ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕೋ ಎನ್ನುತ್ತಿದೆ ಎಪಿಎಂಸಿ!

Last Updated 14 ಡಿಸೆಂಬರ್ 2013, 5:20 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ಅಚ್ಚಕಟ್ಟು ಪ್ರದೇಶದಲ್ಲಿ ಭತ್ತ ಕಟಾವು ಕಾರ್ಯ ಭರದಿಂದ ಸಾಗಿದ್ದು, ದಲ್ಲಾಳಿಗಳು ನೇರವಾಗಿ ರೈತರ ಗದ್ದೆಗೆ ತೆರಳಿ ಭತ್ತಖರೀದಿಸಿ ತೂಕ ಮಾಡಿ ಬೇರೆಡೆ ಸಾಗಿಸುವುದು ಸಾಮಾನ್ಯವಾಗಿದೆ. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಮಾರಾಟ ಮಾಡಲು ಒಬ್ಬ ರೈತರು ಬರುತ್ತಿಲ್ಲ. 

ಸರ್ಕಾರಕ್ಕೆ ಎಪಿಎಂಸಿ  ಕೇಂದ್ರ ಹೊರೆಯಾಗಿ ಮಾರ್ಪಟ್ಟಿವೆ. ಅದೇ ನೆರೆ ಜಿಲ್ಲೆಯ ತಾಲ್ಲೂಕುಗಳಾದ ಗಂಗಾವತಿ, ಕಾರಟಗಿ, ಸಿಂಧನೂರ,ರಾಯಚೂರು ಮುಂತಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆರ್ಥಿಕವಾಗಿ ಸದೃಢವಾಗಿವೆ. ಆದರೂ ಯಾಕೆ ಇಂತಹ ಸಮಸ್ಯೆ ಎಂದು ಪ್ರಶ್ನಿ­ಸುತ್ತಾರೆ ರೈತ ನಾಗಪ್ಪ.

ದಲ್ಲಾಳಿಗಳು ನೇರವಾಗಿ ಗದ್ದೆಗೆ ತೆರಳಿ ಖರೀದಿಸಿ ಲಾರಿಯ ಮೂಲಕ ಬೇರಡೆ ಸಾಗಿಸುತ್ತಾರೆ. ಸರ್ಕಾರಕ್ಕೆ ಯಾವುದೇ ತೆರಿಗೆಯನ್ನು ನೀಡು ವುದಿಲ್ಲ. ಕೆಲ ಭಾಗದಲ್ಲಿ ಸ್ಥಾಪಿಸ ಲಾಗಿರುವ ಚೆಕ್‌ಪೋಸ್‌್ಟಗಳು ನಾಮ ಕಾವಸ್ತೆಯಾಗಿವೆ. ಸರ್ಕಾರಕ್ಕೆ ಬರ ಬೇಕಾದ ಲಕ್ಷಾವಧಿ ತೆರಿಗೆ ಹಣ ಸೋರಿ ಕೆಯಾಗುತ್ತಿದೆ.ಯಾರು ಇತ್ತ ಗಮನ ಹರಿಸುತ್ತಿಲ್ಲವೆಂದು ಜನತೆ ಆರೋಪಿ ಸಿದ್ದಾರೆ.

ಸಿಬ್ಬಂದಿ ಕೊರತೆ ನಿವಾರಿಸಿ  ಹಾಗೂ ಸೂಕ್ತ ಭದ್ರತೆಯನ್ನು ಎಪಿಎಂಸಿ ಕಾರ್ಯದರ್ಶಿಗೆ ನೀಡಿ ಕಡ್ಡಾಯವಾಗಿ ತೆರಿಗೆಯನ್ನು ವಸೂಲು ಮಾಡಲು ಅವಕಾಶ ನೀಡಿದರೆ ಹೆಚ್ಚಿನ ತೆರಿಗೆ ಸಂಗ್ರಹವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ತಾಲ್ಲೂಕಿನ ಹತ್ತಿ ಗೂಡೂರ ಕ್ರಾಸ್ ಬಳಿ ಸ್ಥಾಪಿಸಲಾಗಿದ್ದ ತಪಾಸಣಾ ಕೇಂದ್ರವನ್ನು ಸ್ಥಗಿತ ಗೊಳಿಸಿರುವುದು ಅಧಿಕಾರಿಗಳ ನಿಷ್ಕಾಳ ಜಿಯಾಗಿದೆ ಎಂದು ರೈತ ಮುಖಂಡ ರಂಗಪ್ಪ ದೂರಿದ್ದಾರೆ.

ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ತೆರಿಗೆ ಹಣದ ಸೋರಿಕೆಯನ್ನು ತಡೆಗಟ್ಟಿ ಕಟ್ಟುನಿಟ್ಟಾಗಿ ದಲ್ಲಾಳಿಗಳಿಂದ ವಸೂಲಿ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT