ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದು

Last Updated 25 ಫೆಬ್ರುವರಿ 2011, 20:00 IST
ಅಕ್ಷರ ಗಾತ್ರ

ಫೆಬ್ರುವರಿ 26, ಶನಿವಾರ
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ: ಚಾಮರಾಜಪೇಟೆ. ಪದವಿ ಪ್ರದಾನ ಸಮಾರಂಭ. ಅತಿಥಿಗಳು- ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಸಚಿವ ಎಸ್.ಎ.ರಾಮದಾಸ್, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಎಂ.ವಿಠಲ ಮೂರ್ತಿ. ಬೆಳಿಗ್ಗೆ 11.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ದೊಮ್ಮಲೂರು. ನೂತನ ಸಂಚಾರ ಮತ್ತು ಸಾಗಣೆ ನಿರ್ವಹಣಾ ಕೇಂದ್ರದ ಆವರಣ. ಉದ್ಘಾಟನೆ- ಸಚಿವ ಆರ್.ಅಶೋಕ. ಅತಿಥಿಗಳು- ಸಚಿವ ಎಸ್.ಸುರೇಶ್‌ಕುಮಾರ್, ಮೇಯರ್ ಎಸ್.ಕೆ.ನಟರಾಜ್, ಸಂಸದ ಪಿ.ಸಿ.ಮೋಹನ್, ಅಧ್ಯಕ್ಷತೆ- ಶಾಸಕ ಎನ್.ಎ.ಹ್ಯಾರೀಸ್. ಬೆಳಿಗ್ಗೆ 10.30.

ಅಖಿಲ ಕರ್ನಾಟಕ ಕುಮಾರಣ್ಣ ಸೇನಾ ಸಮಿತಿ: ಹೆಗ್ಗನಹಳ್ಳಿ ಬಸ್ ನಿಲ್ದಾಣದ ಹಿಂಭಾಗ, ಪೀಣ್ಯ 2ನೇ ಹಂತ. ಸಮಿತಿಯ ಉದ್ಘಾಟನಾ ಸಮಾರಂಭ. ಉದ್ಘಾಟನೆ- ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ಅತಿಥಿಗಳು-ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಸಂಸದ ಎನ್.ಚೆಲುವರಾಯಸ್ವಾಮಿ, ಪಕ್ಷದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಶಾಸಕರಾದ ಎಚ್.ಸಿ.ಬಾಲಕೃಷ್ಣ. ಪುಟ್ಟಣ್ಣ, ಇ.ಕೃಷ್ಣಪ್ಪ, ಎಸ್.ಆರ್.ಶ್ರೀನಿವಾಸ್, ಮಾಜಿ ಸಚಿವ ಸಿ.ಚೆನ್ನಿಗಪ್ಪ, ಮಾಜಿ ಶಾಸಕ ಎಸ್.ಪಿ.ಮುದ್ದುಹನುಮೇಗೌಡ. ಸಂಜೆ 5.30.

ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ: ಶಿಕ್ಷಕರ ಸದನ, ಮೈಸೂರು ಬ್ಯಾಂಕ್ ವೃತ್ತ. ಅನುದಾನಿತ ಪ್ರಾಥಮಿಕ ಶಾಲೆಗಳ ಶೈಕ್ಷಣಿಕ ಸಮ್ಮೇಳನ. ಉದ್ಘಾಟನೆ- ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಅತಿಥಿ- ಮೇಯರ್ ಎಸ್.ಕೆ.ನಟರಾಜ್. ಮಧ್ಯಾಹ್ನ12.30.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ: 17ನೇ ಅಡ್ಡರಸ್ತೆ, ಮಾಗಡಿ ರಸ್ತೆ, ವಿಜಯನಗರ. ರಾಷ್ಟ್ರೀಯ ಕೈಗಾರಿಕಾ ವಸ್ತುಗಳ ಮಾರಾಟ ಪ್ರಕ್ರಿಯೆಯ ಅಭಿವೃದ್ಧಿ ಕುರಿತು ವಿಚಾರ ಸಂಕಿರಣ. ಉದ್ಘಾಟನೆ- ಸಚಿವ ಸಿ.ಎಚ್.ಶಿವಶಂಕರ್. ಅತಿಥಿಗಳು- ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಬಿ.ಎಸ್.ರಾಮಪ್ರಸಾದ್, ಎನ್‌ಎಸ್‌ಐಸಿ ಸಂಸ್ಥೆಯ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ಪಿ.ರವಿಕುಮಾರ್, ಸಂಘದ ಅಧ್ಯಕ್ಷ ಎಸ್.ಎಸ್.ಬಿರಾದರ್.ಬೆಳಿಗ್ಗೆ 10.

ಕಾವ್ಯಕಲಾ ಪ್ರಕಾಶನ: ಪಂಪ ಸಭಾಂಗಣ, ಕರ್ನಾಟಕ ಸಾಹಿತ್ಯ ಪರಿಷತ್ತು, ವಿಜಯನಗರ. ಡಾ.ಸಿ.ವೀರಣ್ಣ ಅವರ ‘ ಮಹಾಭಾರತ ಮಂಥನ’, ‘ಕನ್ನಡ ಕಾವ್ಯ ಕಂಡ ಹೆಣ್ಣು’, ‘ನಿರಂತರ ಭಾರತ- ನಾಟಕ’, ‘ಒಬ್ಬನೇ ಹೇಳಿದ 22 ಜನಪದ ಕತೆಗಳು’ ಕೃತಿಗಳ ಬಿಡುಗಡೆ ಸಮಾರಂಭ. ಅತಿಥಿಗಳು- ಪ್ರೊ.ಕೆ.ಜಿ.ನಾಗರಾಜಪ್ಪ, ಡಾ.ಎಲ್.ಜಿ.ಮೀರಾ, ಎಲ್.ಎನ್.ಮುಕುಂದರಾಜ್, ಡಾ.ಟಿ.ಗೋವಿಂದರಾಜ್. ಅಧ್ಯಕ್ಷತೆ- ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು.ಚನ್ನಬಸಪ್ಪ. ಸಂಜೆ 5.30.

ವಿದ್ಯಮಾನ ವೇದಿಕೆ: ಗಾಂಧಿ ಭವನ, ಕುಮಾರಪಾರ್ಕ್ ಪೂರ್ವ. ‘ಕೃಷಿ ಬಜೆಟ್ ಮತ್ತು ಕರ್ನಾಟಕ ಬಜೆಟ್ 2011’ ಕುರಿತು ವಿಶ್ಲೇಷಣೆ ಮತ್ತು ಸಂವಾದ ಕಾರ್ಯಕ್ರಮ. ಅತಿಥಿ- ಸಾಮಾಜಿಕ ಮತ್ತು ಆರ್ಥಿಕ ಬದಲಾವಣಾ ಸಂಸ್ಥೆಯ ನಿರ್ದೇಶಕ ಆರ್.ಎಸ್.ದೇಶಪಾಂಡೆ. ಸಂಜೆ 5.

ರೋಟರಿ ಬೆಂಗಳೂರು: ಹನುಮಂತನಗರ. ಪೊಲಿಯೋ ಜಾಗೃತಿ ಜಾಥಾ. ಉದ್ಘಾಟನೆ- ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ. ಅತಿಥಿ- ನಟಿ ಜಯಂತಿ. ಅಧ್ಯಕ್ಷತೆ- ರೋಟರಿ ಹನುಮಂತನಗರ ಅಧ್ಯಕ್ಷ ಪಟೇಲ್‌ಪಾಂಡು. ಬೆಳಿಗ್ಗೆ 10.30.

ಕಲಾನಿಕೇತನ ಟ್ರಸ್ಟ್: ರಂಗಜಂಗಮ ಕಲಾಮಂದಿರ, ಬಿಜಿಎಸ್ ಇಂಟರ್‌ನ್ಯಾಷನಲ್ ಸ್ಕೂಲ್ ರಸ್ತೆ, ಕೆಂಗೇರಿ ಹೋಬಳಿ. ಸಂಸ್ಕೃತಿ ಹಬ್ಬ. ಉದ್ಘಾಟನೆ- ಸಚಿವೆ ಶೋಭಾ ಕರಂದ್ಲಾಜೆ. ಅತಿಥಿಗಳು- ಚಿತ್ರ ಸಾಹಿತಿ ಶಿವಶಂಕರ್, ಬಿಜೆಪಿ ಮುಖಂಡ ಮದನ್ ಪಟೇಲ್. ಅಧ್ಯಕ್ಷತೆ- ಮೈಸೂರು ರಂಗಾಯಣ ನಿರ್ದೇಶಕ ಪ್ರೊ. ಲಿಂಗದೇವರು ಹಳೆಮನೆ. ಸಂಜೆ 4.

ಜಯನಗರ ಸಾಂಸ್ಕೃತಿಕ ಮತ್ತು ನಾಗರಿಕರ ಸಂಸ್ಥೆ: ಜಯನಗರ 4ನೇ ಬಡಾವಣೆ. ಜನಪದ ಗೀತೆಗಳ ಗಾಯನ- ಅಪ್ಪಗೆರೆ ತಿಮ್ಮರಾಜು ಮತ್ತು ತಂಡ. ಸಂಜೆ 6.

ಉದ್ಯೋಗ ಮತ್ತು ತರಬೇತಿ ಇಲಾಖೆ: 2ನೇ ಮಹಡಿ, ಜನತಾ ಬಜಾರ್, ಕೆ.ಜಿ.ರಸ್ತೆ. ಮಿನಿ ಉದ್ಯೋಗ ಮೇಳ. ಬೆಳಿಗ್ಗೆ 10.

ಚಿಲ್ಡ್ರನ್ ಇಂಡಿಯಾ: ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪ, ಬಸವೇಶ್ವರನಗರ. ಅಪ್ಪು ಪಪ್ಪು ಚಿತ್ರ ಪ್ರದರ್ಶನ. ಉದ್ಘಾಟನೆ- ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್. ಅತಿಥಿಗಳು- ಸಂಗೀತ ನಿರ್ದೇಶಕ ವಿ.ಮನೋಹರ್, ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್. ಅಧ್ಯಕ್ಷತೆ- ಪಾಲಿಕೆ ಸದಸ್ಯ ಗಂಗಬೈರಯ್ಯ. ಸಂಜೆ 6.

ಶೇಷಾದ್ರಿಪುರ ಎಜುಕೇಷನ್ ಟ್ರಸ್ಟ್: ಕಾಲೇಜಿನ ಆವರಣ, ಶೇಷಾದ್ರಿಪುರ. ಪೂರ್ವಭಾವಿ ಕಾರ್ಯಕ್ರಮ. ಉದ್ಘಾಟನೆ- ಟ್ರಸ್ಟ್‌ನ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ. ಮಧ್ಯಾಹ್ನ 2.

ಮನರಂಜಿನಿ ಪ್ರತಿಷ್ಠಾನ: ಸೇಂಟ್ ಜಾನ್ಸ್ ಸಭಾಂಗಣ, ಕೋರಮಂಗಲ. ಅನೂಪ್ ಜಲೋಟ ಅವರಿಂದ ಸಂಗೀತ ಕಾರ್ಯಕ್ರಮ. ಸಂಜೆ 5.30.

ಮಲ್ಲೇಶ್ವರ ಸಂಗೀತ ಸಭಾ: ಪಶ್ಚಿಮ ಉದ್ಯಾನ ರಸ್ತೆ. ಮಲ್ಲೇಶ್ವರ. ಗಾಯನ- ವಿದ್ಯಾ ಕಲ್ಯಾಣರಾಮನ್. ಪಿಟೀಲು-ಟಿ.ಎಸ್.ಕೃಷ್ಣಮೂರ್ತಿ. ಖಂಜರಿ- ಜಿ.ಎಸ್.ನಾಗರಾಜ್. ಮೃದಂಗ- ಬಿ.ಎಸ್.ಪ್ರಶಾಂತ್. ಸಂಜೆ 6.

ರಿಲಯನ್ಸ್ ಟೈಮ್‌ಔಟ್: ಕನ್ನಿಂಗ್‌ಹ್ಯಾಮ್ ರಸ್ತೆ. ‘ಅರ್ಬನ್ ಶಾಟ್ಸ್ ಮತ್ತು ಅನದರ್ ಚಾನ್ಸ್’ ಪುಸ್ತಕದ ಕುರಿತು ಸಂವಾದ. ಸಂಜೆ 5.

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ:  ಇಂಡಿಯನ್ ಕಾರ್ಟೂನ್ ಗ್ಯಾಲರಿ, ಮಿಡ್‌ಫೋರ್ಡ್ ಹೌಸ್, ಟ್ರಿನಿಟಿ ವೃತ್ತ. ದಿವಂಗತ ಅಬು ಅಬ್ರಹಾಂ ಅವರ ವ್ಯಂಗಚಿತ್ರ ಪ್ರದರ್ಶನ ಉದ್ಘಾಟನೆ- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಥಾಪಕ ಅಧ್ಯಕ್ಷ ಪ್ರೊ.ಎನ್.ಎಸ್.ರಾಮಸ್ವಾಮಿ. ಅತಿಥಿ- ಇತಿಹಾಸ ತಜ್ಞ ರಾಮಚಂದ್ರ ಗುಹಾ. ಸಂಜೆ 4.

ಈಶಾನ್ಯ ಟಿಬೇಟನ್ ವೇದಿಕೆ:  ಸೇಂಟ್ ಜೋಸೆಫ್ ಕಾಲೇಜು, ಲಾಲ್‌ಬಾಗ್ ರಸ್ತೆ. ಈಶಾನ್ಯ ಟಿಬೇಟನ್ ಉತ್ಸವ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಆಹಾರೋತ್ಸವ. ಅತಿಥಿ- ತ್ರಿಪುರಾ ರಾಜವಂಶದ ಕಿರಿಟ್ ಪ್ರದ್ಯೋತ್‌ದೇಬ್ ಬರ್ಮನ್.  ಸಂಜೆ 5.

ರಾಜಮಹಲ್ ವಿಲಾಸ್ ಸಂಗೀತ ಸಭಾ: ರಘೋತ್ತಮ್ ಸ್ಮಾರಕ ಕಟ್ಟಡ, ಅಂಚೆ ಕಚೇರಿ ಮೇಲೆ, ಸಂಜಯನಗರ. 15ನೇ ವಾರ್ಷಿಕ ಸಂಗೀತ ಉತ್ಸವ, ಪುರಂದರದಾಸರ ಮತ್ತು ತ್ಯಾಗರಾಜರ ಆರಾಧನೆ. ಅತಿಥಿ- ಅಶೋಕ ಹಾರ್ನಳ್ಳಿ. ಗಾಯನ- ಡಾ.ಟಿ.ಎಸ್.ಸತ್ಯವತಿ. ಪಿಟೀಲು-ನಳಿನ ಮೋಹನ್. ಮೃದಂಗ -ಅರ್ಜುನ್‌ಕುಮಾರ್. ಘಟ-ಸುಕನ್ಯ ರಾಮ್‌ಗೋಪಾಲ್. ಸಂಜೆ 6.

ರಂಗದರ್ಶಿ
ಬೃಹತ್ ಬೆಂಗಳೂರು ಹೋಟೆಲುಗಳ ಸಂಘ: ಗಾಯನ ಸಮಾಜ, ಕೆ.ಆರ್.ರಸ್ತೆ. ಕರ್ನಾಟಕ ಕಲಾದರ್ಶಿನಿ ತಂಡದಿಂದ ‘ಕರ್ಣಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನ. ಮಧ್ಯಾಹ್ನ 2.30.

ರಂಗಶಂಕರ: ಜೆ.ಪಿ.ನಗರ. ‘ಆಲ್ ಈಸ್ ವೆಲ್’ ಇಂಗ್ಲಿಷ್ ನಾಟಕ ಪ್ರದರ್ಶನ. ರಂಗರೂಪ ಮತ್ತು ಅಭಿನಯ- ಸುಂದರ್ ಲಕ್ಷ್ಮೀ ಚಂದ್ರಶೇಖರ್. ನಿರ್ದೇಶನ- ಪ್ರಮೋದ ಶಿಗ್ಗಾಂವ. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ
ಗೀತಾ ಜ್ಞಾನ ಯಜ್ಞ: ವಾಸವಿ ದೇವಸ್ಥಾನ, 7ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ. ಶ್ರೀಮದ್ ಭಗವದ್ಗೀತಾ ಕುರಿತು ಪ್ರವಚನ- ಅಭಯ ಚೈತನ್ಯ. ಸಂಜೆ 7.

ಸಾಯಿ ಗೀತಾಂಜಲಿ: ಸತ್ಯ ಸೇವಾ ಕ್ಷೇತ್ರ, 21ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಜೆ.ಪಿ.ನಗರ. ಭಜನೆ. ಸಂಜೆ 4.

ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಸ್ಥಾನ, ಮಹಾಲಕ್ಷ್ಮೀಪುರ. ಭರತನಾಟ್ಯ- ಸುರಭಿ ತಂಡ. ಸಂಜೆ 6.30.

ಸದ್ವಿಚಾರ ಸೇವಾ ಟ್ರಸ್ಟ್: ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ ಬಿಎಂಎಸ್ ಕಾಲೇಜು ಸಮೀಪ, ಬಸವನಗುಡಿ. 108 ದಿನಗಳ ಶ್ರೀಮನ್ ಮಹಾಭಾರತ ಪ್ರವಚನ ಮಾಲಿಕೆಯಲ್ಲಿ ಎಚ್.ಸತ್ಯನಾರಾಯಣಾಚಾರ್ಯ ಅವರಿಂದ ಪ್ರವಚನ. ಸಂಜೆ 6.30.

ವೇದಾಂತ ಸತ್ಸಂಗ ಕೇಂದ್ರ: ಸಾಕಮ್ಮಉದ್ಯಾನ, ಬಸವನಗುಡಿ. ‘ಛಾಂದೋಗ್ಯೋಪನಿಷತ್’ ಕುರಿತು ಕೆ.ಜಿ.ಸುಬ್ರಾಯಶರ್ಮಾ. ಉಪನ್ಯಾಸ. ಬೆಳಿಗ್ಗೆ 9.

ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ರಾಗಿಗುಡ್ಡ ದೇವಸ್ಥಾನ, 9ನೇ ಬ್ಲಾಕ್ ಜಯನಗರ. ‘ಉಪನಿಷತ್‌ನಲ್ಲಿ ಪ್ರಾಣತತ್ವ’ ಕುರಿತು ಉಪನ್ಯಾಸ- ಪ್ರೊ.ಜಿ.ಪಿ.ನಾಗರಾಜಾಚಾರ್ಯ. ಸಂಜೆ 6.30.

ಪಾರಂಪರಿಕ ಸಂಸ್ಕೃತಿ ಸೇವಾ ಸಮಿತಿ-ಹೆರಿಟೇಜ್: ದೊಡ್ಡ ಬಸವಣ್ಣ ದೇವಸ್ಥಾನ, ಬಸವನಗುಡಿ. ಗುಡಿಯ ಸಂಭ್ರಮ ರಮೇಶ್ ಕುಲಕರ್ಣಿ ಹಿಂದೂಸ್ತಾನಿ ಸಂಗೀತ- ರಾಧಾ ಕಲ್ಪ. ಭರತನಾಟ್ಯ- ಮಂಟಪ್ ಪ್ರಭಾಕರ್.  ಸಂಜೆ 5.30.

ಚಿನ್ಮಯ ಮಿಷನ್: ನಂ.1, 4ನೇ ಅಡ್ಡ ರಸ್ತೆ, ಡಾಲರ್ಸ್‌ ಕಾಲೋನಿ, 4ನೇ ಹಂತ, ಜೆ.ಪಿ.ನಗರ. ಮಹಾಶಿವರಾತ್ರಿ ಮಹೋತ್ಸವ. ರುದ್ರಾಭಿಷೇಕ. ಬೆಳಿಗ್ಗೆ 7.15. ಶಿವ ಸಹಸ್ರನಾಮ ಅರ್ಚನೆ, ಭಜನೆ. ಬೆಳಿಗ್ಗೆ 11.

ಬನಗಿರಿ ವರಸಿದ್ಧಿ ವಿನಾಯಕ ಮಂಡಳಿ ಟ್ರಸ್ಟ್:  100 ಅಡಿ ರಸ್ತೆ, ಬನಶಂಕರಿ, 3ನೇ ಹಂತ. ವಾರ್ಷಿಕೋತ್ಸವ. ನವಗ್ರಹ ಹೋಮ. ಬೆಳಿಗ್ಗೆ 9.

ಚಿನ್ಮಯ ಮಿಷನ್: ಚಿನ್ಮಯ ವಿದ್ಯಾಲಯ, 15ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ಕೋರಮಂಗಲ. ಬ್ರಹ್ಮಾನಂದ ಅವರಿಂದ ‘ಗೀತಾ ಜ್ಞಾನ ಯಜ್ಞ 7ನೇ ಅಧ್ಯಾತ್ಮ ಪ್ರವಚನ. ಸಂಜೆ 6.30.

ಶಂಕರ ಸೇವಾ ಟ್ರಸ್ಟ್:  ಶ್ರೀರಾಮಾಶ್ರಮ, ರಾಮಚಂದ್ರಾಪುರಮಠ, ವಿವೇಕಾನಂದ ಉದ್ಯಾನವನದ ಬಳಿ,ಗಿರಿನಗರ. ಪ್ರಶ್ನೋತ್ತರ ರತ್ನಮಾಲಿಕ ಕುರಿತು ಡಾ.ರಂಗನಾಥ್ ಅವರಿಂದ ಪ್ರವಚನ.    ಸಂಜೆ 6.30.

ಜ್ಯೋತಿನಗರೇಶ್ವರ ಸ್ವಾಮಿ ಮತ್ತು ಚನ್ನಕೇಶ್ವಸ್ವಾಮಿ ದೇವಸ್ಥಾನಗಳ ಸಮಿತಿ: ಗಾಣಿಗರ ಪೇಟೆ.  ಶ್ರೀಭೂದೇವಿ ನೀಳಾದೇವಿಯವರ ಸಮೇತ ಶ್ರೀ ಚೆನ್ನಕೇಶವಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮ. ಶೇಷವಾಹನೋತ್ಸವ. ಸಂಜೆ 6.30.

ಮಹಾಗಣಪತಿ ಸಂಗೀತ ಸಭಾ: ವಿನಾಯಕನಗರ, ದೇವಸಂದ್ರ, ಕೆ.ಆರ್.ಪುರ. ಪುರಂದರ ದಾಸರ ಮತ್ತು ತ್ಯಾಗರಾಜರ ಆರಾಧನಾ ಮಹೋತ್ಸವ. ಮಧ್ಯಾಹ್ನ 3. 

ರಾಜಮಹಲ್ ವಿಲಾಸ್ ಸಂಗೀತ ಸಭಾ: ನಂ.2, 1ನೇ ಅಡ್ಡ ರಸ್ತೆ, ವಿನಾಯಕ ಬಡಾವಣಿ, ರಾಜಮಹಲ್ ವಿಲಾಸ್, 2ನೇ ಹಂತ. ಡಾ.ಸತ್ಯವತಿ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ. ಸಂಜೆ 6.

ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ: ವಿನಾಯಕ ವೃತ್ತ, ಅರಮನೆ ನಗರ. ವಾರ್ಷಿಕೋತ್ಸವದ ಪ್ರಯುಕ್ತ ಕಲಶ ಸ್ಥಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ. ಬೆಳಿಗ್ಗೆ 6.30.

ಪೂರ್ಣಪ್ರಜ್ಞ ವಿದ್ಯಾಪೀಠ: ಕತ್ತರಗುಪ್ಪೆ ಮುಖ್ಯರಸ್ತೆ. ದಶೋಪನಿಷತ್ ಕುರಿತು ಪ್ರವಚನ- ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ. ಸಂಜೆ 6.45.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT