ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆ ಒಡ್ಡಲಾಗಿತ್ತು: ಸಂಗೀತಾ ಕುಟುಂಬ

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ದೇವಯಾನಿ ಖೋಬ್ರಾಗಡೆ ಅವರ ಮಾಜಿ ಮನೆಕೆಲಸದಾಕೆ ಸಂಗೀತಾ ರಿಚರ್ಡ್‌ ಅವರನ್ನು ಭಾರತಕ್ಕೆ ವಾಪಸ್‌ ಕರೆಸಿಕೊಳ್ಳುವಂತೆ ಹಲವು ಬಾರಿ ಬೆದರಿಕೆ ಒಡ್ಡಲಾಗಿತ್ತು ಎಂದು ಸಂಗೀತಾ ಕುಟುಂಬ ಆರೋಪಿಸಿದೆ.

ಸಂಗೀತಾ ಅವರ ಕುಟುಂಬದ ಆಪ್ತ­ರೊಬ್ಬರ ಹೇಳಿಕೆಗಳನ್ನು ಉಲ್ಲೇಖಿಸಿರುವ  ದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ, ಅವರ ಕುಟುಂಬದ ಸದಸ್ಯರಿಗೆ ಬೆದರಿಕೆ ಹಾಕಿರುವ ಘಟನೆಗಳ ಬಗ್ಗೆ ವರದಿ ಮಾಡಿದೆ.

ಒಂದು ಘಟನೆಯಲ್ಲಿ, ಸಂಗೀತಾ ಪತಿ ಫಿಲಿಪ್‌ ಅವರು ಮಗುವಿನೊಂದಿಗೆ ಸೈಕಲ್‌ ಸವಾರಿ ಮಾಡುತ್ತಿದ್ದ ಸಂದರ್ಭ­ದಲ್ಲಿ  ಬಂದೂಕು­­ಧಾರಿ ವ್ಯಕ್ತಿಯೊಬ್ಬ ಅವರನ್ನು ತಡೆದು ಪತ್ನಿ­ಯನ್ನು ವಾಪಸ್‌ ಕರೆಸಿಕೊಳ್ಳು­ವಂತೆ ಒತ್ತಾಯಿಸಿದ್ದ ಎಂದು ವರದಿ ಹೇಳಿದೆ.

ದೇವಯಾನಿ ಅವರ ತಂದೆ ಒಂದಕ್ಕಿಂತ ಹೆಚ್ಚು ಬಾರಿ ಕರೆ ಮಾಡಿ ಸಂಗೀತಾ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ಫಿಲಿಪ್‌ ಅವ­ರನ್ನು ಒತ್ತಾಯಿಸಿದ್ದರು ಎಂದು ಕುಟುಂಬದ ಆಪ್ತ ವ್ಯಕ್ತಿ ನ್ಯೂಯಾರ್ಕ್‌ ಟೈಮ್ಸ್‌ಗೆ ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಫಿಲಿಪ್‌ ಅವರನ್ನು ವಿಚಾರಣೆ ನಡೆಸಿದ್ದ ಭಾರತೀಯ ಪೊಲೀಸರು, ಸಂಗೀತಾ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಕೇಳಿದ್ದರು ಎಂದೂ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT