ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬೆಳಕಿಂಡಿ

Last Updated 9 ನವೆಂಬರ್ 2011, 19:30 IST
ಅಕ್ಷರ ಗಾತ್ರ

* ಬೆಂಗಳೂರಿನ ಮೊದಲ ರೇಸ್‌ಕೋರ್ಸ್ ಇ್ದ್ದದದ್ದು ಆಸ್ಟಿನ್‌ಟೌನ್‌ನಲ್ಲಿ. ಅದಕ್ಕೆ ಸಾಕ್ಷಿಯಾಗಿ ವಿಕ್ಟೋರಿಯಾ ರಸ್ತೆ ಬಳಿ ಈಗಲೂ ಲಾಳಾಕಾರದ ಟ್ರಾಕ್ ಇದೆ.

* ಎಲ್. ಜೆನ್ನಿಂಗ್ ಪ್ರಸಿದ್ಧ ಶಿಲ್ಪಿ. ಈತ ನಿರ್ಮಿಸಿದ ಏಳನೆಯ ಎಡ್ವರ್ಡ್ ಪ್ರತಿಮೆ ಕಬ್ಬನ್‌ಪಾರ್ಕ್‌ನಲ್ಲಿದೆ. ಐರ‌್ಲೆಂಡ್‌ನ ರಾಜನಾಗಿದ್ದ ಎಡ್ವರ್ಡ್ ಭಾರತದ ಸಾಮ್ರಾಟನಾಗಿದ್ದ.

* ಎಫ್‌ಕೆಸಿಸಿಐ (ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಹಾಸಂಘ) ಸ್ಥಾಪನೆಗೊಂಡಿದ್ದು 1916ರ ಮೇ 8 ರಂದು. ಇದು ಅಸ್ತಿತ್ವಕ್ಕೆ ಬಂದಿದ್ದು ಆಡಳಿತಗಾರ, ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರ ಒತ್ತಾಸೆಯಿಂದ.

* ಈಗ ಮೊದಲ ಹಂತದ ಸಂಚಾರ ಆರಂಭಿಸಿರುವ ಬೆಂಗಳೂರು ನಮ್ಮ ಮೆಟ್ರೊ ರೈಲಿನ ಭೂ ಸಮೀಕ್ಷೆ ಶುರುವಾಗಿದ್ದು 2003 ರಲ್ಲಿ.

* ಭಾನುವಾರ ರಜಾ ದಿನ ಎಂದು ಬ್ರಿಟಿಷ್ ಆಡಳಿತವಿದ್ದ ಬೆಂಗಳೂರು ಸೇರಿದಂತೆ ಮೈಸೂರು ಪ್ರಾಂತ್ಯದಲ್ಲಿ ಅಧಿಕೃತವಾಗಿ ಘೋಷಿಸಿದ್ದು 1853 ರಲ್ಲಿ.

* ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ತರಬೇತಿ ಕೇಂದ್ರವನ್ನು 1976ರ ಜುಲೈನಲ್ಲಿ ಬೆಂಗಳೂರಿನ ಕೆಂಗೇರಿ (ಜ್ಞಾನಭಾರತಿ ಸಮೀಪ) ಪ್ರಾರಂಭಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT