ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬೆಳಗಾವಿ ರಾಯಲ್ಸ್' ಪತ್ರಿಕೆ ಬಿಡುಗಡೆ

Last Updated 7 ಜುಲೈ 2013, 12:32 IST
ಅಕ್ಷರ ಗಾತ್ರ

ಖಾನಾಪುರ: ಬೆಳಗಾವಿ ರಾಯಲ್ಸ್ ಟೀಂ ವತಿಯಿಂದ ಹೊರತರಲಾದ ನಿಯತಕಾಲಿಕ `ಬೆಳಗಾವಿ ರಾಯಲ್ಸ್' ನ ಪ್ರಥಮ ಸಂಚಿಕೆಯನ್ನು ಶನಿವಾರ ಬೆಳಗಾವಿ ನಗರ ಶಾಖೆ ನಂ.1ರ  ಪ್ರಧಾನ ವ್ಯವಸ್ಥಾಪಕ ಡಾ.ಅರವಿಂದ ಕುಲಕರ್ಣಿ ಬಿಡುಗಡೆ ಮಾಡಿದರು.

ಪಟ್ಟಣದ ಉದಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಜೀವವಿಮಾ ನಿಗಮದ ಬೆಳಗಾವಿ ನಗರ ಶಾಖೆ ನಂ.1ರ ವ್ಯಾಪ್ತಿಗೆ ಬೆಳಗಾವಿ ನಗರ, ಗ್ರಾಮೀಣ ಹಾಗೂ ಖಾನಾಪುರ ತಾಲ್ಲೂಕು ಒಳಪಡುತ್ತಿದ್ದು, ಶಾಖೆಯು ಕಳೆದ ಆರ್ಥಿಕ ವರ್ಷದಲ್ಲಿ 29,458 ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ 25.26 ಕೋಟಿ ಪ್ರೀಮಿಯಂ ಗಳಿಸಿದೆ  ಎಂದು ಹೇಳಿದರು.

ಬೆಳಗಾವಿ, ಬಾಗಲಕೋಟೆ ಹಾಗೂ ವಿಜಾಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಬೆಳಗಾವಿ ವಿಭಾಗದ 14 ಶಾಖೆಗಳ ಪೈಕಿ ಪಾಲಿಸಿಗಳ ಕೌಂಟ್‌ನಲ್ಲಿ 2ನೇ ಸ್ಥಾನ ಹಾಗೂ ಪ್ರಥಮ ಪ್ರೀಮಿಯಂ ಸಂಗ್ರಹದಲ್ಲಿ 1ನೇ ಸ್ಥಾನ ಗಳಿಸಿದೆ. ಶಾಖೆಯ ಈ ಸಾಧನೆಗೆ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳೇ ಮುಖ್ಯ ಕಾರಣ ಎಂದು ಅಭಿಪ್ರಾಯ ಪಟ್ಟರು.

ಬೆಳಗಾವಿ ರಾಯಲ್ಸ್ ಟೀಂನ ಕ್ಯಾಪ್ಟನ್ ಸಂಜೀವ ಜೋಶಿ ಮಾತನಾಡಿ, ತಮ್ಮ ಟೀಂ ಕಳೆದ ಆರ್ಥಿಕ ವರ್ಷದಲ್ಲಿ 2.96 ಕೋಟಿ ವಿಮಾ ಮೊತ್ತ ಸಂಗ್ರಹ ಮಾಡುವ ಮೂಲಕ 2992 ಜೀವಗಳ ಮೇಲೆ ವಿಮೆ ಮಾಡಿಸಿದ್ದು, ಈ ಮೂಲಕ ಬೆಳಗಾವಿ ನಗರ ಶಾಖೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಬೆಳಗಾವಿ ವಿಭಾಗಮಟ್ಟದಲ್ಲಿ ಮೂರನೇ ಸ್ಥಾನ ಹೊಂದಿರುವ ತಮ್ಮ ಟೀಂ ನಿಗಮದ ಹಿರಿಯ ಅಧಿಕಾರಿಗಳ ಸಲಹೆ ಹಾಗೂ ಮಾರ್ಗದರ್ಶನದಂತೆ ಬೆಳಗಾವಿ ರಾಯಲ್ಸ್ ಎಂಬ ಹೆಸರಿನಿಂದ ಇನ್ನು ಮುಂದೆ ಗುರುತಿಸಲ್ಪಡಲಿದೆ. ಪ್ರಸ್ತುತ ಈ ಟೀಂನ ವತಿಯಿಂದ ಸಂಚಿಕೆಯೊಂದನ್ನು ಹೊರತರಲು ಪ್ರಯತ್ನಿಸಿದ್ದು, ತಮ್ಮ ಪ್ರಯತ್ನಕ್ಕೆ ಇಂದು ನಿಜಕ್ಕೂ ಫಲ ಸಿಕ್ಕಿದೆ ಎಂದರು.

ಇದನ್ನು ಹೊರತರಲು ಸಹಕರಿಸಿದ ಡಾ.ಅರವಿಂದ ಕುಲಕರ್ಣಿ ಹಾಗೂ ರಾಯಲ್ಸ್ ಟೀಂನ ಸದಸ್ಯರನ್ನು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ವಿಮಾ ರಂಗದ ತರಬೇತುದಾರ ಸುಧೀಂದ್ರ ಅಡಿಗ, ಅಭಯ ಫಡಕೆ, ಪಿ.ಎನ್ ರಾಯ್ಕರ, ಸುನೀಲ ಪಾಟೀಲ, ಚಂದ್ರಕಾಂತ ಪಾಟೀಲ, ನಾಗರಾಜ ಮಾರಿಹಾಳ, ಜಯಂತ ಸಬನೀಸ, ಗಜಾನನ ಶಹಾಪುರಕರ ಹಾಗೂ ಬೆಳಗಾವಿ ರಾಯಲ್ಸ್ ಗುಂಪಿನ ಪ್ರತಿನಿಧಿಗಳು ಭಾಗವಹಿಸಿದ್ದರು. ಗಣೇಶ ಕುಲಕರ್ಣಿ ಸ್ವಾಗತಿಸಿದರು. ಮಹೇಂದ್ರ ಕಾಂಬಳೆ ನಿರೂಪಿಸಿದರು. ಡಿ.ಆರ್ ನೇರ್ಲಿಕರ ವಂದಿಸಿದರು.

ಆತ್ಮಹತ್ಯೆ
ಮುರಗೋಡ (ಬೈಲಹೊಂಗಲ):
  ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿ ತಾಲ್ಲೂಕಿನ ಸೊಪ್ಪಡ್ಲದಲ್ಲಿ ಶುಕ್ರವಾರ ನಡೆದಿದೆ.

ಮೃತನನ್ನು ಸೊಪ್ಪಡ್ಲ ಗ್ರಾಮದ ಮಂಜುನಾಥ ಅಶೋಕ ಪಾಟೀಲ (21) ಎಂದು ಗುರುತಿಸಲಾಗಿದೆ.
ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT