ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಟಹಳ್ಳಿ: ಸಂಭ್ರಮದ ಮಹದೇಶ್ವರ ಜಾತ್ರೆ

Last Updated 2 ಜನವರಿ 2012, 10:35 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಬೆರಟಹಳ್ಳಿ ಸಮೀಪವಿರುವ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ನೂತನ ವರ್ಷಾರಂಭದ ಪ್ರಯುಕ್ತ ಮಹದೇಶ್ವರ ಜಾತ್ರೆ ಸಂಭ್ರಮದ ನಡೆಯಿತು. 

 ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದು ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
  ಈ ಗ್ರಾಮದವರು ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ವರ್ಷಾಚರಣೆಯನ್ನು ದೇವಸ್ಥಾನದಲ್ಲಿ ಆಚರಿಸಿ ದರು. ಬೆಳಿಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆಗಳು ನಡೆ ಯಿತು. ಗ್ರಾಮದ ಸುತ್ತಮುತ್ತಲಿನ ಜನರು ಈ ಜಾತ್ರೆ ಯಲ್ಲಿ ಭಾಗವಹಿಸಿದ್ದರು. ಸೋಮಹಳ್ಳಿ ಮಠದ ಸಿದ್ದ ಮಲ್ಲಪ್ಪ ಸ್ವಾಮೀಜಿ ಅವರ ಪಾದಪೂಜೆ ನಡೆಯಿತು.

ಗ್ರಾಮದವರು ಒಟ್ಟಾಗಿ ಮಾಡುವ ಈ ಜಾತ್ರೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಮಹದೇಶ್ವರನ ಪೂಜೆಯಲ್ಲಿ ತೊಡಗಿದ್ದರು. ನಂತರ ಅನ್ನದಾನ ನಡೆದು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT