ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಅಡ್ವಾಣಿ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಯಪುರ (ಪಿಟಿಐ): `ಜನಚೇತನ~ ಯಾತ್ರೆ ಕರ್ನಾಟಕವನ್ನು ಸುತ್ತಲಿದೆ ಮತ್ತು ಈ ಸಂದರ್ಭ ಬೆಂಗಳೂರಿಗೆ ಭೇಟಿ ನೀಡುವುದೂ ಅಷ್ಟೇ ಖಚಿತ ಎಂದು ಭಾನುವಾರ ಇಲ್ಲಿ ಸುದ್ದಿಗಾರರಿಗೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸ್ಪಷ್ಟಪಡಿಸಿದ್ದಾರೆ.

ನೀವು ಬೆಂಗಳೂರಿಗೆ ಹೋಗುತ್ತೀರಾ? ನಿಮ್ಮ ಕರ್ನಾಟಕ ಭೇಟಿ ಖಚಿತವೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, `ನನ್ನ ಕರ್ನಾಟಕ ಪ್ರವಾಸ ರದ್ದುಗೊಂಡಿದೆ ಎಂದು ನಿಮಗೆ ಯಾರು ಹೇಳಿದರು ಎಂದು  ಅವರು ಸುದ್ದಿಗಾರರನ್ನೇ ಮರುಪ್ರಶ್ನಿಸಿದರು. `ಈ ಮಾತನ್ನು ನಿಮ್ಮ ಬಾಯಿಂದಲೇ ಕೇಳುತ್ತಿದ್ದೇನೆ. ನನಗೆ ಈ ವಿಷಯವೇ ಗೊತ್ತಿಲ್ಲ. ನನ್ನ ರಥಯಾತ್ರೆ ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯಲಿದೆ~ ಎಂದು ಅಡ್ವಾಣಿ ನುಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸದ್ಯ ಭ್ರಷ್ಟಾಚಾರಗಳ ಆಪಾದನೆಯಲ್ಲಿ ಜೈಲಿನಲ್ಲಿರುವುದರಿಂದ ಅಡ್ವಾಣಿಯವರ ರಥಯಾತ್ರೆ ಕರ್ನಾಟಕದತ್ತ ಬರುವುದಿಲ್ಲ ಎಂಬ ಸುದ್ದಿ ಶನಿವಾರ ಹರಡಿತ್ತು. ಪಕ್ಷದ ಮೂಲಗಳೇ ಈ ಸುದ್ದಿಯನ್ನು ಹರಿಬಿಟ್ಟಿದ್ದವು. ಆದರೆ ಇದನ್ನು ಈಗ ಅಡ್ವಾಣಿ ಅಲ್ಲಗಳೆದಿದ್ದಾರೆ.

ಯಡಿಯೂರಪ್ಪನವರ ವಿಷಯಕ್ಕೆ ಸಂಬಂಧಿಸಿದಂತೆ ಅಡ್ವಾಣಿ ಭಾನುವಾರ ಹೆಚ್ಚು ಮಾತನಾಡಲು ಇಚ್ಛಿಸಲಿಲ್ಲ.
ನಿಗದಿತ ವೇಳಾಪಟ್ಟಿಯ ಅನುಸಾರ ಇದೇ 30ರಂದು `ಜನಚೇತನ~ ಯಾತ್ರೆ ಕರ್ನಾಟಕ ಪ್ರವೇಶಿಸಬೇಕಿದೆ. ಯಾತ್ರೆಯು ಕೇರಳದ ಕಾಸರಗೋಡು ಮುಖಾಂತರ ಮಂಗಳೂರಿಗೆ ಆಗಮಿಸಲಿದ್ದು ಅಂದೇ ಮಂಗಳೂರು, ಉಡುಪಿಯಲ್ಲಿ ಸಂಚರಿಸಿ 31ರಂದು ಹೊನ್ನಾವರಕ್ಕೆ ತೆರಳಲಿದೆ.

ಚಿದಂಬರಂ ವಿರುದ್ಧ ವಾಗ್ದಾಳಿ: 2ಜಿ ತರಂಗಾಂತರ ಪರವಾನಗಿ ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ವಿರುದ್ಧ ಅಡ್ವಾಣಿ ಇದೇ ವೇಳೆ ತೀವ್ರ ವಾಗ್ದಾಳಿ ನಡೆಸಿದರು. ಈ ವಿಷಯದಲ್ಲಿ ಚಿದಂಬರಂ ಅವರ ಪಾತ್ರದ ಬಗ್ಗೆ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT