ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನೆ ಮುಕ್ತವಾಗಿ ಹರಿಬಿಡಿ:ಹಂಪಣ್ಣ

Last Updated 2 ಸೆಪ್ಟೆಂಬರ್ 2013, 8:14 IST
ಅಕ್ಷರ ಗಾತ್ರ

ಸಿಂಧನೂರು: ಭಾವನೆ ಮುಕ್ತವಾಗಿ ಹರಿಬಿಟ್ಟಾಗ ಸಾಹಿತ್ಯ ರಚನೆಯಾಗಲು ಸಾಧ್ಯ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಎಚ್.ಜಿ.ಹಂಪಣ್ಣ ಅಭಿಪ್ರಾಯಪಟ್ಟರು.

ನಗರದ ಕುಂಬಾರ ಓಣಿಯ ಕವಯಿತ್ರಿ ಶಾಂತಾ ಮಹೇಶ ಒಳಗಿನಮನಿ ಅವರ ನಿವಾಸದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಸಾಹಿತಿ ಕು.ವೀರಭದ್ರಪ್ಪ ಅವರ ಬದುಕು ಬರಹ ಕುರಿತ ಉಪನ್ಯಾಸಕ ಕಾರ್ಯಕ್ರಮಾತನಾಡಿದರು.

ಕುಂವೀ ನಾಡು ಕಂಡ ಅಪರೂಪದ ಸಾಹಿತಿ. ಅವರು ತಾವಿರುವ ಪರಿಸರ, ಸನ್ನಿವೇಷ, ಗ್ರಾಮೀಣ ಭಾಷೆಯನ್ನು ಬಳಸಿ ಪಾತ್ರಗಳಿಗೆ ಜೀವತುಂಬಿ ಉತ್ತಮ ತಮ್ಮ ಕಥೆ, ಕಾದಂಬರಿಗಳನ್ನು ರಚಿಸಿದ್ದಾರೆ ಎಂದರು.

ಕಸಾಪ ಜಿಲ್ಲಾ ಗೌರವಾಧ್ಯಕ್ಷ ಎಸ್.ಶರಣೇಗೌಡ ಮಾತನಾಡಿ ನೇರ ನುಡಿಯುಳ್ಳ ಕುಂವೀ ಯಾರ ಮುಲಾಜಿಗೂ ಒಳಗಾಗದೆ ಅನೇಕ ಕೃತಿಗಳನ್ನು ರಚಿಸಿ ನಾಡಿನ ಹೆಸರಾಂತ ಕಥೆಗಾರ ಎನಿಸಿದ್ದಾರೆ ಎಂದರು.

ನಿವೃತ್ತ ಶಿಕ್ಷಕ ಎಸ್.ಬಿ.ಒಳಗಿನಮನಿ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷೆ ರಮಾದೇವಿ ಶಂಭೋಜಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಲಿಂಗಮ್ಮ ಬಿ.ಅಮರೇಶ, ಮಹೇಶ ಒಳಗಿನಮನಿ, ಸರಸ್ವತಿ ಪಾಟೀಲ್, ಸೈಯದ್‌ಖಾದರ್ ಸುಬಾನಿ, ವೆಂಕನಗೌಡ ಗದ್ರಟಗಿ ಮತ್ತಿತರರು ಇದ್ದರು.

ಎಚ್.ಭಾರತಿದೇವಿ, ಶಾಂತಾ ಒಳಗಿನಮನಿ, ಪರಮೇಶ್ವರ, ಶ್ರೀಶೈಲ ಪತ್ತಾರ, ಬೀರಪ್ಪ ಶಂಭೋಜಿ, ಕೆ.ಬಾಳಪ್ಪ, ರಮೇಶ ಬಾಲಿ, ಶಂಕರದೇವರು ಹಿರೇಮಠ, ಎಚ್.ಬಸವರಾಜ ಅವರು ಸ್ವರಚಿತ ಕವನ ವಾಚನ ಮಾಡಿದರು. ನಾರಾಯಣಪ್ಪ ಮಾಡಸಿರವಾರ ಪ್ರಾರ್ಥಿಸಿದರು. ಅಶ್ವಿನಿ ಸ್ವಾಗತಿಸಿದರು. ನಾಗರತ್ನಮ್ಮ ಬಂಗಾರಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT