ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗೊಳ: ಬತ್ತ ನಾಟಿ ಯಂತ್ರ ವಿತರಣೆ

Last Updated 8 ಜನವರಿ 2011, 8:25 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿಗೆ ಮೊದಲು ಎಂಬಂತೆ ಬೆಳಗೊಳದ ರೈತ ಬಾಲಸುಬ್ರಹ್ಮಣ್ಯ ಶುಕ್ರವಾರ ಬತ್ತದ ಪೈರು ನಾಟಿ  ಯಂತ್ರವನ್ನು ಸರ್ಕಾರದ ಸಹಾಯಧನದಲ್ಲಿ ಖರೀದಿಸಿದ್ದಾರೆ.ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಜಿಪಂ ನೂತನ ಸದಸ್ಯ ಬಿ.ಟಿ.ಶ್ರೀನಿವಾಸ್ ಫಲಾನುಭವಿಗೆ ಕೃಷಿ ಯಾಂತ್ರೀಕರಣ ಯೋಜನೆಯಡಿ  ಯಂತ್ರ ವಿತರಿಸಿ ಮಾತನಾಡಿ ರೂ.1.70 ಲಕ್ಷದ ಈ ಯಂತ್ರಕ್ಕೆ ರಿಯಾಯಿತಿ ಇದ್ದು, ರೈತರು ರೂ.90 ಸಾವಿರ ಪಾವತಿಸಬೇಕು. ಸರ್ಕಾರ ರೂ.80 ಸಾವಿರ ಸಹಾಯಧನ ನೀಡುತ್ತಿದೆ. ಮೂರು ಮಂದಿ, ಮೂರು ಗಂಟೆಯಲ್ಲಿ ಒಂದು ಎಕರೆ ಬತ್ತ ನಾಟಿ ಮಾಡಬಹುದು. ಕೂಲಿಗಾರರ ಸಮಸ್ಯೆಯ ಈ ದಿನಗಳಲ್ಲಿ ಇಂತಹ ಯಂತ್ರ ರೈತರು ಖರೀದಿಸಲು ಮುಂದಾಗಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕಿ ಎಚ್.ಎನ್.ಮಮತಾ ಮಾತನಾಡಿ ಈ ಯಂತ್ರದಿಂದ ಬತ್ತ ಪೈರು ನಾಟಿ ಮಾಡುವ ಉದ್ದೇಶದಿಂದ ಬೀಜ ಬಿತ್ತುವವರಿಗೆ ಟಾರ್ಪಾಲಿನ್, ಗೊಬ್ಬರ ಕೊಳ್ಳಲು ರೂ.800 ಸಹಾಯಧನ ನೀಡಲಾಗುವುದು. ರಿಯಾಯಿತಿ ದರದಲ್ಲಿ ಬೀಜ ಕೊಳ್ಳುವ ರೈತರಿಗೆ ರೂ.600 ರಿಯಾಯಿತಿ ಇರುತ್ತದೆ. ಜಿಂಕ್ ಸಲ್ಫೇಟ್ ಲಭ್ಯವಿದ್ದು, 5 ಕೆ.ಜಿ. ಚೀಲರೂ.75ಕ್ಕೆ ಸಿಗಲಿದೆ. ಅಲ್ಲದೆ, ಕೀಟ ನಾಶಕಗಳಾದ ಕ್ಲೋರೊಫೈರಿಪಾಸ್, ರೋಗರ್, ಕಾರ್ಬನ್ ಡೈಜಿಂ ಲಭ್ಯವಿದ್ದು ರೈತರು ಕೊಳ್ಳಬಹುದು ಎಂದರು. ತಾಪಂ ಸದಸ್ಯ ಮಹದೇವಸ್ವಾಮಿ, ಬಿ.ವಿ.ಸುರೇಶ್, ಬಿ.ಎಂ.ಸುಬ್ರಹ್ಮಣ್ಯ, ತಾಂತ್ರಿಕ ಸಹಾಯಕ ಸುರೇಶ್, ಬಾಲಕೃಷ್ಣ, ಕೃಷಿ ಅಧಿಕಾರಿಗಳಾದ ಕೆ.ಟಿ.ರಂಗಯ್ಯ, ಭಾಸ್ಕರ್ ಇದ್ದರು.

 ಜ.17ರಿಂದ ಬಿತ್ತನೆ ಬೀಜ: ಬೇಸಿಗೆ ಬೆಳೆಗೆ ಬತ್ತದ ಬಿತ್ತನೆ ಬೀಜವನ್ನು ಜ.17ರಿಂದ ತಾಲ್ಲೂಕಿನ 8 ಕೇಂದ್ರಗಳಲ್ಲಿ ವಿತರಿಸಲಾಗುತ್ತದೆ. ಪಾಲಹಳ್ಳಿ, ನಗುವನಹಳ್ಳಿ, ಮೇಳಾಪುರ, ಅರಕೆರೆ, ಪೀಹಳ್ಳಿ, ಬೆಳಗೊಳ, ಟಿ.ಎಂ.ಹೊಸೂರು ಹಾಗೂ ಕೆ.ಶೆಟ್ಟಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ವಿತರಿಸಲಾಗುವುದು. ಜಯ, ಎಂಟಿಯು- 1001, ಜ್ಯೋತಿ, ಐಆರ್-64 ತಳಿಯ ಬತ್ತದ ಬಿತ್ತನೆ ಬೀಜ ಸಿಗಲಿದ್ದು, ರೈತರು ಹತ್ತಿರದ ಕೇಂದ್ರಗಳಿಂದ ಖರೀದಿಸಬಹುದು. ಈ ಬಿತ್ತನೆ ಬೀಜಕ್ಕೆ ಕೆ.ಜಿಗೆ ರೂ.8 ರಿಯಾಯಿತಿ ಇರುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT