ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ, ಈಶ್ವರಪ್ಪಗೆ ಮತ್ತೆ ಮುಖಭಂಗ!

ಶಿವಮೊಗ್ಗ ನಗರಸಭೆ ಕಾಂಗ್ರೆಸ್‌---ಜೆಡಿಎಸ್‌ ವಶ
Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಶಿವಮೊಗ್ಗ: ಕೆಜೆಪಿ ನಾಯಕ ಬಿ.ಎಸ್‌.­ಯಡಿಯೂರಪ್ಪ, ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಇಬ್ಬರಿಗೂ ತವರು ಜಿಲ್ಲೆಯಲ್ಲಿ ಮತ್ತೊಮ್ಮೆ ಮುಖಭಂಗವಾಗಿದೆ. ಬಹುಮತ ಇದ್ದರೂ ಶಿವಮೊಗ್ಗ ನಗರಸಭೆ ಅಧ್ಯಕ್ಷ-, ಉಪಾಧ್ಯಕ್ಷ ಸ್ಥಾನ ಪಡೆಯುವಲ್ಲಿ ಇವರಿಬ್ಬರ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಎರಡು ಧ್ರುವಗಳಾಗಿದ್ದ ಈ ನಾಯಕರಿಬ್ಬರು ಈ ಸ್ಥಾನ ಪಡೆಯಲು ಹಬ್ಬದ ನೆಪದಲ್ಲಿ 'ಒಂದಾಗಿ' ನಡೆಸಿದ್ದ ಮಾತುಕತೆ 'ಕೈ' ಕೊಟಿ್ಟದೆ. ಇವರಿಬ್ಬರ ಮೈತ್ರಿಯ ಮೊದಲ ಹೆಜ್ಜೆಯೇ ದಿಕ್ಕು ತಪ್ಪಿದೆ. 

ನಾಲ್ವರು ವಿಧಾನಪರಿಷತ್‌ ಸದಸ್ಯರು, ಇಬ್ಬರು ಸಂಸತ್‌ ಸದಸ್ಯರೊಂದಿಗೆ ಕೆಜೆಪಿ,  -ಬಿಜೆಪಿ ಸಮಬಲ ಹೊಂದಿತ್ತು. ಅಧಿಕಾರ ಹಿಡಿಯಲು ಒಂದೇ ಒಂದು ಪಕ್ಷೇತರ ಮತ ಸೆಳೆದಿದ್ದರೆ ಸಾಕಿತ್ತು. ಆದರೆ, ಕಾಂಗ್ರೆಸ್‌–-ಜೆಡಿಎಸ್‌ ತಂತ್ರದ ಎದುರು ಘಟಾನುಘಟಿಗಳ ಪಟ್ಟುಗಳೆಲ್ಲವೂ ಸಡಿಲಗೊಂಡಿವೆ.

ತಲೆಕೆಳಗಾದ ಲೆಕ್ಕಾಚಾರ: ಗುರುವಾರ ನಡೆದ  ನಗರಸಭಾ ಅಧ್ಯಕ್ಷ-,ಉಪಾ­ಧ್ಯಕ್ಷರ ಚುನಾವಣೆಯಲ್ಲಿ ಅನಿವಾರ್ಯ­ವಾಗಿ ಸೋಲು ಅನುಭವಿಸ ಬೇಕಾ ಯಿತು. ಜಿಲ್ಲೆಯಲ್ಲಿ ಕೆಜೆಪಿ, -ಬಿಜೆಪಿ ಮೈತ್ರಿಯ ಮುಂದಿನ ಲೆಕ್ಕಾಚಾರ­ಗಳೆಲ್ಲ ಈ ಮೂಲಕ ತಲೆಕೆಳಗಾಗಿವೆ.

ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.­ಶಂಕರಮೂರ್ತಿ ನೇತೃತ್ವದಲ್ಲಿ ನಡೆದ ಯಡಿಯೂರಪ್ಪ-, ಈಶ್ವರಪ್ಪ ಮಾತುಕತೆಯಲ್ಲಿ ಅಧ್ಯಕ್ಷ ಸ್ಥಾನ ಬಿಜೆಪಿಗೆ, ಉಪಾಧ್ಯಕ್ಷ ಸ್ಥಾನ ಕೆಜೆಪಿಗೆ ಎಂದು ನಿರ್ಧಾರವಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ, ಕೆಜೆಪಿಯ ಇಬ್ಬರು ಸದಸ್ಯರು ಕಾಂಗ್ರೆಸ್‌-,ಜೆಡಿಎಸ್‌ ಮೈತ್ರಿಗೆ ಜೈ ಎಂದಿದ್ದರಿಂದ ಬಿಜೆಪಿ-– ಕೆಜೆಪಿ ಮೈತ್ರಿ ಅಧಿಕಾರ ಕಳೆದುಕೊಂಡಿತು.

ನಗರಸಭೆಯ ಒಟ್ಟು 35 ಸ್ಥಾನಗಳಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು 12 ಸ್ಥಾನ ಹೊಂದಿದ್ದು, ಬಿಜೆಪಿ 8, ಕೆಜೆಪಿ 7, ಜೆಡಿಎಸ್‌ 5, ಎಸ್‌ಡಿಪಿಐ 1, ಪಕ್ಷೇತರರು 2 ಇದ್ದಾರೆ. ಬಿಜೆಪಿ-, ಕೆಜೆಪಿ ಮೈತ್ರಿಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್‌ ಸಭಾಪತಿ ಡಿ.­ಎಚ್‌.­ಶಂಕರಮೂರ್ತಿ, ಸದಸ್ಯರಾದ ಎಂ.ಬಿ.­ಭಾನುಪ್ರಕಾಶ್‌, ಪ್ರೊ.ಪಿ.ವಿ.ಕೃಷ್ಣಭಟ್‌ ಹಾಗೂ ಆರ್‌.ಕೆ.­ಸಿದ್ದರಾಮಣ್ಣ ಕೂಡ ಮತದಾನಕ್ಕೆ ಅರ್ಹರಾಗಿದ್ದರು. 

ಕಾಂಗ್ರೆಸ್‌ – -ಜೆಡಿಎಸ್‌ ಮೈತ್ರಿಯಲ್ಲಿ ಸ್ವತಃ ನಗರಸಭಾ ಸದಸ್ಯರೂ ಆದ ಶಾಸಕ ಕೆ.ಬಿ.ಪ್ರಸನ್ನ­ಕುಮಾರ್‌, ಜೆಡಿಎಸ್‌ ಶಾಸಕಿ ಶಾರದಾ ಪೂರಾ್ಯ­ನಾಯ್ಕ ಸೇರಿ ಒಟ್ಟು 18 ಮತ­ಗಳಿದ್ದವು. ಸ್ಥಳೀಯ ಶಾಸಕರೂ ಆದ ಕೆ.ಬಿ.ಪ್ರಸನ್ನಕುಮಾರ್‌ ತಂತ್ರಗಾರಿಕೆ ರೂಪಿಸಿ ಇಬ್ಬರು ಪಕ್ಷೇತರ, ಒಬ್ಬ ಎಸ್‌ಡಿಪಿಐ ಸದಸ್ಯರನು್ನ ತಮ್ಮತ್ತ ಸೆಳೆಯುವಲ್ಲಿ ಸಫಲರಾದರು. ಕೆಜೆಪಿ­ಯ ಇಬ್ಬರು ಸದಸ್ಯರು ಕಾಂಗೆ್ರಸ್‌– -ಜೆಡಿಎಸ್‌ ಮೈತ್ರಿ ಅಪ್ಪಿಕೊಳ್ಳುವಂತೆ ಮಾಡುವಲ್ಲಿ ‘ಯಶಸು್ಸ’ ಕಂಡಿದ್ದಾರೆ.

ಆಯ್ಕೆ: ಅಧ್ಯಕ್ಷ ಸ್ಥಾನ ಬಿಸಿಎಂ ‘ಎ’ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸ­ಲಾಗಿತ್ತು. ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌‌ನ ಖುರ್ಷಿದ್‌ ಭಾನು ಅಧ್ಯಕ್ಷರಾಗಿ, ಜೆಡಿಎಸ್‌ನ ರೇಖಾ ಚಂದ್ರಶೇಖರ್‌ ಉಪಾಧ್ಯಕ್ಷೆ­ಯಾಗಿ ಆಯ್ಕೆಯಾಗಿದ್ದಾರೆ. ಈ ಮೈತ್ರಿಗೆ 23 ಮತಗಳು ಬಂದಿದ್ದರೆ, ಕೆಜೆಪಿ– -ಬಿಜೆಪಿ ಮೈತ್ರಿಗೆ 19 ಮತಗಳು ದಕ್ಕಿದವು.

ಕೆಜೆಪಿ– -ಬಿಜೆಪಿ ಮೈತ್ರಿಗೆ ಸೋಲು­ವುಂಟಾ­ಗಿದ್ದರಿಂದ ಈ ಮೈತ್ರಿಗೆ ಮುಂದಾಳತ್ವ ವಹಿಸಿದ್ದ ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಆತಂಕ ಆರಂಭವಾಗಿದೆ. ಮುಂಬರುವ ಲೋಕಸಭಾ ಚುನಾವ­ಣೆಯಲ್ಲಿ ಇದೇ ಮೈತ್ರಿಯ ಅಭ್ಯರ್ಥಿ­ಯಾಗಲು ಹವಣಿಸುತ್ತಿದ್ದ ಅವರಿಗೆ ಆರಂಭದಲ್ಲಿ ತೊಡಕು ಕಾಣಿಸಿಕೊಂಡಿದೆ.

ಇದುವರೆಗೂ ಜಿಲ್ಲಾ ಬಿಜೆಪಿಯಿಂದ ದೂರವಾಗಿದ್ದ ಅವರಿಗೆ ಹತ್ತಿರ ಬರಲು ಇದ್ದ ಒಂದು ಅವಕಾಶದ ಬಾಗಿಲು ಮುಚ್ಚಿದಂತಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದಲೇ ಮೂಲೆ ಗುಂಪಾಗಿದ್ದ ಬಿಜೆಪಿ ಕೂಡ ನಗರಸಭೆಯ ಚುಕ್ಕಾಣಿ ಹಿಡಿದು ಪಕ್ಷ ದ ಸಂಘಟನೆ ವೃದಿ್ಧಗೊಳಿಸಿಲು ಚಿಂತನೆ ನಡೆಸಿತ್ತು. ಅದಕ್ಕೂ ಕೂಡ ಈಗ ಸಂಕಟ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT