ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕ್ರಿಕೆಟ್‌ಗೆ ಯಾವತ್ತಿಗೂ ಅಗ್ರಸ್ಥಾನ: ಕ್ರಿಸ್ ಬಾಷ್

Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): `ಭಾರತದಲ್ಲಿ ಇತರ ಕ್ರೀಡೆಗಳ ಜೊತೆಗೆ ಬ್ಯಾಸ್ಕೆಟ್‌ಬಾಲ್ ಕೂಡಾ ಜನಪ್ರಿಯತೆ ಪಡೆಯಲಿದೆ. ಆದರೆ, ಕ್ರಿಕೆಟ್ ಯಾವಾಗಲೂ ಅಗ್ರಸ್ಥಾನದಲ್ಲಿರುತ್ತದೆ' ಎಂದು ಖ್ಯಾತ ವೃತ್ತಿಪರ ಎನ್‌ಬಿಎ ಆಟಗಾರ ಕ್ರಿಸ್ ಬಾಷ್ ಅಭಿಪ್ರಾಯ ಪಟ್ಟಿದ್ದಾರೆ.

`ಅಮೆರಿಕದಲ್ಲಿ ಫುಟ್‌ಬಾಲ್ ಖ್ಯಾತಿ ಪಡೆದಿರುವಂತೆ ಭಾರತದಲ್ಲಿ ಕ್ರಿಕೆಟ್ ಯಾವಾಗಲೂ ಮೊದಲ ಸ್ಥಾನದಲ್ಲಿಯೇ ಇರುತ್ತದೆ. ಅಮೆರಿಕಾದಲ್ಲೂ ಬ್ಯಾಸ್ಕೆಟ್‌ಬಾಲ್‌ಗಿಂತ ಫುಟ್‌ಬಾಲ್ ಕ್ರೀಡೆಯೇ ಹೆಚ್ಚು ಜನಪ್ರಿಯ. ಭಾರತದಲ್ಲಿ ಕ್ರಿಕೆಟ್‌ನ ಜೊತೆಗೆ ಬೇರೆ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಿದರೆ, ಆ ಕ್ರೀಡೆಗಳಿಗೂ ಎತ್ತರದ ಸ್ಥಾನ ಲಭಿಸುತ್ತದೆ. ಇದಕ್ಕೆ ಎಲ್ಲರ ಬೆಂಬಲ ಅಗತ್ಯ' ಎಂದು ಅವರು ನುಡಿದರು.

ದೇಶದಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಪ್ರಚಾರಕ್ಕಾಗಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಬಾಷ್, `ಭವಿಷ್ಯದಲ್ಲಿ ಭಾರತದ ಆಟಗಾರರು ಎನ್‌ಬಿಎ ತಂಡದಲ್ಲಿ ಆಡಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಉತ್ತಮ ಅವಕಾಶಗಳು ದೊರೆತಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುವಂತಹ ಆಟಗಾರರು ಭಾರತದಲ್ಲಿದ್ದಾರೆ. ಒಂದು ವೇಳೆ ಭಾರತದ ಒಬ್ಬ ಆಟಗಾರ ಎನ್‌ಬಿಎನಲ್ಲಿ ಆಡಿದರೂ ಸಾಕು. ಅದನ್ನು ಸಾಕಷ್ಟು ಜನ ವೀಕ್ಷಿಸಿ ಆಕರ್ಷಿತರಾಗುತ್ತಾರೆ. ಈ ನಿಟ್ಟಿನಲ್ಲಿ ಪ್ರಚಾರ ಸತತವಾಗಿ ಮುಂದುವರಿಯುತ್ತದೆ' ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT