ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಾಪಕರ ಬೇಡಿಕೆ ಈಡೇರಿಸಲು ಆಗ್ರಹ

ದಂಪತಿ ಸಾವಿಗೆ ಪ್ರತಿಭಟನೆ:
Last Updated 25 ಸೆಪ್ಟೆಂಬರ್ 2013, 10:18 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನ ಬೀರೂರು ಪಟ್ಟಣದಲ್ಲಿ ಸೋಮವಾರ ಆತ್ಮಹತ್ಯೆಗೆ ಶರಣಾದ ಮಧುಸೂದನ್‌ ದಂಪತಿ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದ್ದು, ಪರಿಹಾರ ನೀಡಬೇಕು ಹಾಗೂ ಭೂಮಾಪಕರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ಪರವಾನಗಿ ಹೊಂದಿದ ಭೂಮಾ ಪಕರ ಸಂಘದ ಸದಸ್ಯರು ಮತ್್ತು ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾ ರರು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಸವೇಶ್ವರ ವೃತ್ತದಿಂದ ಮರವಂಜಿ ವೃತ್ತ ಮತ್ತು ಜೈನ್‌ ಟೆಂಪಲ್‌ ರಸ್ತೆ ಮೂಲಕ ಸಾಗಿಬಂದ ಪ್ರತಿಭಟ ನಾಕಾರರು ತಹಶೀಲ್ದಾರ್‌ ಕಚೇರಿ ಬಳಿ ಬಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ರಾಜ್ಯ ಪರವಾನಗಿ ಹೊಂದಿದ ಭೂಮಾ ಪಕರ ಸಂಘದ ಅಧ್ಯಕ್ಷ ಸಂಶಿ ವಿರೂಪಾಕ್ಷ ಮಾತನಾಡಿ, ಮೂರು ತಿಂಗಳಿನಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯು ತ್ತಿದ್ದರೂ ಅತ್ತ ತಲೆ ಹಾಕದ ಸರ್ಕಾರದ ಬೇಜವಾಬ್ದಾರಿಯೇ ಮಧುಸೂದನ್‌ ದಂಪತಿ ಸಾವಿಗೆ ಕಾರಣವಾಗಿದ್ದು, ಈ ಅನಾಹುತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.

ಮನವಿ ಸಲಿ್ಲಿಸುವ ವೇಳೆಗೆ ಸ್ಥಳಕ್ಕೆ ಬಂದ ತರೀಕೆರೆ ಉಪವಿಭಾಗಾಧಿಕಾರಿ ಜಿ. ಅನುರಾಧಾ, ಈ ಕುರಿತು ಸಂಪೂರ್ಣ ವರದಿಯನ್ನು ರಾಜ್ ಯಸರ್ಕಾರಕ್ಕೆ ಸಲ್ಲಿಸುವುದಾಗಿಯೂ ಮಗುವಿಗೆ ಸರ್ಕಾರದಿಂದ ಸಿಗಬಹುದಾದ ಪರಿಹಾರ ಒದಗಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಶಾರದಾಂಬಾ ಇದಕ್್ಕೆ ಸಹಮತ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳದಲ್ಲಿಯೇ ರಾಜ್ಯ ಸಂಘದ ಪರವಾಗಿ ಮಧುಸೂದನ್‌ ದಂಪತಿಯ ಮಗುವಿಗೆ 1ಲಕ್ಷ ರೂ ಧನಸಹಾಯ ನೀಡಲಾ ಯಿತು. ಕಂದಾಯ ಇಲಾಖೆ ವತಿಯಿಂದ ಮಗುವಿಗೆ ಸಹಾಯ ಒದಗಿಸುವ ಭರವಸೆ ನೀಡಿದ ತಹಶೀಲ್ದಾರರು ಪರಿ ಹಾರ ನಿಧಿಯಿಂದ ₨20 ಸಾವಿರ ಕೊಡಿ ಸಲು ಆದೇಶಿಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಬಿ.ಆರ್‌.ಕುಮಾರಸ್ವಾಮಿ, ರಾಜ್ಯ ಕಾರ್ಯದರ್ಶಿ ಕೆ.ಬಿ.ಲೋಕೇಶ್‌, ಅಶೋಕ್‌ ಸೇರಿದಂತೆ ನೂರಾರು  ಭೂಮಾಪಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT