ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನಜೀರ್ ಹತ್ಯೆ ಸಂಚು ಮುಷರಫ್‌ಗೆ ತಿಳಿದಿತ್ತು

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಸೇನಾಡಳಿತಗಾರ ಪರ್ವೇಜ್ ಮುಷರಫ್ ಅವರಿಗೆ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರನ್ನು ಹತ್ಯೆ ಮಾಡಲು ತಾಲಿಬಾನ್ ಸಂಚು ರೂಪಿಸಿದ ಬಗ್ಗೆ ಸುಳಿವಿದ್ದರೂ,ಸಂಬಂಧಪಟ್ಟ ಭದ್ರತಾ ಆಡಳಿತಕ್ಕೆ ಮಾಹಿತಿ ರವಾನಿಸದೆ ತಪ್ಪು ಎಸಗಿರುವುದಾಗಿ 2007ರಲ್ಲಿ ನಡೆದ ಈ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತಿರುವ ತಂಡವೊಂದು ಆರೋಪಿಸಿದೆ.

ಬೆನಜೀರ್ ಹತ್ಯೆಗೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದ ಮುಖ್ಯಸ್ಥ ಬೈತುಲ್ಲಾ ಮೆಹ್ಸುದ್ ಸಂಚು ರೂಪಿಸಿದ ಸುಳಿವು ಮುಷರಫ್‌ಗೆ ತಿಳಿದಿದ್ದರೂ ಸಹ, ಅದನ್ನು ಬಹಿರಂಗಪಡಿಸದಂತೆ ಭದ್ರತಾ ಸಂಸ್ಥೆಗಳಿಗೆ ತಡೆಯೊಡ್ಡಿದ್ದರು ಎಂಬ ಸತ್ಯವನ್ನು ಜಂಟಿ ತನಿಖಾ ತಂಡ (ಜೆಐಟಿ) ಪತ್ತೆ ಹಚ್ಚಿರುವುದಾಗಿ ‘ಡಾನ್’ ಪತ್ರಿಕೆ ಗುರುವಾರ ಪ್ರಕಟಿಸಿದೆ.

ಈ ವಾರ, ರಾವಲ್ಪಿಂಡಿಯ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ (ಎಟಿಸಿ) ಪೆಡರಲ್ ತನಿಖಾ ಸಂಸ್ಥೆ (ಎಫ್‌ಐಎ) ಸಲ್ಲಿಸಿದ ಮೊಕದ್ದಮೆಯ  ಬಗ್ಗೆ ಜೆಐಟಿ ಮುಖ್ಯಸ್ಥ ಖಾಲಿದ್ ಖುರೇಷಿ ಅವರು ಆಂತರಿಕ ಭದ್ರತಾ ಸಚಿವಾಲಯಕ್ಕೆ ವಿವರಣೆ ನೀಡಿದ್ದಾರೆ. ಈ ಮೊಕ ್ದದಮೆಯಲ್ಲಿ ಮುಷರಫ್ ವಿರುದ್ಧ 12 ಆರೋಪಗಳನ್ನು ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT