ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಅಧಿವೇಶನ ನಿಲ್ಲದು: ಶೆಟ್ಟರ್

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿಯಲ್ಲಿ ಇದೇ 5ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದ ಮೊದಲ ದಿನದ ಕಲಾಪವನ್ನು ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ಅವರಿಗೆ ಸಂತಾಪ ಸೂಚಿಸಿದ ಬಳಿಕ ಮುಂದೂಡುವ ಸಾಧ್ಯತೆ ಇದೆ.

ಗುಜ್ರಾಲ್ ಪ್ರಧಾನಿ ಆಗಿದ್ದವರು. ಈ ಕಾರಣಕ್ಕೆ ಸಂತಾಪ ಸೂಚಿಸಿ, ಸದನದ ಕಲಾಪವನ್ನು ಮುಂದೂಡುವ ಬಗ್ಗೆ ಚರ್ಚೆ ಆಗಿದೆ. ಆದರೆ, ಈ ಕುರಿತು ಸೋಮವಾರ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ 32ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿನ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು, `ಬೆಳಗಾವಿಯಲ್ಲಿ ನಿರೀಕ್ಷೆಯಂತೆ ಅಧಿವೇಶನ ನಡೆಯಲಿದೆ. ಈ ಕುರಿತು ಅನುಮಾನ ಬೇಡ' ಎಂದರು.


ಆರೋಗ್ಯ ವಿವಿ ಸೆನೆಟ್‌ಗೆ ಆಯ್ಕೆ

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಚುನಾವಣೆಯಲ್ಲಿ ಶಿಕ್ಷಕರ ಹಾಗೂ ಪ್ರೊಫೆಸರ್‌ಗಳ ಕ್ಷೇತ್ರದಿಂದ ತಲಾ ಐವರು ಆಯ್ಕೆಯಾಗಿದ್ದಾರೆ.

ಪ್ರೊಫೆಸರ್‌ಗಳ ಕ್ಷೇತ್ರ: ಎನ್. ರಮೇಶ್, ಬಿ.ರವೀಂದ್ರ, ಎಂ.ಹೇಮಂತ್, ಎಂ.ಕೆ.ರಮೇಶ್, ಮಂಜುನಾಥ್ ರೈ.

ಶಿಕ್ಷಕರ ಕ್ಷೇತ್ರ: ಜಿ.ಎ. ರವಿರಾಜ್, ಬಿ.ಕೆ. ಗೋಪಾಲ್, ಮಹಾದೇವಪ್ಪ ವಿ.ರಾಂಪುರೆ, ಪಿ.ವಿ.ಅಭಿಲಾಷ್, ಎನ್.ಕಿರಣ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT