ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ನಿಲುವಿಗೆ ಪ್ರಶಂಸೆ

Last Updated 30 ಡಿಸೆಂಬರ್ 2010, 12:55 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಟೆಹರಾನ್‌ನಲ್ಲಿರುವ ಪ್ರಮುಖ ವಾಣಿಜ್ಯ-ಹಣಕಾಸು ಪರವಾನಗಿ ಸಂಸ್ಥೆಯ ಮೂಲಕ ವ್ಯವಹರಿಸಲ್ಪಡುವ ಯಾವುದೇ ಶ್ರೇಣಿಯ ಒಪ್ಪಂದಗಳನ್ನು ಮಾಡಿಕೊಳ್ಳದಂತೆ ತನ್ನ ದೇಶದ ಕಂಪೆನಿಗಳಿಗೆ ಭಾರತ ನಿಷೇಧ ವಿಧಿಸಿದ್ದು ಇದೊಂದು ಮಹತ್ವದ ಕ್ರಮವೆಂದು ಅಮೆರಿಕದ ಹಣಕಾಸು ಇಲಾಖೆ ಅಧಿಕಾರಿ ಸ್ಟುವರ್ಟ್ ಲೆವಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದಾಗಿ ‘ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.


ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಬ್ಯಾಂಕ್‌ಗಳಿಗೆ ಮಂಗಳವಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿ, ಏಷ್ಯಾ ಪರವಾನಗಿ ಸಂಸ್ಥೆ (ಎಸಿಯು)ಯನ್ನು ಬಳಸಿ ಚಾಲ್ತಿ ಖಾತೆ ವ್ಯವಹಾರಗಳನ್ನು ನಡೆಸುವುದನ್ನು ನಿಲ್ಲಿಸುವಂತೆ ಸೂಚಿಸಿರುವ ನಂತರ ಲೆವಿ ಅವರ ಈ ಹೇಳಿಕೆ ಹೊರಬಿದ್ದಿದೆ. ಪ್ರಾಂತ್ಯದಲ್ಲಿ ವಾಣಿಜ್ಯ ವಹಿವಾಟಿಗೆ ನೆರವಾಗಲು ವಿಶ್ವಸಂಸ್ಥೆಯು 1974ರಲ್ಲಿ ಎಸಿಯುವನ್ನು ಸ್ಥಾಪಿಸಿದ್ದು ಇದರ ಪ್ರಧಾನ ಕಚೇರಿ ಟೆಹರಾನ್‌ನಲ್ಲಿದೆ. ಭಾರತವು ಎಸಿಯು ಮೂಲಕ ವ್ಯವಹಾರ ನಡೆಸುವ ವಾಣಿಜ್ಯ ವಹಿವಾಟಿನಲ್ಲಿ ಇರಾನ್‌ನ ದೊಡ್ಡ ಪಾಲುದಾರ ರಾಷ್ಟ್ರವಾಗಿದೆ.ಬಾಂಗ್ಲಾದೇಶ, ಮಾಲ್ಡೀವ್ಸ್, ಬರ್ಮಾ, ಇರಾನ್, ಪಾಕಿಸ್ತಾನ, ಭೂತಾನ್, ನೇಪಾಳ  ಶ್ರೀಲಂಕಾ ಸಹ ಇದರಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT