ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಡೇವಿಸ್ ಕಪ್ ಆಡಲು ಸಿದ್ಧ: ಪಾಕ್

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ): ಫಿಲಿಪೀನ್ಸ್ ವಿರುದ್ಧದ ಡೇವಿಸ್ ಕಪ್ ಏಷ್ಯಾ-ಒಸಿನಿಯಾ ಎರಡನೇ ಗುಂಪಿನ ಟೆನಿಸ್ ಪಂದ್ಯವನ್ನು ಭಾರತದಲ್ಲಿ ಆಡಲು ಸಿದ್ಧವೆಂದು ಪಾಕಿಸ್ತಾನ ಹೇಳಿದೆ.

ಹಿಂದಿನಂತೆ ಭದ್ರತೆಯ ಕಾರಣ ನೀಡಿ ಪಾಕ್‌ನಲ್ಲಿ ಪಂದ್ಯ ನಡೆಸಲು ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಒಪ್ಪದಿದ್ದರೆ, ಆ ಪಂದ್ಯವನ್ನು ಭಾರತಕ್ಕೆ ಸ್ಥಳಾಂತರ ಮಾಡಬೇಕೆಂದು ಪಾಕಿಸ್ತಾನ ಟೆನಿಸ್ ಫೆಡರೇಷನ್ (ಪಿಟಿಎಫ್) ಕೋರಿದೆ.

ಇತ್ತೀಚೆಗೆ ಲೆಬೆನಾನ್ ವಿರುದ್ಧ ಜಯ ಸಾಧಿಸಿರುವ ಪಾಕ್ ಮುಂದಿನ ಪಂದ್ಯದಲ್ಲಿ ಫಿಲಿಪೀನ್ಸ್ ಎದುರು ಆಡಬೇಕು. ಡೆವಿಸ್ ಕಪ್‌ಗಾಗಿ ಐಟಿಎಫ್ ರೂಪಿಸಿರುವ ನಿಯಮಗಳ ಪ್ರಕಾರ ಆತಿಥ್ಯದ ಅವಕಾಶ ಪಾಕಿಸ್ತಾನದ್ದಾಗಬೇಕು. ಆದರೆ ಭಯೋತ್ಪಾದಕ ದಾಳಿಯ ಭಯದಿಂದ ಕಳೆದ ಎರಡು ವರ್ಷಗಳಿಂದ ಪಾಕ್‌ನಲ್ಲಿ ಡೆವಿಸ್ ಕಪ್  ನಡೆಸಲು ಅವಕಾಶ ನೀಡಿಲ್ಲ. ಈ ಬಾರಿ ಹಾಗೆಯೇ ಆಗುತ್ತದೆನ್ನುವ ಅನುಮಾನ ಪಿಟಿಎಫ್ ಅನ್ನು ಕಾಡುತ್ತಿದೆ.

ಆದ್ದರಿಂದಲೇ ಪಿಟಿಎಫ್ `ಭಾರತದಲ್ಲಿ ಫಿಲಿಪೀನ್ಸ್ ವಿರುದ್ಧದ ಪಂದ್ಯವನ್ನು ಆಯೋಜಿಸಬೇಕು~ ಎಂದು ಕೇಳಿದೆ. `ಆತಿಥ್ಯ ವಹಿಸದಿದ್ದರೆ, ತಟಸ್ಥ ದೇಶದಲ್ಲಿ ಪಂದ್ಯವನ್ನು ನಡೆಸಬೇಕು~ ಎಂದು ಪಿಟಿಎಫ್ ಕಾರ್ಯದರ್ಶಿ ಮುಮ್ತಾಜ್ ಯೂಸುಫ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT