ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಕಳೆದುಕೊಂಡ ರೈತರಿಗೆ ಮತ್ತೆ ಆಘಾತ

Last Updated 14 ಫೆಬ್ರುವರಿ 2012, 10:15 IST
ಅಕ್ಷರ ಗಾತ್ರ

ಬನಹಟ್ಟಿ: ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಆಣೆಕಟ್ಟು ಯೋಜನೆಯ ಹಿನ್ನೀರಿನಿಂದಾಗಿ  ಕೃಷಿ ಭೂಮಿಯನ್ನು ಕಳೆದುಕೊಂಡ ರೈತರು ಈಗ ಮತ್ತೊಮ್ಮೆ ತೊಂದರೆ ಅನುಭವಿಸುವಂತಾಗಿದೆ.

ಹಿಪ್ಪರಗಿ ಆಣೆಕಟ್ಟೆಯಲ್ಲಿ ನೀರು ನಿಲ್ಲಿಸುವುದರಿಂದ ಅಸ್ಕಿ ಗ್ರಾಮವು ಸಂಪೂರ್ಣವಾಗಿ ಜಲಾವೃತಗೊಳ್ಳಲಿದೆ ಎನ್ನುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

  ಸರ್ವೆ ನಂ.87ರಿಂದ 91ರವರೆಗೆ  ಪರಿಶಿಷ್ಟ ಜಾತಿ ಮತ್ತು ಜನಾಂಗ ಸಮುದಾಯದ, ಚಿಕ್ಕ ಹಿಡುವಳಿದಾರರ ಹಾಗೂ ತೀವ್ರ ಸಾಲದ ಭಾದೆಯಿಂದ ನರಳುತ್ತಿರುವ ರೈತರ ಜಮೀನುಗಳೇ ಇವೆ. ಸರ್ಕಾರ ಇದನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜಮಖಂಡಿ-ಕುಡಚಿ ರಸ್ತೆಯ ಬದಿಗೆ ಬನಹಟ್ಟಿ ನಗರಕ್ಕೆ ಹೊಂದಿಕೊಂಡಿರುವ ಸುಮಾರು 120 ಎಕರೆಗಳಷ್ಟು ಭೂಮಿಯು ಸಂಪೂರ್ಣ ನೀರಾವರಿಯಾಗಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಫಲವತ್ತಾದ ಭೂಮಿಯನ್ನು ಖುಷ್ಕಿ ಭೂಪ್ರದೇಶವೆಂದು ಪರಿಗಣಿಸಿ  ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು  ಡಾ.ಪ್ರಭು ಶಿರಹಟ್ಟಿ, ಡಾ.ಸದಾಶಿವ ಸಜ್ಜನ, ಎಸ್.ಕೆ.ಭದ್ರನ್ನವರ ಹಾಗೂ  ವೀರೇಶ ಭದ್ರನ್ನವರ ದೂರುತ್ತಾರೆ.

ಈ ಪ್ರದೇಶದಲ್ಲಿಯೇ ಸರ್ಕಾರದ ಜಮೀನು ಇದೆ. ಅದನ್ನು ಬಿಟ್ಟು ಖಾಸಗಿ ಜಮೀನನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ.

ಆಸಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮದನಮಟ್ಟಿ ಸರ್ವೆ ನಂ. 27/2ರಲ್ಲಿ 204 ಎಕರೆ, ಹಳಿಂಗಳಿ ರಿಸನಂ: 73/ಎ/2/1ಬಿಯಲ್ಲಿ 132 ಎಕರೆ, ಹನಗಂಡಿ ಗ್ರಾಮದ ರಿ.ಸ್.ನಂ: 13 ರಲ್ಲಿ 240 ಎಕರೆ, ರಿಸ್‌ನಂ123 ರಲ್ಲಿ 268 ಎಕರೆ ಹಾಗೂ ರಿಸ್‌ನಂ: 130ರಲ್ಲಿ 554 ಎಕರೆಗಳಷ್ಟು ಸರ್ಕಾರಕ್ಕೆ ಸಂಬಂಧಿಸಿದ ಪ್ರದೇಶದಲ್ಲಿ ಗ್ರಾಮ ಸ್ಥಳಾಂತರಕ್ಕೆ ಜಾಗ ಒದಗಿಸಬೇಕು  ಎಂದು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT