಂಗಮಾರಿ ರೋಗ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಆರಂಭದಲ್ಲಿ ಎಲೆ ಕವಚದ ಮೇಲೆ ಕಂದು ಬಣ್ಣದ ಒಂದು ಸೆಂ.ಮೀ.ನಷ್ಟು ದುಂಡಾದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.

ನಂತರ, ಹವಾಗುಣವು ರೋಗಕಾರಕ್ಕೆ ಅನುಕೂಲಕರ ಆಗಿದ್ದರೆ ಈ ಚುಕ್ಕೆಗಳು ಎಲೆಯ ಉಳಿದ ಭಾಗಗಳ ಮೇಲೂ ಕಾಣಿಸಿಕೊಳ್ಳುತ್ತವೆ. ಈ ರೋಗ ಉಲ್ಬಣಗೊಂಡಾಗ ಕಂದು ಬಣ್ಣದ ಶಿಲೀಂಧ್ರದ ಕಣಗಳು ಕಾಣಿಸುತ್ತವೆ. ವಾತಾವರಣದದಲ್ಲಿ ತೇವಾಂಶ ಹೆಚ್ಚಾದಲ್ಲಿ ಶಿಲೀಂದ್ರವು ಒಂದು ಎಲೆಯಿಂದ ಮತ್ತೊಂದು ಎಲೆಗೆ ಹರಡಿ ರೋಗಗ್ರಸ್ತ ಎಲೆಯ ಕವಚವು ಮುಖ್ಯ ತೆಂಡೆಯಿಂದ ಸುಲಭವಾಗಿ ಕಿತ್ತುಬರುತ್ತದೆ. ರೋಗವು ಹೆಚ್ಚಾಗಿ ಬೆಳೆಯ ತೆಂಡೆ ಒಡೆಯುವ ಸಮಯದಲ್ಲಿ ಕಂಡುಬರುತ್ತದೆ.

ಈ ರೋಗದ ನಿಯಂತ್ರಣಕ್ಕಾಗಿ ರೈತರು ಬತ್ತದ ಗದ್ದೆಯಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರೋಗದ ತೀವ್ರತೆ ಹೆಚ್ಚಾದಲ್ಲಿ ಪ್ರತಿ ಲೀಟರ್ ನೀರಿಗೆ ಒಂದು ಮಿ.ಲೀ. ಹೆಕ್ಸಾಕೊನಜೋಲ್ ಅಥವಾ ಒಂದು ಮಿ.ಲೀ. ಪ್ರೊಪಿಕೊನ್‌ಜೋಲ್ ಅಥವಾ ಒಂದು ಗ್ರಾಂ. ಕಾರ್ಬನ್‌ಡೇಜಿಂ ಶಿಲೀಂಧ್ರ ನಾಶಕವನ್ನು ಬೆರೆಸಿ, ಸಾಧ್ಯವಾದಷ್ಟು ಬುಡಭಾಗವನ್ನು ಚೆನ್ನಾಗಿ  ನೆನೆಯುವಂತೆ ಸಿಂಪಡಿಸಬೇಕು. ಈ ಸಂದರ್ಭದಲ್ಲಿ ಸಾರಜನಕ ರಸಗೊಬ್ಬರವನ್ನು ನೀಡಬಾರದು ಎಂದು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT