ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರುದ್ಧ ಹೋರಾಟ: ಜೆಡಿಎಸ್

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಅದನ್ನು ಬೇರುಸಹಿತ ಕಿತ್ತೊಗೆಯಲು ಶಕ್ತಿಮೀರಿ ಹೋರಾಟ ನಡೆಸುತ್ತೇನೆ~ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಶುಕ್ರವಾರ ಘೋಷಿಸಿದರು.

ನಗರದ ಗವಿಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ಪತ್ನಿ ಚೆನ್ನಮ್ಮ ಅವರೊಂದಿಗೆ ಪೂಜೆ ಸಲ್ಲಿಸಿ `ಜನಪರ ಜನತಾ ಯಾತ್ರೆ~ಗೆ ಚಾಲನೆ ನೀಡಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, `ರಾಜ್ಯವನ್ನು ಕೆಟ್ಟ ಪಿಡುಗಿನಿಂದ ಮುಕ್ತ ಗೊಳಿಸಿ, ಜೆಡಿಎಸ್ ಅಧಿಕಾರಕ್ಕೆ ತರಲು ಸಾಮೂಹಿಕ ನಾಯಕತ್ವದಡಿ ಬಿಜೆಪಿ ವಿರುದ್ಧ ಹೋರಾಡುತ್ತೇವೆ~ ಎಂದರು.

 ರಾಜ್ಯ ಇಷ್ಟು ಅಧೋಗತಿಗೆ ಎಂದೂ ತಲುಪಿರಲಿಲ್ಲ. ಪ್ರವಾಸದ ಉದ್ದಕ್ಕೂ ಬಿಜೆಪಿಯ ಭ್ರಷ್ಟಾಚಾರ, ಕೆಟ್ಟ ಆಡಳಿತವನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಬಿಜೆಪಿ ಸರ್ಕಾರವನ್ನು ತೊಲಗಿಸಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

`ಲೋಕಸಭೆ, ವಿಧಾನಸಭೆ ಕಲಾಪಗಳನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ. ಜನತಾ ಪರಿವಾರ ಆಡಳಿತದಲ್ಲಿದ್ದಾಗ ಪಕ್ಷದ ನಾಯಕರು ಯಾವುದೇ ರೀತಿಯ ಅಶ್ಲೀಲ, ಕೀಳುಮಟ್ಟದ ರಾಜಕಾರಣ ಮಾಡಲಿಲ್ಲ. ಆದರೆ ಬಿಜೆಪಿಯಲ್ಲಿ ದಿನಬೆಳಗಾದರೆ ಇಂತಹ ಪ್ರಕರಣಗಳು ನಡೆಯುತ್ತಿವೆ. ಕೀಳುಮಟ್ಟದ ವ್ಯವಸ್ಥೆಯನ್ನು ಬುಡಸಮೇತ ಕಿತ್ತುಹಾಕಲು ಹೋರಾಟ ನಡೆಸುತ್ತೇನೆ~ ಎಂದರು.

 `ಜೆಡಿಎಸ್‌ಗೆ ಉತ್ತರ ಕರ್ನಾಟಕ, ಹಳೆ ಮೈಸೂರು ಎಂಬ ಭೇದಭಾವ ಇಲ್ಲ. ಎಲ್ಲ ಪ್ರದೇಶಗಳನ್ನು ಸಮಾನ ದೃಷ್ಟಿಯಿಂದ ೋಡುತ್ತೇವೆ. ಪಕ್ಷ ಸಂಘಟನೆಗಾಗಿ ಎಲ್ಲ ಕಡೆ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಪಕ್ಷವನ್ನು ಯಾರೂ ಸಂಶಯದಿಂದ ನೋಡಬಾರದು. ಜನಪರ ಜನತಾಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿನ ಅನುಮಾನಗಳನ್ನು ಹೋಗಲಾಡಿಸಿ ಸ್ಫೂರ್ತಿ ತುಂಬಲಾಗುವುದು~ ಎಂದು ಹೇಳಿದರು.

ಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರವಾಸ ಆರಂಭಿಸಿದಾಗ ಪಕ್ಷ ಅಧಿಕಾರಕ್ಕೆ ಬಂದಿದೆ. ಈಗಲೂ ಅದೇ ನಂಬಿಕೆಯಿಂದ ಪೂಜೆ ಸಲ್ಲಿಸಿ ಪ್ರವಾಸ ಆರಂಭಿಸಿದ್ದೇವೆ.   ಮಾರ್ಚ್ 8ರೊಳಗೆ ಪ್ರವಾಸ ಮುಗಿಯಲಿದೆ. ನಂತರ ಹಿರಿಯ ನಾಯಕರೆಲ್ಲ ಕುಳಿತು ಮುಂದಿನ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದರು.
ಹಿರಿಯ ನಾಯಕರೆಲ್ಲ ಬಸ್‌ನಲ್ಲೇ ಪ್ರಯಾಣ ಬೆಳೆಸಿದ್ದು, ಬಸ್‌ಗೆ `ಜಯ ವಾಹಿನಿ~ ಎಂದು ಹೆಸರಿಡಲಾಗಿದೆ.

ಪ್ರವಾಸ ಆರಂಭಕ್ಕೂ ಮುನ್ನ ಪಕ್ಷದ ಎಲ್ಲ ಹಿರಿಯ ನಾಯಕರಿಗೆ ಪಕ್ಷದ ಚಿಹ್ನೆಯಾದ ತೆನೆಹೊತ್ತ ಮಹಿಳೆಯ ಬಾವುಟವನ್ನು ನೀಡಲಾಯಿತು. ಮೊದಲ ಹಂತದಲ್ಲಿ ಹತ್ತು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುತ್ತದೆ. ಹಿರಿಯ ಮುಖಂಡರೆಲ್ಲ ಸೇರಿ ಬಸ್‌ನಲ್ಲಿ ಪ್ರವಾಸ ಮಾಡುವ ಮೂಲಕ ಜೆಡಿಎಸ್ ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶೆಂಪುರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ನಟಿ ಪೂಜಾ ಗಾಂಧಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT