ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬೆಂಬಲಿತ ಸದಸ್ಯರು ರಾಜಿನಾಮೆ?

Last Updated 21 ಡಿಸೆಂಬರ್ 2012, 7:42 IST
ಅಕ್ಷರ ಗಾತ್ರ
ಹುಣಸಗಿ: ಇಲ್ಲಿನ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಲಿತ ಅಭ್ಯರ್ಥಿ ಸುರೇಶ ನೀರಲಗಿ ಅಧ್ಯಕ್ಷರಾಗಿ ಆಯ್ಕೆ ಯಾಗುತ್ತಿದ್ದಂತೆಯೇ ಬಿಜೆಪಿ ಬೆಂಬಲಿತ ಬಹುತೇಕ ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. 

ಈ ಕುರಿತು ಇನ್ನೂ ಅಧಿಕೃತವಾಗಿ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೂ  ಹಿರಿಯ ನಾಯಕರ ಆದೇಶದಂತೆ ನಡೆದುಕೊಳ್ಳುತ್ತಾರೆ ಎಂಬ ಮಾತುಗಳು ಹುಣಸಗಿ ಬಿಜೆಪಿ ಪಾಳೆಯದಲ್ಲಿ ಕೇಳಿ ಬರುತ್ತಿದೆ. ಒಟ್ಟು 28 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ 22 ಬಿಜೆಪಿ ಬೆಂಬಲಿತ ಮತ್ತು ಕೇವಲ 6 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರೂ 15 ಮತ ಸುರೇಶ ನೀರಲಗಿ ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ. 

ಕೆಲವು ಸದಸ್ಯರು ತಮ್ಮ ರಾಜಿನಾಮೆಯನ್ನು ಮುಖಂಡರ ಕೈಯಲ್ಲಿ ಬರೆದುಕೊಡಲಾಗಿದೆ ಎನ್ನಲಾಗಿದೆ. ಈ ಕುರಿತು ಸದಸ್ಯರು ಖಚಿತ ಪಡಿಸಿಲ್ಲ. ಇದರಿಂದಾಗಿ ಕೊರಂ ಕೊರತೆಯುಂಟಾಗಿ ಕಾನೂನೂ ತೊಡಕು ಉಂಟಾಗಬಹುದು ಎನ್ನಲಾಗುತ್ತಿದೆ.  ಆದರೆ ಗ್ರಾಮ ಪಂಚಾಯಿತಿಯ ಹೊರಗೆ ಕೆಲಕಾಲ ಎಲ್ಲ ಸದಸ್ಯರು ಗುಂಪಾಗಿ ಸೇರಿಕೊಂಡು ತೀವ್ರ ಚರ್ಚೆ ನಡೆಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT