ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: 23,757 ಹೊಸ ಮತದಾರರ ಸೇರ್ಪಡೆ

Last Updated 18 ಏಪ್ರಿಲ್ 2013, 9:11 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಮತಪಟ್ಟಿಗಳ ಪರಿಷ್ಕರಣೆಯ ಬಳಿಕ ಹೊಸದಾಗಿ 23,757 ಮತದಾರರು ಸೇರ್ಪಡೆಯಾಗಿದ್ದು,ಪರಿಷ್ಕೃತ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 11,62,374 ಲಕ್ಷ ಆಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರು, `ಎಲ್ಲ ಹೊಸ ಮತದಾರರಿಗೂ ಭಾವಚಿತ್ರವುಳ್ಳ ಗುರುತು ಚೀಟಿ ನೀಡಲಾಗುವುದು.  ಇದಕ್ಕಾಗಿ ಮತದಾರರು ಹಣ ತೆರಬೇಕಾಗಿಲ್ಲ' ಎಂದು ಸ್ಪಷ್ಟಪಡಿಸಿದರು.

`ಮತದಾರರಿಗೆ ಹೊಸ ಗುರುತು ಚೀಟಿ ನೀಡಲು ಹಣ ಪಡೆಯಲಾಗುತ್ತಿದೆ ಎಂಬ ದೂರು ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ ಅವರು, ಹೊಸ ಮತದಾರರು ಗುರುತು ಚೀಟಿ ಪಡೆಯಲು ಹಣ ನೀಡಬೇಕಿಲ್ಲ. ಆದರೆ, ಈಗಾಗಲೇ ಗುರುತು ಚೀಟಿ ಪಡೆದು ಕಳೆದುಕೊಂಡಿದ್ದಲ್ಲಿ ನಕಲು ಪಡೆಯಲು ಮಾತ್ರ ರೂ. 25 ಪಾವತಿಸಬೇಕು' ಎಂದು ತಿಳಿಸಿದರು.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕೋರಿ ಒಟ್ಟು 35,610 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಒಟ್ಟು 29263 ಅರ್ಜಿಗಳನ್ನು ಪರಿಗಣಿಸಲಾಗಿದ್ದು, ಅರ್ಜಿದಾರರ ಖುದ್ದು ಹಾಜರಿಯನ್ನು ಪರಿಶೀಲಿಸಿದ ಬಳಿಕವೇ ಹೆಸರು ಸೇರ್ಪಡೆಗೆ ಕ್ರಮ ಕೈಗೊಳ್ಳಳಾಗಿದೆ ಎಂದು ತಿಳಿಸಿದರು.

ಅಲ್ಲದೆ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಕಾರ್ಯವನ್ನು ಜಿಲ್ಲಾಡಳಿತ ಸ್ವಯಂ ಪ್ರೇರಿತವಾಗಿಕೈಗೊಂಡಿಲ್ಲ. ಈ ಸಂಬಂಧ ಬಂದ ಅರ್ಜಿಗಳನ್ನು ಪರಿಶೀಲಿಸಿ, 5,506 ಹೆಸರುಗಳನ್ನು ಕೈಬಿಡಲಾಗಿದೆ. ಅದರಂತೆ, ಎರಡು ಕಡೆ ಹೆಸರಿದ್ದ ಪ್ರಕಣಗಳಲ್ಲಿ 12,964 ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಎಲ್ಲ ಮತದಾರರಿಗೂ ಭಾವಚಿತ್ರವುಳ್ಳ ಗುರುತುಪತ್ರ ಇರುವಂತೆ ಒತ್ತು ನೀಡಲಾಗಿದೆ. ಮತದಾರರ ಗುರುತು ಚೀಟಿಯಲ್ಲಿ ಮುದ್ರಣ ದೋಷವಿದ್ದರೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪರಿಷ್ಕರಣೆ ನಂತರ ಹುಮನಾಬಾದ್ ಕ್ಷೇತ್ರದಲ್ಲಿ 2.05 ಲಕ್ಷ,ಬಸವಕಲ್ಯಾಣ 1.97 ಲಕ್ಷ, ಬೀದರ್ ದಕ್ಷಿಣ 1.83 ಲಕ್ಷ, ಬೀದರ್ 1.89 ಲಕ್ಷ, ಭಾಲ್ಕಿ 1.99 ಲಕ್ಷ ಮತ್ತು ಔರಾದ್ ಕ್ಷೇತ್ರದಲ್ಲಿ 1.87 ಲಕ್ಷ ಮತದಾರರು ಇದ್ದಾರೆ ಎಂದು ವಿವರಿಸಿದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT