ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆದಿಂಡಿನ ಸವಿರುಚಿ...

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

 ಕೂಟು
ಬೇಕಾಗುವ ಸಾಮಗ್ರಿಗಳು:
ಒಂದು ಬಟ್ಟಲು ಸಣ್ಣಗೆ ಹೆಚ್ಚಿದ ದಿಂಡಿನ ಹೋಳು, ಒಂದು ಬಟ್ಟಲು ಹುರಳಿಕಾಯಿ ಹೋಳು, ಒಂದು ಬಟ್ಟಲು ಗೆಣಸಿನ ಹೋಳು, ಒಂದು ಬಟ್ಟಲು ಹಸಿ ಕಡಲೆಬೀಜ, ಅರ್ಧ ಬಟ್ಟಲು ತೊಗರಿಬೇಳೆ, ಉಪ್ಪು.

ಕೂಟಿನ ಪುಡಿಗೆ ನಾಲ್ಕು ಚಮಚ ಉದ್ದಿನಬೇಳೆ, ಎರಡು ಚಮಚ ಜೀರಿಗೆ, ಒಂದು ಚಮಚ ಮೆಣಸು, ಎರಡು ಚಮಚ ಕೊತ್ತಂಬರಿ ಬೀಜ, ಎರಡು  ಚಮಚ ಗಸಗಸೆ,
ಒಂದು ಬಟ್ಟಲು ಕೊಬ್ಬರಿ ತುರಿ,  ನಾಲ್ಕು ಒಣಮೆಣಸಿನಕಾಯಿ ಎಲ್ಲವನ್ನೂ ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಒಗ್ಗರಣೆಗೆ ಒಂದು ಚಮಚ ತುಪ್ಪ, ಜೀರಿಗೆ.

ಮಾಡುವ ವಿಧಾನ:  ತರಕಾರಿ ಮತ್ತು ಬೇಳೆಯನ್ನು ಕುಕ್ಕರಿನಲ್ಲಿ  ಬೇಯಿಸಿಕೊಳ್ಳಿ. ಇದಕ್ಕೆ ಮೂರು ಚಮಚ ಕೂಟಿನ ಪುಡಿ, ಉಪ್ಪು ಹಾಕಿ ಕುದಿಸಿದಮೇಲೆ ಒಗ್ಗರಣೆ ಕೊಟ್ಟು ಅನ್ನದ ಜೊತೆ ಸವಿಯಿರಿ.

 ಕೋಸಂಬರಿ
ಬೇಕಾಗುವ ಸಾಮಗ್ರಿಗಳು:
ಒಂದು ಬಟ್ಟಲು ಸಣ್ಣಗೆ ಹೆಚ್ಚಿದ ಬಾಳೆದಿಂಡಿನ ಹೋಳು, ಒಂದು ಬಟ್ಟಲು ಕಡ್ಲೆಬೇಳೆ ಅಥವಾ ಹೆಸರುಬೇಳೆ, ಒಂದು ಬಟ್ಟಲು ಸಣ್ಣಗೆ ಹೆಚ್ಚಿದ ಸೌತೆಕಾಯಿ, ಒಂದು ಬಟ್ಟಲು ತೆಂಗಿನ ತುರಿ, ಉಪ್ಪು, ಸ್ವಲ್ಪ ಎಣ್ಣೆ, ಸಾಸಿವೆ, ನಿಂಬೆರಸ, ಒಂದು ಚಮಚ ಹಸಿಮೆಣಸಿನಕಾಯಿ ಪೇಸ್ಟ್, ಇಂಗು, ಕೊತ್ತಂಬರಿಸೊಪ್ಪು.

ಮಾಡುವ ವಿಧಾನ: ಬೇಳೆಯನ್ನು ಎರಡು ಗಂಟೆ ನೀರಿನಲ್ಲಿ  ನೆನೆಸಿ ಬಸಿಹಾಕಿಟ್ಟುಕೊಳ್ಳಿ. ಸಾಸಿವೆ,ಹಸಿಮೆಣಸಿನಕಾಯಿ ಪೇಸ್ಟ್, ಇಂಗು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ. ಒಂದು ಪಾತ್ರೆಗೆ ಬೇಳೆ, ದಿಂಡು, ಸೌತೆಕಾಯಿ ಹೋಳು, ತೆಂಗಿನತುರಿ, ನಿಂಬೆರಸ ಹಾಕಿ ಚೆನ್ನಾಗಿ ಕಲಕಿ ಒಗ್ಗರಣೆ ಹಾಕಿ. ಕೊನೆಯಲ್ಲಿ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ.

 ಮೊಸರುಬಜ್ಜಿ
ಬೇಕಾಗುವ ಸಾಮಗ್ರಿಗಳು:
ಎರಡು ಬಟ್ಟಲು ಸಣ್ಣಗೆ ಹೆಚ್ಚಿದ ಬಾಳೆದಿಂಡಿನ ಹೋಳು, ಎರಡು ಬಟ್ಟಲು ಮೊಸರು, ಉಪ್ಪು. ಒಗ್ಗರಣೆಗೆ ಒಂದು ಚಮಚ ಎಣ್ಣೆ, ಸಾಸಿವೆ. ಒಂದು ಚೂರು ಶುಂಠಿ, ಅರ್ಧ ಬಟ್ಟಲು ತೆಂಗಿನ ತುರಿ, ಎರಡು  ಹಸಿಮೆಣಸಿನಕಾಯಿ. ಇವನ್ನು  ರುಬ್ಬಿಟ್ಟುಕೊಳ್ಳಿ.

ಮಾಡುವ ವಿಧಾನ: ಒಂದು ಪಾತ್ರೆಗೆ ಮೊಸರು, ದಿಂಡಿನ ಹೋಳು,ಉಪ್ಪು,ರುಬ್ಬಿದ ಮಸಾಲೆ ಹಾಕಿ ಬೆರೆಸಿ ಒಗ್ಗರಣೆ ಕೊಡಿ.

ಪಲ್ಯ
ಬೇಕಾಗುವ ಸಾಮಗ್ರಿಗಳು:
ಎರಡು ಬಟ್ಟಲು ಸಣ್ಣಗೆ ಹೆಚ್ಚಿದ ಬಾಳೆದಿಂಡಿನ ಹೋಳು, ಒಂದು ಚಮಚ ಕಡ್ಲೆಬೇಳೆ, ಒಂದು ಚಮಚ ಉದ್ದಿನಬೇಳೆ, ಅರ್ಧ ಬಟ್ಟಲು ತೆಂಗಿನ ತುರಿ, ಎರಡು ಒಣಮೆಣಸಿನಕಾಯಿ, ಉಪ್ಪು, ಸ್ವಲ್ಪ ಎಣ್ಣೆ, ನಿಂಬೆರಸ, ಕೊತ್ತಂಬರಿಸೊಪ್ಪು.

ಮಾಡುವ ವಿಧಾನ: ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಕಡ್ಲೆಬೇಳೆ, ಉದ್ದಿನಬೇಳೆ, ಚೂರು ಮಾಡಿದ ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ ದಿಂಡಿನ ಹೋಳುಗಳನ್ನು ಹಾಕಿ ಸ್ವಲ್ಪ ನೀರು ಚಿಮುಕಿಸಿ ಮುಚ್ಚಳ ಮುಚ್ಚಿ. ದಿಂಡನ್ನು ಬೇಯಿಸಿದ ನಂತರ ಅದಕ್ಕೆ ಉಪ್ಪು, ನಿಂಬೆರಸ, ತೆಂಗಿನತುರಿ ಹಾಗೂ  ಕೊತ್ತಂಬರಿಸೊಪ್ಪುನ್ನು ಸೇರಿಸಿ ಚೆನ್ನಾಗಿ ಕಲಕಿ. ಈಗ ರುಚಿಯಾದ ಪಲ್ಯ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT