ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಯಾನ್‌ ಸಹೋದರರಿಗೆ ಆಘಾತ ನೀಡಿದ ಪೇಸ್‌–ಸ್ಟೆಪನೆಕ್‌

Last Updated 5 ಸೆಪ್ಟೆಂಬರ್ 2013, 20:13 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಲಿಯಾಂಡರ್‌ ಪೇಸ್‌ ಹಾಗೂ ಜೆಕ್‌ ಗಣರಾಜ್ಯದ ರಾಡೆಕ್‌ ಸ್ಟೆಪನೆಕ್‌ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಫೈನಲ್‌ ತಲುಪಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಪೇಸ್‌–ಸ್ಟೆಪನೆಕ್‌ 3–6, 6–3, 6–4ರಲ್ಲಿ ಅಮೆರಿಕದ ಮೈಕ್‌ ಹಾಗೂ ಬಾಬ್‌ ಬ್ರಯಾನ್‌ ಸಹೋದರರಿಗೆ ಆಘಾತ ನೀಡಿದರು.

ಸತತ ನಾಲ್ಕನೇ ಗ್ರ್ಯಾಂಡ್‌ ಸ್ಲಾಮ್‌ ಡಬಲ್ಸ್‌ ಪ್ರಶಸ್ತಿ ಜಯಿಸುವ ಬ್ರಯಾನ್‌ ಸಹೋದರರ ಪ್ರಯತ್ನವನ್ನು ಪೇಸ್‌–ಸ್ಟೆಪನೆಕ್‌ ಅತ್ಯುತ್ತಮ ಆಟದ ಮೂಲಕ ವಿಫಲಗೊಳಿಸಿದರು. ಮೈಕ್‌–ಬಾಬ್‌ ಅಗ್ರಶ್ರೇಯಾಂಕದ ಆಟಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT