ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಯರ್ ಕ್ಲಬ್ ಅಕ್ಟೋಬರ್ ಫೆಸ್ಟ್

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಕ್ಟೋಬರ್ ಫೆಸ್ಟ್ ಅಥವಾ  ಉತ್ಸವ 1800ರ ಆರಂಭದ ದಶಕಗಳಲ್ಲಿ ಜರ್ಮನಿಯಲ್ಲಿ ಆರಂಭವಾದ ಉತ್ಸವ. ನೃತ್ಯ, ಸಂಗೀತ, ಸಂಸ್ಕೃತಿಯೊಂದಿಗೆ ತಳಕು ಹಾಕಿಕೊಂಡ ಈ ಉತ್ಸವದಲ್ಲಿ ಕುಣಿತ, ಕುಡಿತ, ಮೋಜು ಎಲ್ಲವೂ ಇರುತ್ತದೆ. ಇಂದಿಗೂ ಅಕ್ಟೋಬರ್ ಬಂತು ಅಂದರೆ ಜರ್ಮನಿಯಲ್ಲಿ ಹಬ್ಬದ ಸಂಭ್ರಮ ಗರಿಗೆದರುತ್ತದೆ.

ನಗರದ ಬಿಯರ್ ಕ್ಲಬ್ ಸಹ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ  `ಅಕ್ಟೋಬರ್ ಫೆಸ್ಟ್~ ಆಚರಿಸುತ್ತಿದೆ. ಜರ್ಮನಿಯ ವಿಶೇಷ ಬಿಯರ್‌ಗಳು, ಆಹಾರ, ಆಟಗಳು `ಫೆಸ್ಟ್~ನಲ್ಲಿ ಇರುತ್ತವೆ. ಇದರ ಜೊತೆ ಪಾಶ್ಚಿಮಾತ್ಯ ಸಂಗೀತ ಕಾರ್ಯಕ್ರಮ, ಕ್ಯಾರಿಕೇಚರ್ ಕಲಾವಿದರು ಇರುತ್ತಾರೆ. ಈಗಾಗಲೆ ನಡೆಯುತ್ತಿರುವ ಅ. 1ಕ್ಕೆ ಕೊನೆಗೊಳ್ಳಲಿದೆ. ಸ್ಥಳ: ದಿ ಬಿಯರ್ ಕ್ಲಬ್, 20/2, ವಿಠ್ಠಲ ಮಲ್ಯ ರಸ್ತೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT