ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತರು ಕೆಜೆಪಿಗೆ: ನಿರ್ಣಯ

Last Updated 7 ಡಿಸೆಂಬರ್ 2012, 5:57 IST
ಅಕ್ಷರ ಗಾತ್ರ

ಬಸವಕಲ್ಯಾಣ: ಬಿಜೆಪಿ ತಾಲ್ಲೂಕು ಘಟಕದ ಎಲ್ಲ ಕಾರ್ಯಕರ್ತರು ಕೆಜೆಪಿಗೆ ಹೋಗುವ ನಿರ್ಣಯವನ್ನು ಗುರುವಾರ ಇಲ್ಲಿನ ಬಿಇಟಿ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಅಭಿಮಾನಿಗಳ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಮಾಜಿ ಶಾಸಕ ಸುಭಾಷ ಕಲ್ಲೂರ ಅವರು ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರಿಗೆ ಕೆಜೆಪಿ ಧ್ವಜ ಕೊಟ್ಟು ಸ್ವಾಗತಿಸಿದರು. ಕೆಜೆಪಿಗೆ ಹೋಗುವ ನಿರ್ಣಯಕ್ಕೆ ಕಾರ್ಯಕರ್ತರು ಕೈ ಎತ್ತುವ ಮೂಲಕ ಸಮ್ಮತಿ ಸೂಚಿಸಿದರು. ಅಲ್ಲದೆ ಬಿಜೆಪಿ ವರಿಷ್ಠರಿಗೆ ಸಾಮೂಹಿಕವಾಗಿ ರಾಜೀನಾಮೆ ಪತ್ರ ಕಳುಹಿಸುವ ತೀರ್ಮಾನ ಸಹ ತೆಗೆದುಕೊಳ್ಳಲಾಯಿತು.

ಸುಭಾಷ ಕಲ್ಲೂರ ಮಾತನಾಡಿ ಯಡಿಯೂರಪ್ಪ ಅವರು ಇನ್ನೊಮ್ಮೆ ಮುಖ್ಯಮಂತ್ರಿ ಆಗಲು ಎಲ್ಲರೂ ಕೂಡಿಕೊಂಡು ಶ್ರಮಿಸಬೇಕಾಗಿದೆ ಎಂದರು. 30 ಕ್ಕಿಂತ ಹೆಚ್ಚಿನ ಶಾಸಕರು ಈ ಪಕ್ಷದಿಂದ ಆಯ್ಕೆಯಾದರೆ ರಿಮೋಟ್ ಕಂಟ್ರೋಲ್ ಯಡಿಯೂರಪ್ಪನವರ ಕೈಯಲ್ಲಿ ಇರುತ್ತದೆ. ಒಂದುವೇಳೆ 70 ಕ್ಕೂ ಹೆಚ್ಚಿನ ಶಾಸಕರು ಆಯ್ಕೆಯಾದರೆ ಮುಖ್ಯಮಂತ್ರಿ ಆಗ್ತಾರೆ ಎಂದರು.

ಬಸವರಾಜ ಪಾಟೀಲ ಅಟ್ಟೂರ್ ಮಾತನಾಡಿ ತಮಗೆ ಕಾಂಗ್ರೆಸ್ ಟಿಕೆಟ್ ಕೊಡದಿದ್ದಾಗ ಯಡಿಯೂರಪ್ಪನವರು ಕರೆದು ಟಿಕೆಟ್ ಕೊಟ್ಟಿದ್ದರಿಂದ ಶಾಸಕನಾಗಿದ್ದೇನೆ. ಅಂಥವರಿಗೆ ದ್ರೋಹ ಬಗೆಯದೆ ಅವರ ಜತೆಯಲ್ಲಿಯೇ ಇರುತ್ತೇನೆ. 30 ವರ್ಷದ ತಮ್ಮ ರಾಜಕೀಯ ಜೀವನದಲ್ಲಿ ತಮಗೆ ಸಹಾಯ ಮಾಡಿದ ಮುಖಂಡರಿಗೆ ತಾವು ಎಂದೂ ಕೇಡು ಬಗೆದಿಲ್ಲ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೃಷ್ಣಪ್ಪ ನಾವದಗಿ, ತಹಸೀನ ಅಲಿ ಜಮಾದಾರ, ಸೋಮನಾಥ ಸೊಲಪುರೆ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಭು ಮೆಂಗಾ ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ಪ್ರಕಾಶ ಮೆಂಡೋಳೆ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹುಗ್ಗೆ ಪಾಟೀಲ, ಸೋಮನಾಥ ಪಾಟೀಲ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತುಕಾರಾಮ ಮಲ್ಲಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಯದ್ರತ್ ಮಾಡ್ಜೆ, ದಿಲೀಪಕುಮಾರ ತಾಳಂಪಳ್ಳಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ ಬಿರಾದಾರ, ಲತಾ ಹಾರಕೂಡೆ, ಸಂಗೀತಾ ಮಾಧವರಾವ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಕೇಶ ಪುಂಡಲೀಕರಾವ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಸವರಾಜ ರಾಯಗೋಳ, ನಾಮಾನಂದ ಜಾಧವ, ರಾಮಲಿಂಗರೆಡ್ಡಿ, ಬಿಜೆಪಿ ಜಿಲ್ಲಾ ರೈತಮೋರ್ಚಾ ಕಾರ್ಯದರ್ಶಿ ಅಶೋಕ ವಕಾರೆ, ಪ್ರಮುಖರಾದ ರಾಮಚಂದ್ರ ಹುಡಗೆ, ಎ.ಬಿ.ಪಾಟೀಲ, ವೀರಶೆಟ್ಟಿ ಕಾಮಣ್ಣ, ರವಿ ಕೊಳಕೂರ್, ಸುಭಾಷ ರೇಕುಳಗಿ, ಸಜ್ಜನ ಚಾಹೂಸ್, ಮಹೇಶ ಪಾಟೀಲ ಉಜಳಂಬ, ಶಿವಪುತ್ರ ಗೌರ, ಕಲ್ಲಪ್ಪ ಖಸಗೆ, ಶೋಭಾವತಿ ತೆಲಂಗ, ಕಮಲಾಕರ ಮಳಗೆ, ಶರಣಯ್ಯ ಸ್ವಾಮಿ, ಶಿವಶರಣಪ್ಪ ಪಾಟೀಲ ಹಿರೇನಾಗಾಂವ ಮುಂತಾದವರು ಪಾಲ್ಗೊಂಡಿದ್ದರು. ಬಿಎಸ್‌ಎಸ್‌ಕೆ ನಿರ್ದೇಶಕ ಸಂಜೀವರೆಡ್ಡಿ ಯರಬಾಗ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT