ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌ಗೆ ರೂ8,851 ಕೋಟಿ ನಷ್ಟ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):ಮೊಬೈಲ್ ದೂರವಾಣಿ ವಲಯದಲ್ಲಿ ಖಾಸಗಿ ಕಂಪೆನಿಗಳ ತೀವ್ರ ಸ್ಪರ್ಧೆ, ಸಿಬ್ಬಂದಿ ವೇತನ ಪರಿಷ್ಕರಣೆ ಮತ್ತು ದುಬಾರಿ ತರಂಗಾಂತರ ವೆಚ್ಚದಿಂದ ಸರ್ಕಾರಿ ಸ್ವಾಮ್ಯದ `ಬಿಎಸ್‌ಎನ್‌ಎಲ್' 2011-12ನೇ ಸಾಲಿನ ಹಣಕಾಸು ವರ್ಷದಲ್ಲಿರೂ8,851 ಕೋಟಿ ನಷ್ಟ ಅನುಭವಿಸಿದೆ.
`ಬಿಎಸ್‌ಎನ್‌ಎಲ್, ಮತ್ತು ಎಂಟಿಎನ್‌ಎಲ್ ಒಟ್ಟುರೂ12,960 ಕೋಟಿ ನಷ್ಟ ಅನುಭವಿಸಿವೆ ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮಿಲಿಂದ ದೇವ್ರಾ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್ 2009-10ರಲ್ಲಿರೂ1,823 ಕೋಟಿ, 2010-11ರಲ್ಲಿರೂ 6,384 ಕೋಟಿ ನಷ್ಟ ಅನುಭವಿಸಿತ್ತು. ಎಂಟಿಎನ್‌ಎಲ್ 2011-12ರಲ್ಲಿ ರೂ4,109 ಕೋಟಿ ನಷ್ಟ ಅನುಭವಿಸಿದೆ.  ಮೂರನೆಯ ತಲೆಮಾರಿನ ತರಂಗಾಂತರ (3ಜಿ) ಗುಚ್ಛಕ್ಕಾಗಿ `ಬಿಎಸ್‌ಎನ್‌ಎಲ್'ರೂ18,500 ಕೋಟಿ ವ್ಯಯಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT