ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್‌ ಮೊತ್ತದತ್ತ ಪಾಕ್‌

Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ಅಬುಧಾಬಿ (ರಾಯಿಟರ್ಸ್‌): ನಾಯಕ ಮಿಸ್ಬಾ ಉಲ್‌ ಹಕ್‌ (ಬ್ಯಾಟಿಂಗ್‌ 105) ಹಾಗೂ ಯೂನಿಸ್‌ ಖಾನ್‌ (136) ಅವರ ಶತಕಗಳ ನೆರವಿನಿಂದ ಪಾಕಿಸ್ತಾನ ತಂಡದವರು ಇಲ್ಲಿ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು   ಬೃಹತ್‌ ಮೊತ್ತ ದಾಖಲಿಸುವತ್ತ ದಾಪುಗಾಲಿಟ್ಟಿದ್ದಾರೆ.

ಅಬುಧಾಬಿಯ ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಲಂಕಾದ 204 ರನ್‌ಗಳಿಗೆ ಉತ್ತರವಾಗಿ ಪಾಕ್‌ ತನ್ನ ಮೊದಲ ಇನಿಂಗ್ಸ್‌ನಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 109 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 327 ರನ್‌ ಗಳಿಸಿದೆ. ಈ ಮೂಲಕ 123 ರನ್‌ಗಳ ಮುನ್ನಡೆ ಸಾಧಿಸಿದೆ.

ಪಾಕ್‌ 83 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಯೂನಿಸ್‌ ಹಾಗೂ ಮಿಸ್ಬಾ ತಂಡಕ್ಕೆ ಆಸರೆಯಾದರು. ಸಿಂಹಳೀಯ ಪಡೆಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 218 ರನ್‌ ಸೇರಿಸಿದರು. ಮೊದಲು ನಿಧಾನಗತಿ ಆಟಕ್ಕೆ ಮೊರೆ ಹೋದ ಈ ಜೋಡಿ ನಂತರ ಬಿರುಸಾಗಿ ರನ್‌ ಪೇರಿಸಿತು.

198 ಎಸೆತಗಳನ್ನು ಎದುರಿಸಿದ ಯೂನಿಸ್‌ ತಮ್ಮ 23ನೇ ಶತಕ ದಾಖಲಿಸಿದರು. ಅವರ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಹಾಗೂ 19 ಬೌಂಡರಿಗಳಿದ್ದವು.

ಅಮೋಘ ಫಾರ್ಮ್‌ನಲ್ಲಿರುವ ಮಿಸ್ಬಾ ಐದನೇ ಶತಕ ಗಳಿಸಿದರು. 250 ಎಸೆತಗಳನ್ನು ಎದುರಿಸಿರುವ ಅವರು 13 ಬೌಂಡರಿ ಗಳಿಸಿದ್ದಾರೆ. ಲಂಕಾ ಪರ ಶಮಿಂದಾ ಎರಂಗಾ (63ಕ್ಕೆ2) ಯಶಸ್ವಿ ಬೌಲರ್‌   ಎನಿಸಿದರು.

ಸಂಕ್ಷಿಪ್ತ ಸ್ಕೋರ್‌ 
ಶ್ರೀಲಂಕಾ ಮೊದಲ ಇನಿಂಗ್ಸ್‌ 65 ಓವರ್‌ಗಳಲ್ಲಿ 204; ಪಾಕಿಸ್ತಾನ ಮೊದಲ ಇನಿಂಗ್ಸ್‌ 109 ಓವರ್‌ಗಳಲ್ಲಿ 4 ವಿಕೆಟ್‌ಗೆ 327 (ಅಹ್ಮದ್‌ ಶೆಹಜಾದ್‌ 38, ಯೂನಿಸ್‌ ಖಾನ್‌ 136, ಮಿಸ್ಬಾ ಉಲ್‌ ಹಕ್ ಬ್ಯಾಟಿಂಗ್‌ 105; ಶಮಿಂದಾ ಎರಂಗಾ 63ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT