ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಥಾಮಸ್, ಉಬೆರ್ ಕಪ್ ಫೈನಲ್

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರತಿಷ್ಠಿತ ಥಾಮಸ್ ಮತ್ತು ಉಬೆರ್ ಕಪ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಟೂರ್ನಿಯ ಫೈನಲ್ ಪಂದ್ಯಗಳನ್ನು ಆಯೋಜಿಸುವ ಅವಕಾಶ ಇದೇ ಮೊದಲ ಬಾರಿಗೆ ಭಾರತಕ್ಕೆ ಒದಗಿದೆ. ಫೈನಲ್ ಪಂದ್ಯಗಳ ದಿನಾಂಕ ಸದ್ಯದಲ್ಲೇ ಪ್ರಕಟವಾಗಲಿದೆ.

ಈ ಬಗ್ಗೆ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ (ಬಿಎಐ) ಅಧ್ಯಕ್ಷ ಅಖಿಲೇಶ್ ದಾಸ್‌ಗುಪ್ತಾ, `ಎರಡು ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿಗಳನ್ನು ಆಯೋಜಿಸಲು ಅವಕಾಶ ದೊರೆತಿರುವುದು ದೇಶಕ್ಕೆ ಹೆಮ್ಮೆಯ ಸಂಗತಿ. ಇದೇ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಆಯೋಜನೆಗೊಳ್ಳಲಿರುವ ಈ ಟೂರ್ನಿಗಳ ಯಶಸ್ಸಿಗೆ ಶ್ರಮಿಸುತ್ತೇವೆ' ಎಂದರು.

ಪುರುಷರ ವಿಶ್ವ ಚಾಂಪಿಯನ್‌ಷಿಪ್ `ದಿ ಥಾಮಸ್ ಕಪ್' (1948-49ರಲ್ಲಿ ಆರಂಭ) ಮತ್ತು ಮಹಿಳೆಯರ ವಿಶ್ವ ಚಾಂಪಿಯನ್‌ಷಿಪ್ `ಉಬೆರ್ ಕಪ್' (1956-57ರಲ್ಲಿ ಆರಂಭ), ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಆಯೋಜಿಸುವ ಎರಡು ಪ್ರಮುಖ ಟೂರ್ನಿಗಳಾಗಿವೆ.

ಹೊಸ ಶೈಲಿಯಲ್ಲಿ ಟೂರ್ನಿಗಳು: 2014ನೇ ಇಸವಿಯಿಂದ ಅನ್ವಯವಾಗುವಂತೆ ಎರಡೂ ಟೂರ್ನಿಗಳು ಹೊಸ ಶೈಲಿಯಲ್ಲಿ ಆಯೋಜನೆಗೊಳ್ಳಲಿವೆ. ಮುಂದಿನ ವರ್ಷದಿಂದ ಅರ್ಹತಾ ಪಂದ್ಯಗಳನ್ನು ಆಯೋಜಿಸದಿರಲು ಬಿಡಬ್ಲ್ಯುಎಫ್ ನಿರ್ಧರಿಸಿದೆ.

ಈ ಮೊದಲು ಬೇರೆ ಬೇರೆ ಪ್ರದೇಶಗಳಲ್ಲಿ ಅರ್ಹತಾ ಪಂದ್ಯಗಳನ್ನು ಆಯೋಜಿಸಿ 12 ತಂಡಗಳಿಗೆ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಗುತ್ತಿತ್ತು. ಆದರೆ, ಮುಂದಿನ ವರ್ಷದಿಂದ ಫೈನಲ್ ಪಂದ್ಯಗಳು ಮಾತ್ರ ಇರಲಿದ್ದು, ಒಟ್ಟು 16 ತಂಡಗಳು ಸ್ಪರ್ಧಿಸಲಿವೆ. ಈ 16 ತಂಡಗಳ ಪೈಕಿ 14 ತಂಡಗಳು ಅವುಗಳ ವಿಶ್ವ ರ‌್ಯಾಂಕಿಂಗ್‌ನ ಆಧಾರದಲ್ಲಿ ಫೈನಲ್ ಪ್ರವೇಶಿಸಿದರೆ, ಒಂದು ತಂಡ ಆತಿಥೇಯ ದೇಶ ಮತ್ತು ಇನ್ನೊಂದು ತಂಡ ಕಳೆದ ಬಾರಿಯ ಚಾಂಪಿಯನ್ ದೇಶದ್ದಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT