ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸರ್ ವಿಜೇಂದರ್‌ಗೆ ಅಗ್ನಿ`ಪರೀಕ್ಷೆ'

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಮದ್ದು ಸೇವನೆ ಪರೀಕ್ಷೆಗೆ ಒಳಪಡಿಸಬೇಕು ಎನ್ನುವ ಯುವಜನ ಸೇವಾ ಹಾಗೂ ಕ್ರೀಡಾ ಸಚಿವಾಲಯದ ಒತ್ತಡಕ್ಕೆ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಕೊನೆಗೂ ಮಣಿದಿದೆ.

ವಿಜೇಂದರ್ ಅವರನ್ನು ಪರೀಕ್ಷೆಗೆ ಒಳಪಡಿಸುವುದಿಲ್ಲ ಎಂದು ನಾಡಾ ಎರಡು ದಿನಗಳ ಹಿಂದೆ ಹೇಳಿತ್ತು. `ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದಾಗ ಮಾತ್ರ ಕ್ರೀಡಾಪಟುಗಳನ್ನು ಪರೀಕ್ಷೆಗೆ ಒಳಪಡಿಸುವ ಅಧಿಕಾರ ನಮಗಿದೆ. ವಾಡಾ ನಿಯಮದಂತೆ ನಾವು ಕಾರ್ಯ ನಿರ್ವಹಿಸುತ್ತೇವೆ' ಎಂದು ಹೇಳುವ ಮೂಲಕ ನಾಡಾ, ಕ್ರೀಡಾ ಸಚಿವಾಲಯದ ಸೂಚನೆಯನ್ನು ತಿರಸ್ಕರಿಸಿತ್ತು. ಆದರೆ, ಬುಧವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಕ್ರೀಡಾ ಸಚಿವಾಲಯ ನಾಡಾದ ಮೇಲೆ ಒತ್ತಡ ಹೇರಿದ್ದರಿಂದ ವಿಜೇಂದರ್ ಅವರನ್ನು ಪರೀಕ್ಷೆಗೆ ಒಳಪಡಿಸಿತು.

`ವಿಜೇಂದರ್ ಅವರ ರಕ್ತ ಹಾಗೂ ಮೂತ್ರದ ಮಾದರಿಯನ್ನು ಬುಧವಾರ ಬೆಳಿಗ್ಗೆ ಪಡೆದುಕೊಂಡಿದ್ದೇವೆ. ಇನ್ನುಳಿದ ಬೇರೆ ಬಾಕ್ಸರ್‌ಗಳ ಮಾದರಿಯನ್ನೂ ಪಡೆದಿದ್ದೇವೆ. ನಿಮಗೆ ಪ್ರತಿಕ್ರಿಯೆ ನೀಡುವ ಮುನ್ನ ಪರೀಕ್ಷೆಯ ವರದಿಎದುರು ನೋಡುತ್ತಿದ್ದೇವೆ' ಎಂದು ನಾಡಾ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT