ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಗ್ರಹ ಪರಿಭ್ರಮಣ: ನಿಖರ ಅಂದಾಜು ಪ್ರಮಾಣ ಮಾಪನ

Last Updated 23 ಫೆಬ್ರುವರಿ 2011, 15:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಭೂ ಗ್ರಹದ ಪರಿಭ್ರಮಣವನ್ನು ನಿಖರವಾಗಿ ಅಂದಾಜಿಸುವ ಹೊಸ ಸಂಶೋಧನೆಯೊಂದು ಇಲ್ಲಿನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ.ಇತರ ಗ್ರಹಗಳಿಗೆ ಹೊಲಿಸಿದರೆ ಭೂ ಗ್ರಹದ ಪರಿಭ್ರಣವೂ ಎಷ್ಟು ವೇಗದಿಂದ ಕೂಡಿದೆ ಎಂದು ಹೊಸ ಸಂಶೋಧನೆಯಲ್ಲಿ ನಿಖರವಾಗಿ ಅಂದಾಜಿಸಲಾಗಿದೆ.

 ಈ ಹಿಂದಿನ ಸಂಶೋಧನೆಯಲ್ಲಿ ಪ್ರತಿ ವರ್ಷವೂ ಭೂ ಗ್ರಹದ ಕೇಂದ್ರ ಸ್ಥಾನದ ಪರಿಭ್ರಮಣವು ಇತರ ಗ್ರಹಗಳ ಪರಿಭ್ರಮಣಕ್ಕಿಂತ ಒಂದು ಡಿಗ್ರಿ  ಹೆಚ್ಚಾಗುತ್ತಾ ಹೋಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇದು ನಿಖರವಾದ ಅಂದಾಜು ಅಲ್ಲ. 

ಈಗ ನಡೆಸಿರುವ ಹೊಸ ಸಂಶೋಧನೆಯಂತೆ ಭೂ ಗ್ರಹದ ಕೇಂದ್ರ ಸ್ಥಾನದ ಪರಿಭ್ರಮಣವು ಈ ಮೊದಲು ಅಂದಾಜಿಸಿದ್ದಕ್ಕಿಂತ ಕಡಿಮೆ ಗತಿಯಲ್ಲಿದೆ. ಇದರ ಪ್ರಮಾಣವು ಪ್ರತಿ ಹತ್ತು ಲಕ್ಷ ವರ್ಷಗಳಿಗೊಮ್ಮೆ ಸುಮಾರು 1 ಡಿಗ್ರಿ ಹೆಚ್ಚುತ್ತದೆ ಎಂದು ಸಂಶೋಧನೆಯ ಬಗ್ಗೆ ವರದಿ ಪ್ರಕಟಿಸಿರುವ ‘ನೇಚರ್ ಜಿಯೋ ಸೈನ್ಸ್’ ಹೇಳಿದೆ.

ತೀವ್ರ ಆರ್ಥಿಕ ಬಿಕ್ಕಟ್ಟು: ವಿಕಿಲೀಕ್ಸ್ ಹೊಸ ವೇಷ
ಬಾಸ್ಟನ್ (ಪಿಟಿಐ): ರಹಸ್ಯ ಮಾಹಿತಿಗಳನ್ನು ಬಹಿರಂಗಗೊಳಿಸುವ ಮೂಲಕ ಅಮೆರಿಕ ಸರ್ಕಾರವನ್ನು ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡು ಮಾಡಿ ಸುದ್ದಿಯಾದ ವಿಕಿಲೀಕ್ಸ್ ಇದೀಗ ತೀವ್ರ ಹಣಕಾಸಿನ ಕೊರತೆ ಎದುರಿಸುತ್ತಿದೆ. ಸಂಸ್ಥಾಪಕ ಜುಲಿಯನ್ ಅಸಾಂಜ್ ಬಂಧನದ ನಂತರ ಎದುರಾಗಿರುವ ಆರ್ಥಿಕ ಮುಗ್ಗಟ್ಟಿಗೆ ಹೊಸ ಪರಿಹಾರ ಕಂಡುಕೊಂಡಿರುವ ವಿಕಿಲೀಕ್ಸ್ ಇದೀಗ ಆನ್‌ಲೈನ್ ಮೂಲಕ ದೇಣಿಗೆ ಸಂಗ್ರಹಿಸಲು ಮುಂದಾಗಿದೆ.

 ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕಾಗಿ  ಆನ್‌ಲೈನ್ ಮಾರಾಟ ಮಳಿಗೆ ಆರಂಭಿಸಿರುವ ವಿಕಿಲೀಕ್ಸ್, ಟಿ-ಶರ್ಟ್ಸ್, ಕಾಫಿ ಮಗ್, ಲ್ಯಾಪ್‌ಟಾಪ್, ಐಪಾಡ್, ಕೊಡೆ, ಬೇಸ್‌ಬಾಲ್ ಟೊಪ್ಪಿಗೆ, ಚೀಲಗಳಿಗೆ ಅಂಟಿಸುವ  ಸ್ಟಿಕರ್, ಟೆಡ್ಡಿಬೇರ್, ಇತ್ಯಾದಿ ವಸ್ತುಗಳ ಮಾರಾಟಕ್ಕೆ ತೊಡಗಿದೆ.

ಉಪವಾಸ ಸತ್ಯಾಗ್ರಹ ಬೆದರಿಕೆ: ಅಲ್ಲಗಳೆದ ಅಮೆರಿಕ
ಇಸ್ಲಾಮಾಬಾದ್/ ಲಾಹೋರ್ (ಪಿಟಿಐ):  ರಾಜತಾಂತ್ರಿಕ ವಿನಾಯಿತಿ ಸೇರಿದಂತೆ ತನ್ನ ವಿವಿಧ ಬೇಡಿಕೆಗಳ ಕುರಿತು ಶೀಘ್ರವಾಗಿ ನಿರ್ಧಾರ ಕೈಗೊಳ್ಳದೇ ಹೋದರೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಇಬ್ಬರು ಪಾಕ್ ಪ್ರಜೆಗಳನ್ನು ಗುಂಡಿಟ್ಟು ಹತ್ಯೆ ಮಾಡಿರುವ ಅಮೆರಿಕದ ಅಧಿಕಾರಿ ರೇಮಂಡ್ ಡೇವಿಸ್ ಬೆದರಿಸಿದ್ದಾನೆ ಎಂಬ ವರದಿಗಳನ್ನು ಅಮೆರಿಕ ಬುಧವಾರ ಅಲ್ಲಗಳೆದಿದೆ.

 ‘ಇದೊಂದು ಸುಳ್ಳು ವರದಿ’ ಎಂದು ಅಮೆರಿಕ ರಾಯಭಾರಿ ಕಚೇರಿ ವಕ್ತಾರ ಕರ್ಟ್ನಿ ಬೀಲ್ ಹೇಳಿದ್ದಾರೆ.
 ಆತ ಬಿಗಿ ಭದ್ರತೆ ಹೊಂದಿರುವ ಕೋಟ್ ಲೋಕಪಥ್ ಜೈಲಿನಲ್ಲಿ ಬಂಧಿಯಾಗಿರುವ ಡೇವಿಸ್, ತನ್ನ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಸುತ್ತಿದ್ದಾನೆ ಎಂದು ಪಾಕಿಸ್ತಾನದ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT