ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ನೇಹಾಗೆ ಪ್ರಶಸ್ತಿ ಡಬಲ್

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಂಗಳೂರು: ಸ್ಥಳೀಯ ಆಟಗಾರ್ತಿ ನೇಹಾ ಜಿ., ಭಾನುವಾರ ಮುಕ್ತಾಯಗೊಂಡ ಮಂಗಳೂರು ಸೂಪರ್ ಸಿರೀಸ್ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಮತ್ತು 15 ವರ್ಷದೊಳಗಿನವರ ಸಿಂಗಲ್ಸ್ ಫೈನಲ್ ಗೆಲ್ಲುವ ಮೂಲಕ `ಪ್ರಶಸ್ತಿ ಡಬಲ್~ ಪೂರೈಸಿದಳು.

ಮಂಗಳಾ ಸ್ಪೋರ್ಟ್ಸ್ ಆಶ್ರಯದಲ್ಲಿ ನಗರದ ಯು.ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ರಾಜನ್ಸ್ ಅಕಾಡೆಮಿಯ ನೇಹಾ 21-10, 21-14 ರಲ್ಲಿ ಇದೇ ಕ್ಲಬ್‌ನ ರೋಶನಿ ಶೆಟ್ಟಿ ವಿರುದ್ಧ ಜಯಗಳಿಸಿದಳು. 15 ವರ್ಷದೊಳಗಿನವರ ಫೈನಲ್‌ನಲ್ಲಿ ನೇಹಾ ತೀವ್ರ ಸೆಣಸಾಟದ ನಂತರ ಮಂಗಳೂರಿನವರೇ ಆದ ಮೇಧಾ ಭಿಡೆ ವಿರುದ್ಧ 21-13, 13-21, 21-19ರಲ್ಲಿ ಗೆಲುವನ್ನು ದಾಖಲಿಸಿದಳು.

ರೋಶನಿ ಶೆಟ್ಟಿ 13 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ 21-13, 21-3 ರಲ್ಲಿ ಉಡುಪಿಯ ನೇಹಾ ಹರೀಶ್ ವಿರುದ್ಧ ಗೆಲ್ಲಲು ಕಷ್ಟಪಡಲಿಲ್ಲ.

ಇದೇ ವಯೋವರ್ಗದ ಡಬಲ್ಸ್ ಫೈನಲ್‌ನಲ್ಲಿ ಗ್ಲಾನ್ಸಿಯಾ ಮತ್ತು ನೇಹಾ ಹರೀಶ್ 21-15, 21-10 ರಲ್ಲಿ ಮಧುಮಿತಾ ಮತ್ತು ನವ್ಯಾ (ಮಂಗಳೂರು) ಜೋಡಿಯನ್ನು ಸೋಲಿಸಿದರು.

13 ವರ್ಷದೊಳಗಿನ ಬಾಲಕರ ಡಬಲ್ಸ್ ಪ್ರಶಸ್ತಿ ರಮಿತ್ ಮತ್ತು ಸಮಂತ್ ಜೋಡಿಯ ಪಾಲಾಯಿತು.

ಉಡುಪಿಯ ಈ ಜೋಡಿ 21-14, 21-12 ರಲ್ಲಿ ಮಂಗಳೂರಿನ ಅಭಯ್ ಪೈ ಮತ್ತು ಪ್ರಥ್ವಿರಾಜ್ ತಂಡವನ್ನು ನೇರ ಗೇಮ್‌ಗಳಿಂದ ಸೋಲಿಸಿತು.

ಕುತೂಹಲಕರವಾದ 15 ವರ್ಷದೊಳಗಿನ ಬಾಲಕರ ಡಬಲ್ಸ್ ಫೈನಲ್‌ನಲ್ಲಿ ಉಡುಪಿಯ ಗೋವರ್ಧನ ಶೆಣೈ ಮತ್ತು ಗ್ಲಾನಿಶ್ ಪಿಂಟೊ 21-15 19-21, 25-23 ರಲ್ಲಿ ಮಂಗಳೂರಿನ ವಿಧುರ್ ಮತ್ತು ದಾಮೋದರ ಶೆಣೈ ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT