ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ ಬ್ಯಾಡ್ಮಿಂಟನ್: ಕರ್ನಾಟಕ ಬಿ ತಂಡಕ್ಕೆ ಜಯ

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ತುಮಕೂರು: ಕರ್ನಾಟಕ `ಬಿ~ ತಂಡ ಜಿಲ್ಲಾ ಪೃಥ್ವಿ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ನಗರದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ 12 ವರ್ಷದೊಳಗಿನ ಮಿಶ್ರ ಡಬಲ್ ವಿಭಾಗದಲ್ಲಿ ಶನಿವಾರ ಪ್ರಶಸ್ತಿ ಪಡೆಯಿತು.

ಕರ್ನಾಟಕ `ಎ~ ತಂಡ ದ್ವಿತೀಯ, ಆಂಧ್ರ ತೃತೀಯ ಮತ್ತು ಹೈದರಾಬಾದ್ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆದವು.ಪುರುಷರ ವಿಭಾಗದ ಲೀಗ್ ಪಂದ್ಯದಲ್ಲಿ ಕೇರಳ ತಂಡ ಹೈದರಾಬಾದ್ ತಂಡವನ್ನು 29-11, 29-21 ಅಂತರದಲ್ಲಿ ಮಣಿಸಿತು. ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಕರ್ನಾಟಕ ತಂಡ ಪುದುಚೇರಿಯನ್ನು 29-7, 29-15, ತಮಿಳುನಾಡು ತಂಡ ಕರ್ನಾಟಕವನ್ನು 29-20, 29-22 ರಲ್ಲಿ ಹಾಗೂ ಪುದುಚೇರಿ ತಂಡ ತುಮಕೂರನ್ನು 29-28, 29-23, ತಮಿಳುನಾಡು ತಂಡ ಕೇರಳವನ್ನು 29-8, 29-24 ಅಂತರದಲ್ಲಿ ಮಣಿಸಿತು.

ಆಂಧ್ರಪ್ರದೇಶ ತಂಡ ಪುದುಚೇರಿಯನ್ನು 29-10, 29-9, ತಮಿಳುನಾಡು ತಂಡ ಹೈದರಾಬಾದ್ ತಂಡವನ್ನು 29-17, 29-20. ಆಂಧ್ರ ತಂಡ ಕರ್ನಾಟಕವನ್ನು 28-22, 29-24, ಹೈದರಾಬಾದ್ ತಂಡ ತುಮಕೂರು ತಂಡವನ್ನು 29-13, 29-17 ಅಂತರದಲ್ಲಿ ಮಣಿಸಿತು.ಮಹಿಳೆಯರ ವಿಭಾಗದಲ್ಲಿ ಕೇರಳ ತಂಡ ಪುದುಚೇರಿಯನ್ನು 29-1, 29-1 ರಲ್ಲಿ ಸುಲಭವಾಗಿ ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT